5.22

ये हि संस्पर्शजा भोगा दुःखयोनय एव ते ।
आद्यन्तवन्तः कौन्तेय न तेषु रमते बुधः ॥
ye hi saṃsparśajā bhogā duḥkhayonaya eva te |
ādyantavantaḥ kaunteya na teṣu ramate budhaḥ ||
Swami Sivananda (1887–1963)Bhagavad Gita
22. The enjoyments that are born of contacts are generators of pain only, for they have a beginning and an end, O Arjuna! The wise do not rejoice in them.
Sri Vishwesha Tirtharu (1931–2019)Gitasaroddhara
5.21–5.22 · ಆಧ್ಯಾತ್ಮಿಕ ಸುಖದ ವೈಶಿಷ್ಟ್ಯ
ಆಧ್ಯಾತ್ಮಿಕ ಸುಖದ ವೈಶಿಷ್ಟ್ಯ ಆತ್ಮದರ್ಶನದಿಂದ ದೊರೆಯುವ ಈ ದಿವ್ಯ ಆನಂದವು, ಜೀವನದಲ್ಲಿ ನಾವು ಪಡೆಯಬಹುದಾದ ಉಳಿದಎಲ್ಲ ಸುಖಗಳಿಗಿಂತ ಶ್ರೇಷ್ಠವೂ ಪವಿತ್ರವೂ ಆಗಿದೆ. ಸಾಂಸಾರಿಕ ಸುಖಭೋಗದಿಂದ ನಮಗೆ ದೊರೆಯುವ ಅಲ್ಪಸುಖಕ್ಕಿಂತ ಮಿಗಿಲಾದ ಪವಿತ್ರವಾದ ಸಾತ್ತ್ವಿಕಾನಂದವನ್ನು ಭೋಗಪದಾರ್ಥಗಳ ತ್ಯಾಗದಿಂದ ನಾವು ಪಡೆಯಬಲ್ಲೆವು. ಭೋಗದ ಆನಂದಕ್ಕಿಂತಲೂ ತ್ಯಾಗದ ಆನಂದದ ಸವಿಯೇ ಹೆಚ್ಚು. ನಮ್ಮ ಪದಾರ್ಥಗಳನ್ನು ಭೋಗಿಸುವುದರಲ್ಲಿ ಸಹಜವಾಗಿ ನಾವು ಸುಖವನ್ನು ಅನುಭವಿಸುತ್ತೇವೆ. ಇದು ಪ್ರಾಕೃತಿಕವಾದ, ಸಾಮಾನ್ಯ ಜನರು ಪಡೆಯುವ ಸುಖ. ಇನ್ನು, ಮತ್ತೊಬ್ಬರ ವಸ್ತುಗಳನ್ನು ಕಸಿದು ತಾನು ಪಡೆಯುವ ಸುಖವು ವಿಕೃತವಾದ ತಾಮಸ ಸುಖವೆನಿಸುವುದು. ತನ್ನ ಲಾಲಸೆಯನ್ನು ಹತ್ತಿಕ್ಕಿತನ್ನ ಪ್ರೀತಿಯ ವಸ್ತುಗಳನ್ನೇ ಮತ್ತೊಬ್ಬರಿಗೆನೀಡಿತಾನು ಪಡೆಯುವ ಆನಂದವೇ ನಿಜವಾದ ಸುಸಂಸ್ಕೃತವಾದ ಸಾತ್ತ್ವಿಕ ಆನಂದವೆನಿಸುವುದು. ನಮ್ಮ ಮೂಲಭೂತವಾದ ಚೈತನ್ಯರೂಪಿ ಆನಂದವನ್ನೇ ನಾವು ತ್ಯಾಗದ ಆನಂದದಲ್ಲಿ ಕಾಣುವೆವೆಂದು ಶ್ರೀಮದಾಚಾರ್ಯರು ಅಪ್ಪಣೆ ಕೊಡಿಸಿದ್ದಾರೆ. ಹೀಗೆ ಪ್ರಾಕೃತಿಕ ಭೋಗಕ್ಕಿಂತ ಶ್ರೇಷ್ಠವಾದ ಸ್ವರೂಪಸುಖವನ್ನು ವೈಷಯಿಕ ಪದಾರ್ಥಗಳ ಹಾಗೂ ಆಂತರಿಕ ಕಾಮನೆಯ ತ್ಯಾಗದಲ್ಲಿ ತಾನು ಅನುಭವಿಸಬಹುದಾದರೂ ಅದು ಸ್ಥಿರವಾಗಿ ನಮ್ಮಲ್ಲಿ ನೆಲೆನಿಲ್ಲಲು ಪರಮಾತ್ಮನ ಧ್ಯಾನದ ಆಸರೆಯು ಅವಶ್ಯಕವಾಗಿದೆ. ತ್ಯಾಗದಿಂದ ತಾತ್ಕಾಲಿಕವಾದ ಸಾತ್ತ್ವಿಕ ಆನಂದವು ದೊರಕಬಹುದಾದರೂ ಧ್ಯಾನಯೋಗದಲ್ಲಿ ಪರಮಾತ್ಮನಲ್ಲಿ ನಮ್ಮ ಬುದ್ಧಿಯನ್ನು ಕೇಂದ್ರೀಕರಿಸುವುದರಿಂದ ಸ್ಥಿರವಾದ ಅಕ್ಷಯವಾದ ಆನಂದವು ದೊರಕುವುದು. ಆದುದರಿಂದತ್ಯಾಗಯೋಗಗಳ ಸಮನ್ವಯದಿಂದರೇ ಶಾಶ್ವತ ಸುಖಾನುಭವವನ್ನು ನಾವು ಹೊಂದಬಲ್ಲಿವು. ವಿಷಯ ಸಂಪರ್ಕ ದಿಂದ ಪಡೆಯುವ ಸುಖ ಹಾಗೂ ತ್ಯಾಗ, ಧ್ಯಾನಾ ದಿಗಳಿಂದ ಪಡೆಯುವ ಆತ್ಮಾನಂದ ಇವುಗಳಿಗೆ ಬಹಳ ಅಂತರವಿದೆ. ಭೌತಿಕ ಸುಖವನ್ನು ಪಡೆಯುವಾಗ ದರಲ್ಲಿ ಬಹಳ ಆತುರತೆ, ಆಸಕ್ತಿಗಳು ಮೂಡುವವು. ಅದನ್ನು ಪಡೆಯಲು ನಮ್ಮ ಮನಸ್ಸು ಅತಿಯಾಗಿ ಚಡಪಡಿಸುತ್ತದೆ. ಇದೆಲ್ಲ ಲವಲವಿಕೆ ಅದನ್ನು ಪಡೆಯುವವರೆಗೆ ಮಾತ್ರ. ಪಡೆದಮೇಲೆ ಅದರಲ್ಲಿ ಅಷ್ಟೇ ಜಿಗುಪ್ಸೆ ತಿರಸ್ಕಾರಬುದ್ಧಿ ಉಂಟಾಗುತ್ತದೆ. ಆರಂಭದಲ್ಲಿ ತಾತ್ಕಾಲಿಕ ಸುಖವು ದೊರೆತರೂ ವಿಷಯಪದಾರ್ಥಗಳ ಸೇವನೆಯು ದುಃಖ, ಜಿಗುಪ್ಸೆಗಳನ್ನೇ ಮುಂದೆ ನಿರ್ಮಿಸು ವುದು. ಕಜ್ಜಿ ತುರಿಸುವಾಗತಾತ್ಯಾಲಿಕವಾಗಿ ದೊರೆಯುವತಾಮಸ ಆನಂದದಂತೆ ಈ ವೈಷಯಿಕ ಸುಖ ಇದೆ. ಕಜ್ಜಿ ತುರಿಸಿದ ನಂತರ ಆಗುವ ಕ್ಲೇಶವಿಕಾರದಂತೆ ಭೌತಿಕ ಸುಖವನ್ನು ಅನುಭವಿಸಿದ ನಂತರದ ಪಾಡೂ ಶೋಚನೀಯವೇ ಆಗುವುದು. ಕಂಡೂಯನೇನ ಕರಯೋರಿವ ದುಃಖದುಃಖಂ | -ಭಾಗವತ ಆಧ್ಯಾಕ್ಮಿಕ ಸುಖದ ಸ್ಥಿತಿಯು ಇದಕ್ಕಿಂತ ತೀರ ವ್ಯತಿರಿಕ್ತವಾಗಿದೆ. ಈ ಸುಖವನ್ನು ಪಡೆಯುವ ಮೊದಲು ಇದಕ್ಕಾಗಿ ತ್ಯಾಗ, ತಪಸ್ಸು ಕ್ಲೇಶಗಳ ಆವಶ್ಯಕತೆಯು ಬಹಳ ಶ್ರಮವೆನಿಸಬಹುದಾದರೂ ಈ ಆಧ್ಯಾತ್ಮಿಕ ಸಾಧನೆಯ ನಂತರನಾವುಪಡೆಯಬಹುದಾದ ತೃಪ್ತಿ ಆನಂದಗಳು ಅನುಪಮವಾದವು. ಆ ಪವಿತ್ರವಾದ ಸಾತ್ತ್ವಿಕ ಆನಂದದ ಮುಂದೆ ಪ್ರಪಂಚದ ಮಿಕ್ಕ ಸಮಸ್ತ ಭೋಗ್ಯಿಶ್ವರ್ಯಗಳ ಆನಂದವುತುಚ್ಛಹಾಗೂಕೃತ್ರಿಮವೆನಿಸುವುದು. ಪ್ರಾರಂಭ ದಲ್ಲಿ ಕಷ್ಟ ಅನಾಸ್ಥೆಗಳಿಗೆ ಅವಕಾಶವಿದ್ದರೂ ಪರಿಣಾಮದಲ್ಲಿನಮಗೆ ಪೂರ್ಣ ತೆಯ ಅನುಭವವನ್ನು ನೀಡಬಲ್ಲ ಈ ಆಧ್ಯಾತ್ಮಿಕ ಸಿದ್ಧಿಗಾಗಿ ಪ್ರಯತ್ನಿಸುವುದೇ ನಮ್ಮ ಜೀವನದಮುಖ್ಯಸಾಧನೆಯಾಗಿರಬೇಕು. ಈವಿಚಾರಗಳನ್ನು- ಬಾಹ್ಯಸ್ಫರ್ಶೇಷ್ಟಸಕ್ತಾತ್ಮಾ ವಿಂದತ್ಯಾತ್ಮನಿ ಯತ್‌ ಸುಖಂ। ಸ ಬ್ರಹ್ಮಯೋಗಯುಕ್ತಾತ್ಮಾ ಸುಖಮಕ್ಷಯಮತ್ನುತೇ । ಯೇ ಹಿ ಸಂಸ್ಪರ್ಶಜಾ ಭೋಗಾ ದುಃಖಯೋನಯ ಏವತೇ। ಮುಂತಾದಶ್ಲೋಕಗಳಲ್ಲಿವಿವರಿಸಲಾಗಿದೆ. ಹೀಗೆ ಜೀವನದಲ್ಲಿ ತಾನು ತ್ಯಾಗ ಮತ್ತು ಕರ್ಮಯೋಗ ಇವೆರಡನ್ನೂ ಅಳವಡಿಸಿಕೊಂಡು ಧ್ಯಾನದ ಮಾರ್ಗದಲ್ಲಿ ಮುನ್ನಡೆದು ಸ್ಥಿರವಾದ ಆತ್ಮಿಕ ಆನಂದವನ್ನು. ಪಡೆಯಬೇಕೆನ್ನುವುದನ್ನು ಐದನೆಯ ಅಧ್ಯಾಯದಲ್ಲಿ ಸಮರ್ಥಿಸಲಾಗಿದೆ.
Bannanje Govindacharya (1936–2020)Bhagavad Gita Pravachana
ಯೇ ಹಿ ಸಂಸ್ಪರ್ಶ ಜಾಃ ಭೋಗಾಃ ದುಃಖ ಯೋನಯಃ ಏವ ತೇ | ಆದಿ ಅಂತ ವಂತಃ ಕೌಂತೇಯ ನ ತೇಷು ರಮತೇ ಬುಧಃ -ವಿಷಯದ ನಂಟಿನಿಂದ ಬರುವ ಸುಖಗಳು ಬನ್ನದ ತವರು. ಬಂತು ಎನ್ನುವಷ್ಟರಲ್ಲೇ ಬರಿದಾಗುವಂಥವು. ಕೌಂತೇಯಾ, ಬಲ್ಲವರು ಅವನ್ನು ಮೆಚ್ಚುವುದಿಲ್ಲ. ಬಾಹ್ಯ ವಿಷಯಸ್ಪರ್ಶದಿಂದ ಸಿಗುವ ಸುಖಭೋಗದ ಅನುಭವ(ಸಂಸ್ಪರ್ಶ)ದಿಂದ ನಮಗೆಷ್ಟು ಸುಖ ಸಿಕ್ಕೀತು? ಒಂದು. ಗುಲಗಂಜಿಯಷ್ಟು ಸುಖಕ್ಕಾಗಿ. ಕುಂಬಳಕಾಯಿಯಷ್ಟು ದುಃಖವನ್ನು ಅನುಭವಿಸಲು ನಾವು ಸಿದ್ಧರಾಗಿರುತ್ತೇವೆ. ಇಂದಿನ ಎಲ್ಲಾ ಪ್ರಾಪಂಚಿಕ ಅಪರಾಧಗಳಿಗೆ ಇದೇ ಕಾರಣ. ಕ್ಷಣಿಕ ಸುಖದ ಆಸೆಗೆ ಬಿದ್ದು ಇಡೀ ಜೀವನವನ್ನೇ ಹಾಳು ಮಾಡಿಕೊಳ್ಳುವವರನ್ನು ನಮ್ಮ ದೈನಂದಿನ ಜೀವನದಲ್ಲಿ ನಾವು ಕಾಣುತ್ತೇವೆ. ನಮಗೆ ಬಾಹ್ಯವಾಗಿ ಸುಖ ಎಂದು ಕಾಣುವುದು ದುಃಖವನ್ನು ಮರಿ ಹಾಕುವ ಮೊಟ್ಟೆ ಎನ್ನುವ ಸತ್ಯವನ್ನರಿಯದೇ, ಅದೇ ಸುಖ ಎಂದು ಅದರ ಬೆನ್ನು ಹಿಡಿಯುತ್ತೇವೆ. ಪ್ರತಿಯೊಂದು ಬಾಹ್ಯಸುಖದ ಹಿಂದೆ ದುಃಖವೆಂಬ ಕಗ್ಗತ್ತಲು ಮಡುಗಟ್ಟಿರುತ್ತದೆ. ಬಾಹ್ಯ ಸುಖ-ಆನಂದ ಎನ್ನುವುದು ಕೇವಲ ಒಂದು ಮಿಂಚು. ಅದು ಬಂತು ಎನ್ನುವಷ್ಟರಲ್ಲಿ ಬರಿದಾಗುತ್ತದೆ. ತಿಳುವಳಿಕೆ ಉಳ್ಳವರು ಈ ಬಾಹ್ಯ ಸುಖದ ಆಸೆಯಲ್ಲಿ ಬದುಕುವುದಿಲ್ಲ. ಅಧ್ಯಾತ್ಮದ ಬಗ್ಗೆ ಕೆಲವರು ಹೇಳುವುದಿದೆ: “ಈಗಲೇ ನಮಗೇಕೆ ಅಧ್ಯಾತ್ಮ; ಅದೆಲ್ಲಾ ಅರವತ್ತರ ಶಾಂತಿ ಆದ ಮೇಲೆ” ಎಂದು. ಇದು ಏಕೆ ಸರಿಯಲ್ಲ ಎನ್ನುವುದನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.
Bibek Debroy (1955–2024)The Bhagavad Gita
(22) ‘Pleasures from touch27 have a beginning and an end and are the reason for unhappiness. O, son of Kunti!28 The wise person does not obtain pleasure from these.’