5.21

बाह्यस्पर्शेष्वसक्तात्मा विन्दत्यात्मनि यत्सुखम् ।
स ब्रह्मयोगयुक्तात्मा सुखमक्षयमश्नुते ॥
bāhyasparśeṣvasaktātmā vindatyātmani yatsukham |
sa brahmayogayuktātmā sukhamakṣayamaśnute ||
Swami Sivananda (1887–1963)Bhagavad Gita
21. With the self unattached to the external contacts he discovers happiness in the Self; with the self engaged in the meditation of Brahman he attains to the endless happiness.
Sri Vishwesha Tirtharu (1931–2019)Gitasaroddhara
5.21–5.22 · ಆಧ್ಯಾತ್ಮಿಕ ಸುಖದ ವೈಶಿಷ್ಟ್ಯ
ಆಧ್ಯಾತ್ಮಿಕ ಸುಖದ ವೈಶಿಷ್ಟ್ಯ ಆತ್ಮದರ್ಶನದಿಂದ ದೊರೆಯುವ ಈ ದಿವ್ಯ ಆನಂದವು, ಜೀವನದಲ್ಲಿ ನಾವು ಪಡೆಯಬಹುದಾದ ಉಳಿದಎಲ್ಲ ಸುಖಗಳಿಗಿಂತ ಶ್ರೇಷ್ಠವೂ ಪವಿತ್ರವೂ ಆಗಿದೆ. ಸಾಂಸಾರಿಕ ಸುಖಭೋಗದಿಂದ ನಮಗೆ ದೊರೆಯುವ ಅಲ್ಪಸುಖಕ್ಕಿಂತ ಮಿಗಿಲಾದ ಪವಿತ್ರವಾದ ಸಾತ್ತ್ವಿಕಾನಂದವನ್ನು ಭೋಗಪದಾರ್ಥಗಳ ತ್ಯಾಗದಿಂದ ನಾವು ಪಡೆಯಬಲ್ಲೆವು. ಭೋಗದ ಆನಂದಕ್ಕಿಂತಲೂ ತ್ಯಾಗದ ಆನಂದದ ಸವಿಯೇ ಹೆಚ್ಚು. ನಮ್ಮ ಪದಾರ್ಥಗಳನ್ನು ಭೋಗಿಸುವುದರಲ್ಲಿ ಸಹಜವಾಗಿ ನಾವು ಸುಖವನ್ನು ಅನುಭವಿಸುತ್ತೇವೆ. ಇದು ಪ್ರಾಕೃತಿಕವಾದ, ಸಾಮಾನ್ಯ ಜನರು ಪಡೆಯುವ ಸುಖ. ಇನ್ನು, ಮತ್ತೊಬ್ಬರ ವಸ್ತುಗಳನ್ನು ಕಸಿದು ತಾನು ಪಡೆಯುವ ಸುಖವು ವಿಕೃತವಾದ ತಾಮಸ ಸುಖವೆನಿಸುವುದು. ತನ್ನ ಲಾಲಸೆಯನ್ನು ಹತ್ತಿಕ್ಕಿತನ್ನ ಪ್ರೀತಿಯ ವಸ್ತುಗಳನ್ನೇ ಮತ್ತೊಬ್ಬರಿಗೆನೀಡಿತಾನು ಪಡೆಯುವ ಆನಂದವೇ ನಿಜವಾದ ಸುಸಂಸ್ಕೃತವಾದ ಸಾತ್ತ್ವಿಕ ಆನಂದವೆನಿಸುವುದು. ನಮ್ಮ ಮೂಲಭೂತವಾದ ಚೈತನ್ಯರೂಪಿ ಆನಂದವನ್ನೇ ನಾವು ತ್ಯಾಗದ ಆನಂದದಲ್ಲಿ ಕಾಣುವೆವೆಂದು ಶ್ರೀಮದಾಚಾರ್ಯರು ಅಪ್ಪಣೆ ಕೊಡಿಸಿದ್ದಾರೆ. ಹೀಗೆ ಪ್ರಾಕೃತಿಕ ಭೋಗಕ್ಕಿಂತ ಶ್ರೇಷ್ಠವಾದ ಸ್ವರೂಪಸುಖವನ್ನು ವೈಷಯಿಕ ಪದಾರ್ಥಗಳ ಹಾಗೂ ಆಂತರಿಕ ಕಾಮನೆಯ ತ್ಯಾಗದಲ್ಲಿ ತಾನು ಅನುಭವಿಸಬಹುದಾದರೂ ಅದು ಸ್ಥಿರವಾಗಿ ನಮ್ಮಲ್ಲಿ ನೆಲೆನಿಲ್ಲಲು ಪರಮಾತ್ಮನ ಧ್ಯಾನದ ಆಸರೆಯು ಅವಶ್ಯಕವಾಗಿದೆ. ತ್ಯಾಗದಿಂದ ತಾತ್ಕಾಲಿಕವಾದ ಸಾತ್ತ್ವಿಕ ಆನಂದವು ದೊರಕಬಹುದಾದರೂ ಧ್ಯಾನಯೋಗದಲ್ಲಿ ಪರಮಾತ್ಮನಲ್ಲಿ ನಮ್ಮ ಬುದ್ಧಿಯನ್ನು ಕೇಂದ್ರೀಕರಿಸುವುದರಿಂದ ಸ್ಥಿರವಾದ ಅಕ್ಷಯವಾದ ಆನಂದವು ದೊರಕುವುದು. ಆದುದರಿಂದತ್ಯಾಗಯೋಗಗಳ ಸಮನ್ವಯದಿಂದರೇ ಶಾಶ್ವತ ಸುಖಾನುಭವವನ್ನು ನಾವು ಹೊಂದಬಲ್ಲಿವು. ವಿಷಯ ಸಂಪರ್ಕ ದಿಂದ ಪಡೆಯುವ ಸುಖ ಹಾಗೂ ತ್ಯಾಗ, ಧ್ಯಾನಾ ದಿಗಳಿಂದ ಪಡೆಯುವ ಆತ್ಮಾನಂದ ಇವುಗಳಿಗೆ ಬಹಳ ಅಂತರವಿದೆ. ಭೌತಿಕ ಸುಖವನ್ನು ಪಡೆಯುವಾಗ ದರಲ್ಲಿ ಬಹಳ ಆತುರತೆ, ಆಸಕ್ತಿಗಳು ಮೂಡುವವು. ಅದನ್ನು ಪಡೆಯಲು ನಮ್ಮ ಮನಸ್ಸು ಅತಿಯಾಗಿ ಚಡಪಡಿಸುತ್ತದೆ. ಇದೆಲ್ಲ ಲವಲವಿಕೆ ಅದನ್ನು ಪಡೆಯುವವರೆಗೆ ಮಾತ್ರ. ಪಡೆದಮೇಲೆ ಅದರಲ್ಲಿ ಅಷ್ಟೇ ಜಿಗುಪ್ಸೆ ತಿರಸ್ಕಾರಬುದ್ಧಿ ಉಂಟಾಗುತ್ತದೆ. ಆರಂಭದಲ್ಲಿ ತಾತ್ಕಾಲಿಕ ಸುಖವು ದೊರೆತರೂ ವಿಷಯಪದಾರ್ಥಗಳ ಸೇವನೆಯು ದುಃಖ, ಜಿಗುಪ್ಸೆಗಳನ್ನೇ ಮುಂದೆ ನಿರ್ಮಿಸು ವುದು. ಕಜ್ಜಿ ತುರಿಸುವಾಗತಾತ್ಯಾಲಿಕವಾಗಿ ದೊರೆಯುವತಾಮಸ ಆನಂದದಂತೆ ಈ ವೈಷಯಿಕ ಸುಖ ಇದೆ. ಕಜ್ಜಿ ತುರಿಸಿದ ನಂತರ ಆಗುವ ಕ್ಲೇಶವಿಕಾರದಂತೆ ಭೌತಿಕ ಸುಖವನ್ನು ಅನುಭವಿಸಿದ ನಂತರದ ಪಾಡೂ ಶೋಚನೀಯವೇ ಆಗುವುದು. ಕಂಡೂಯನೇನ ಕರಯೋರಿವ ದುಃಖದುಃಖಂ | -ಭಾಗವತ ಆಧ್ಯಾಕ್ಮಿಕ ಸುಖದ ಸ್ಥಿತಿಯು ಇದಕ್ಕಿಂತ ತೀರ ವ್ಯತಿರಿಕ್ತವಾಗಿದೆ. ಈ ಸುಖವನ್ನು ಪಡೆಯುವ ಮೊದಲು ಇದಕ್ಕಾಗಿ ತ್ಯಾಗ, ತಪಸ್ಸು ಕ್ಲೇಶಗಳ ಆವಶ್ಯಕತೆಯು ಬಹಳ ಶ್ರಮವೆನಿಸಬಹುದಾದರೂ ಈ ಆಧ್ಯಾತ್ಮಿಕ ಸಾಧನೆಯ ನಂತರನಾವುಪಡೆಯಬಹುದಾದ ತೃಪ್ತಿ ಆನಂದಗಳು ಅನುಪಮವಾದವು. ಆ ಪವಿತ್ರವಾದ ಸಾತ್ತ್ವಿಕ ಆನಂದದ ಮುಂದೆ ಪ್ರಪಂಚದ ಮಿಕ್ಕ ಸಮಸ್ತ ಭೋಗ್ಯಿಶ್ವರ್ಯಗಳ ಆನಂದವುತುಚ್ಛಹಾಗೂಕೃತ್ರಿಮವೆನಿಸುವುದು. ಪ್ರಾರಂಭ ದಲ್ಲಿ ಕಷ್ಟ ಅನಾಸ್ಥೆಗಳಿಗೆ ಅವಕಾಶವಿದ್ದರೂ ಪರಿಣಾಮದಲ್ಲಿನಮಗೆ ಪೂರ್ಣ ತೆಯ ಅನುಭವವನ್ನು ನೀಡಬಲ್ಲ ಈ ಆಧ್ಯಾತ್ಮಿಕ ಸಿದ್ಧಿಗಾಗಿ ಪ್ರಯತ್ನಿಸುವುದೇ ನಮ್ಮ ಜೀವನದಮುಖ್ಯಸಾಧನೆಯಾಗಿರಬೇಕು. ಈವಿಚಾರಗಳನ್ನು- ಬಾಹ್ಯಸ್ಫರ್ಶೇಷ್ಟಸಕ್ತಾತ್ಮಾ ವಿಂದತ್ಯಾತ್ಮನಿ ಯತ್‌ ಸುಖಂ। ಸ ಬ್ರಹ್ಮಯೋಗಯುಕ್ತಾತ್ಮಾ ಸುಖಮಕ್ಷಯಮತ್ನುತೇ । ಯೇ ಹಿ ಸಂಸ್ಪರ್ಶಜಾ ಭೋಗಾ ದುಃಖಯೋನಯ ಏವತೇ। ಮುಂತಾದಶ್ಲೋಕಗಳಲ್ಲಿವಿವರಿಸಲಾಗಿದೆ. ಹೀಗೆ ಜೀವನದಲ್ಲಿ ತಾನು ತ್ಯಾಗ ಮತ್ತು ಕರ್ಮಯೋಗ ಇವೆರಡನ್ನೂ ಅಳವಡಿಸಿಕೊಂಡು ಧ್ಯಾನದ ಮಾರ್ಗದಲ್ಲಿ ಮುನ್ನಡೆದು ಸ್ಥಿರವಾದ ಆತ್ಮಿಕ ಆನಂದವನ್ನು. ಪಡೆಯಬೇಕೆನ್ನುವುದನ್ನು ಐದನೆಯ ಅಧ್ಯಾಯದಲ್ಲಿ ಸಮರ್ಥಿಸಲಾಗಿದೆ.
Bannanje Govindacharya (1936–2020)Bhagavad Gita Pravachana
WBE TER) ಅಸಕ್ತ ಆತ್ಮಾ ವಿಂದತಿ ಆತ್ಮನಿ ಯತ್‌ ಸುಖಮ್‌ | ಸಃ ಬ್ರಹ್ಮಯೋಗ ಯುಕ್ತ ಆತ್ಮಾ ಸುಖಮ್‌ ಅಕ್ಷಯಮ್‌ ಅಶ್ನುತೇ- ಹೊರಗಣ ಭೋಗಗಳಲ್ಲಿ ನಂಟು ಇರದವನು ಬಗೆಯೊಳಗೆ [ಭಗವಂತನನ್ನು ನೆನೆದಾಗೊಮ್ಮೆ] ಎಂತಹ ಸುಖವನ್ನು ಪಡೆಯುತ್ತಾನೋ ಅದೇ ಸುಖವನ್ನು ಸದಾ ಭಗವಂತನಲ್ಲಿ ಬಗೆನೆಟ್ಟ ಸಾಧಕ ನಿರಂತರ ಸವಿಯುತ್ತಾನೆ. ಪ್ರಪಂಚದಲ್ಲಿ ಸುಖಕ್ಕೆ ಇರುವ ಸಾಧನ ಐದು. ರೂಪ, ರಸ, ಗಂಧ, ಸ್ಪರ್ಶ, ಶಬ್ದ. ಇದರ ಮುಖೇನ ಅನುಭವಿಸುವುದು ತಪ್ಪಲ್ಲ. ಬೇಕು ಅನ್ನುವ ವಸ್ತುವನ್ನು ಪಡೆಯುವುದರಲ್ಲಿ ಆನಂದವಿದೆ, ಆದರೆ ಅದಕ್ಕಿಂತ ಮುಖ್ಯವಾಗಿ ಅದನ್ನು ತೊರೆಯುವುದರಲ್ಲಿ ಹೆಚ್ಚಿನ ಆನಂದವಿದೆ. ಇದು ತಿಳಿದಾಗ ಬದುಕಿನ ಒಂದು ಮುಖ್ಯ ಸೂತ್ರ ತಿಳಿದಂತೆ. ನಾವು ಬದುಕುವ ರೀತಿ ಎಂದರೆ 'ನಾಳಿನ ಸುಖಕ್ಕಾಗಿ ಇಂದು ಕಷ್ಟಪಡುವುದು'. ಅಂದರೆ ಆ ನಾಳೆ ಎಂದೂ ಬರುವುದಿಲ್ಲ. ಸಾಯುವ ತನಕ ನಾಳೆಗಾಗಿ ಕಷ್ಟಪಡುವುದು ನಮ್ಮ ಜೀವನವಾಗಬಾರದು. ಭಗವಂತನನ್ನು ಪಡೆಯುವುದರಲ್ಲಿ ಮಹದಾನಂದವಿದೆ, ಹಾಗೂ ಅದು ನಮ್ಮನ್ನು ಸದಾ ಸುಖವಾಗಿಡುತ್ತದೆ ಎನ್ನುವ ಸತ್ಯವನ್ನು ಕೃಷ್ಣ ಇಲ್ಲಿ ವಿವರಿಸಿದ್ದಾನೆ. ಒಮ್ಮೆ ನಾವು ನಮ್ಮ ಅಂತರಂಗದ ಆತ್ಮಸ್ವರೂಪದ ಸುಖವನ್ನು ಅನುಭವಿಸಲು ಪ್ರಾರಂಭಿಸಿದರೆ, ಬಾಹ್ಯ ಸುಖದಲ್ಲಿ ಏನೂ ಇಲ್ಲ ಎನ್ನುವ ವಿಚಾರ ತಿಳಿಯುತ್ತದೆ. ನಮ್ಮೊಳಗೇ ಆನಂದ ಅಡಗಿದೆ, ಅದು ಬಾಹ್ಯ ಸುಖದ ತ್ಯಾಗದಿಂದ ಕಾಣಬಹುದಾದ ಆನಂದ. ನಮಗೆ ನಮ್ಮ ಒಳಗಿರುವ ಆನಂದ ಕೆಲವೊಮ್ಮೆ ಅನುಭವಕ್ಕೆ ಬರುತ್ತದೆ. ಒಮ್ಮೊಮ್ಮೆ “ಅದೇಕೋ ಗೊತ್ತಿಲ್ಲ ಆದರೆ ಬಹಳ ಖುಷಿ' ಎನ್ನುವ ಅನುಭವ ಪ್ರತಿಯೊಬ್ಬರೂ ಅನುಭವಿಸಿರುತ್ತಾರೆ. ಇದು ನಮ್ಮ ಅಂತರಂಗದ ಆನಂದ ಉಕ್ಕಿ ಬರುವುದು. ಈ ಆನಂದವನ್ನು ಗುರುತಿಸಿ ಅದನ್ನು ಅನುಭವಿಸಲು ಕಲಿತಾಗ ಬಾಹ್ಯ ಸುಖ ಕನಿಷ್ಠವಾಗಿ ಕಾಣಿಸುತ್ತದೆ. ಹೇಗೆ ನಿದ್ದೆಯಲ್ಲಿ ನಾವು ಬಾಹ್ಯ ಸುಖದ ಸ್ಪರ್ಶವಿಲ್ಲದೇ ನಮಗರಿವಿಲ್ಲದಂತೆ ಆನಂದದಲ್ಲಿರುತ್ತೇವೋ ಹಾಗೇ ಎಚ್ಚರದಲ್ಲಿ ಅಂತರಂಗದ ಆನಂದವನ್ನು ಅನುಭವಿಸಲು ಕಲಿತುಕೊಳ್ಳಬೇಕು. ಇದರಿಂದ ಬಾಹ್ಯ ಸುಖದ ಪ್ರಜ್ಞೆ ದೂರವಾಗುತ್ತದೆ. ಉಪನಿಷತ್ತಿನಲ್ಲಿ ಹೇಳುವಂತೆ “ಬಾಹ್ಯ ಸುಖವನ್ನು ತ್ಯಾಗ ಮಾಡುವುದರಿಂದ, ಒಳಗಿನ ಆನಂದದ ಅರಿವು ಮೂಡುತ್ತದೆ ಹಾಗೂ ಇದರಲ್ಲಿ ಅಮೃತತ್ವವಿದೆ”. ನಾವು Wed ಎನ್ನುವುದರಲ್ಲಿ ಇರುವ ಆನಂದ 'ಬೇಕು' ಅನ್ನುವುದರಲ್ಲಿಲ್ಲ. ಬೇಕು ಎನ್ನುವುದು ಸದಾ ನಮಗೆ 'ಬೇಡಿ(ಸಂಕೋಲೆ)'. ಬೇಕು ಅನ್ನುವುದು ನಮ್ಮ ಮುಂದೆ ಸಮಸ್ಯೆಗಳ ಸರಮಾಲೆಯನ್ನು ತಂದು ನಿಲ್ಲಿಸುತ್ತದೆ. “ಎಲ್ಲಾ ಬಾಹ್ಯ ಬಯಕೆಗಳನ್ನು ಕಳೆದುಕೊಳ್ಳುವುದರಲ್ಲೇ ಮನುಷ್ಯನ ಆನಂದದ ಸೆಲೆ ಅಡಗಿದೆ” ಎನ್ನುತ್ತಾನೆ ಕೃಷ್ಣ. ಬೇಕುಗಳು ಕಮ್ಮಿ ಆದಂತೆ ಮನುಷ್ಯ ಆನಂದದಿಂದ ಬದುಕುತ್ತಾನೆ. ಕೇವಲ ಬಾಹ್ಯ ಸುಖವನ್ನು ಬಿಡುವುದಷ್ಟೇ ಅಲ್ಲ, ಅದರ ಜೊತೆಗೆ ಒಳಗಿನ ಆನಂದವನ್ನು ಹಿಡಿಯಬೇಕು. ಅದು ಅನಂತವಾದ ಆನಂದ. ಕೃಷ್ಣ ಹೇಳುತ್ತಾನೆ: “ಬ್ರಹ್ಮಯೋಗಯುಕ್ತಾತ್ಮಾ ಸುಖಮಕ್ಷಯಮಶ್ನುತೇ” ಎಂದು. ಭಗವಂತನ ಧ್ಯಾನದಲ್ಲಿ ಒಳಗಿನಿಂದ ಆನಂದದ ಅನುಭವವಾಗುತ್ತದೆ- ಅದನ್ನು ಒಬ್ಬ ಸಾಧಕ ಪಡೆಯುತ್ತಾನೆ. ಅಂತರಂಗದಲ್ಲಿ ಭಗವದ್‌ ಸ್ಪರ್ಶವಾಗಿ ಅದರಿಂದ ಅನಂತ ಸುಖವನ್ನು ಸಾಧಕ ನಿರಂತರ ಸವಿಯುತ್ತಾನೆ. ಸುಖ ಎನ್ನುವುದು ನಮ್ಮೊಳಗೇ ಇದೆ. ಇದೊಂದು ಮಾನಸಿಕ ಸ್ಥಿತಿ. ನಾವು ನಮ್ಮೊಳಗಿನ ಸುಖವನ್ನು ಗುರುತಿಸದೆ ಬಾಹ್ಯ ಸುಖದ ಬೆನ್ನು ಹತ್ತಿ ಕಷ್ಟ ಪಡುತ್ತೇವೆ. ಜಾನಪದ ಕಥೆಯೊಂದು ಹೀಗೆ ಹೇಳುತ್ತದೆ. ಒಬ್ಬ ಮುದುಕಿ ತನ್ನ ಮನೆಯಲ್ಲಿ ರಾತ್ರಿ ಹೊತ್ತು ಸ್ವಲ್ಪ ಹಣವನ್ನು ಕೆಳಗೆ ಬೀಳಿಸಿಕೊಳ್ಳುತ್ತಾಳೆ. ಆದರೆ ಆಕೆಯ ಮನೆಯಲ್ಲಿ ದೀಪ ಹಚ್ಚಲು ಎಣ್ಣೆ ಇರುವುದಿಲ್ಲ. ಬೀದಿಯಲ್ಲಿ ಬೀದಿದೀಪದ ಬೆಳಕನ್ನು ಕಂಡ ಮುದುಕಿ ಬೀದಿಯಲ್ಲಿ ಬಂದು ತಾನು ಮನೆಯಲ್ಲಿ ಬೀಳಿಸಿಕೊಂಡ ಹಣವನ್ನು ಹುಡುಕುತ್ತಿರುತ್ತಾಳೆ. ಏಕೆ ಹೀಗೆ ಎಂದು ಕೇಳಿದಾಗ “ಮನೆಯಲ್ಲಿ ಬೆಳಕಿಲ್ಲ ಆದರೆ ಇಲ್ಲಿ ಬೆಳಕಿದೆ ಅದಕ್ಕಾಗಿ ಇಲ್ಲಿ ಹುಡುಕುತ್ತಿದ್ದೇನೆ” ಎನ್ನುವುದು ಆ ಮುದುಕಿಯ ಉತ್ತರ! ನಾವೆಲ್ಲರೂ ಹೀಗೇ. ನಿಜವಾದ ಆನಂದ ಇರುವುದು ಅಂತರಂಗದಲ್ಲಿ, ಆದರೆ ನಾವು ಸುಖವನ್ನು ಅರಸುವುದು ಹೊರಪ್ರಪಂಚದಲ್ಲಿ!
Bibek Debroy (1955–2024)The Bhagavad Gita
‘Established in the brahman, such a person learned in the brahman, is poised in intellect and without delusion, not delighted at receiving something pleasant, or agitated at receiving something unpleasant.’ (21) ‘Unattached to external objects, his mind focused on the brahman, he obtains the happiness that vests in the atman. He enjoys eternal bliss.’