5.3

ज्ञेयः स नित्यसंन्यासी यो न द्वेष्टि न काङ्क्षति ।
निर्द्वन्द्वो हि महाबाहो सुखं बन्धात्प्रमुच्यते ॥
jñeyaḥ sa nityasaṃnyāsī yo na dveṣṭi na kāṅkṣati |
nirdvandvo hi mahābāho sukhaṃ bandhātpramucyate ||
Sri Madhvacharya (1238–1317)Bhagavad Gita Tatparya Nirnaya
द्वेषादिवर्जनमेव सन्न्यासशब्दार्थो न यत्याश्रमोऽत्राभिप्रेत इत्याह- ज्ञेय इति। न च ‘काम्यानां कर्मणां न्यासम्’ इत्यनेन विरोधः तेनाऽपि सहितस्य न्यासत्वात्। न च त्यागस्य पृथग्वचनाद्विरोधः। कुरुपाण्डववन्न्यासावान्तरभेदत्वात् त्यागस्य॥03॥
Swami Sivananda (1887–1963)Bhagavad Gita
3. He should be known as a perpetual Sannyasin who neither hates nor desires; for, free from the pairs of opposites, O mighty-armed Arjuna, he is easily set free from bondage! COMMENTARY: A man does not become a Sannyasin by merely giving up actions due to laziness, ignorance, some family quarrel or calamity or unemployment. A true Sannyasin is one who has neither attachment nor aversion to anything. Physical renunciation of objects is no renunciation at all. What is wanted is the renunciation of egoism and desires.
Sri Vishwesha Tirtharu (1931–2019)Gitasaroddhara
5.2–5.6 · ಸಂನ್ಯಾಸ ಮತ್ತು ಕರ್ಮಯೋಗ
ಸಂನ್ಯಾಸ ಮತ್ತು ಕರ್ಮಯೋಗ ಶ್ರೀಕೃಷ್ಣನು ತನ್ನ ಉಪದೇಶದಲ್ಲಿ ಕಾಮ-ಕ್ರೋಧ ಮೊದಲಾದ ಹೃದಯದೋಷನನ್ನು ಪರಿತ್ಯಜಿಸುವುದು ಮತ್ತು ಈಶ್ವರಾರ್ಪಣ ಬುದ್ಧಿಯಿಂದ ಕರ್ತವ್ಯವನ್ನಾಚರಿಸುವುದು - ಈ ಎರಡು ಸಂಗತಿಗಳನ್ನು ಮುಖ್ಯವಾಗಿ ಬೋಧಿಸಿರುವನು. ಈವರೆಗಿನ ಬೋಧನೆಯ ಸಾರಾಂಶವುಇದೇ ಆಗಿದೆ. ಆದರೆ ಇವೆರಡರಲ್ಲಿ ಯಾವುದು ಪ್ರಧಾನವೆಂಬುದನ್ನು ತಿಳಿಯುವ ಕುತೂಹಲವನ್ನು ಅರ್ಜುನನು ವ್ಯಕ್ತಪಡಿಸುತ್ತಾನೆ. ಕಾಮಾದಿ ಮನೋದೋಷಗಳ ನಿವಾರಣೆಯೇ ಮುಖ್ಯವಾಗಿರುವುದಾದರೆ ಅದನ್ನೇ ಸಾಧಿಸಿದರೆ ಸಾಲದೆ? ಕಾಮದ್ವೇಷಗಳ ಜಾಲವಾದ ಈ ಯುದ್ಧದ ತೊಡಕೆನಿಂದ ತಾನು ಪಾರಾಗಬಾರದೇಕೆ? ಎಂಬುದು ಅರ್ಜುನನ ವಿಚಾರವಾಗಿದೆ. ಸಂನ್ಯಾಸಮತ್ತು ಕರ್ಮ ಇವೆರಡನ್ನೂ ಒಬ್ಬನೇ ನಿರ್ವಹಿಸಲಾರ. ಒಂದು ಸಂನ್ಯಾಸಿಗಳಿಗೆ ಸಂಬಂಧಿಸಿದರೆ ಇನ್ನೊಂದು ಗೃಹಸ್ಥರಿಗಾಗಿಯೇ ಮೀಸಲು. ಪರಸ್ಪರ ವಿರೋಧಿಗಳಾದ ಈ ಸಂನ್ಯಾಸಮತ್ತು ಕರ್ಮಯೋಗಗಳಲ್ಲಿ ತಾನು ಯಾವುದರ ಆಯ್ಕೆ ಮಾಡಲಿ? ಎನ್ನುವುದೂ ಅರ್ಜುನನ ಜಿಜ್ಞಾ; ಸೆಯಾಗಿದೆ. ಇದಕ್ಕೆ ಭಗವಂತನ ಉತ್ತರ ಹೀಗಿದೆ: ಈ ಸಂನ್ಯಾಸ ಮತ್ತು ಕರ್ಮಯೋಗಗಳು ಪರಸ್ಪರ ವಿರೋಧಿಗಳಾಗಿರದೆ ಪರಸ್ಪರ ಪೂರಕಗಳಾಗಿವೆ. ಸಂನ್ಯಾಸ ಮತ್ತು ಕರ್ಮಯೋಗ - ಈ ಶಬ್ದಗಳಿಂದ ಯತಿಧರ್ಮ ಹಾಗೂ ಗೃಹಸ್ಫಧರ್ಮಗಳನ್ನು ಇಲ್ಲಿ ನಿರೂಪಿಸಲಾಗಿಲ್ಲ. ಸಂನ್ಯಾಸ ಎಂದರೆ ಮನಸ್ಸಿನಲ್ಲಿ ಹುದುಗಿರುವ ಕಾಮ, ದ್ವೇಷ್ಠ ಮೋಹ ಮೊದಲಾದ ವಿಕಾರಗಳ ವಿಮೋಚನೆಯೇ ಆಗಿದೆ. ಇದು ಕರ್ಮಯೋಗದ ಪೂರ್ವಾಂಗವಾಗಿದೆ. ಕಾಮದ್ವೇಷಾದಿ ಹೃದಯ ದೋಷಗಳನ್ನು ಕಿತ್ತೊಗೆದು ಅಂತಃಕರಣವನ್ನು ಹದಗೊಳಿಸಿದ ನಂತರಕರ್ಮದ ಪವಿತ್ರಾಂಕುರಗಳನ್ನು ಅಲ್ಲಿ ನೆಡದಿದ್ದರೆ ಆವರೆಗೆ ಮಾಡಿದ ಪ್ರಸಾಧನ ಪರಿಷ್ಕರಣಗಳೆಲ್ಲ ವ್ಯರ್ಥವಾಗುವುದಿಲ್ಲವೆ? ಹೊಲದ ಕಳೆಗಳನ್ನು ಟ್ರೊಗೆದು ಅದನ್ನು ಕೃಷಿಯೋಗ್ಯವಾಗುವಂತೆ ಮಾಡಲು ಬೇಕಾದ ಸಾಧನ ಸಂವಿಧಾನಗಳನ್ನು ನಡೆಸಿ ಕೃಷಿಯನ್ನು ಮಾತ್ರ ಮಾಡದಿದ್ದಲ್ಲಿ ಅಷ್ಟರವರೆಗಿನ ಶ್ರಮ ಸಾಧನೆಯೆಲ್ಲ ಸಂಪೂರ್ಣ ವಿಫಲವೆನಿಸುವುದು. ಗೀತೆಯಲ್ಲಿ ಇದುವರೆಗೆ ನಿರೂಪಿಸಲಾದರಾಗದ್ವೇಷಾದಿ ಪರಿತ್ಯಾಗರೂಪವಾದ ಈ ಸಂನ್ಯಾಸವು ಮನಸ್ಸನ್ನು ಹದಗೊಳಿಸುವ ಪ್ರಕ್ರಿಯೆಯೇ ಆಗಿದೆ. ಜ್ಞೇಯಃ ಸ ನಿತ್ಯಸಂನ್ಯಾಸೀ ಯೋನ ದ್ವೇಷ್ಟಿನ ಕಾಂಕ್ಚತಿ [ ಸುಖದುಃಖಗಳ ದ್ವಂದ್ವವನ್ನು ದಾಟನಿಂತು ದ್ವೇಷ-ಕಾಂಕ್ಷೆ ಗಳನ್ನು ಕಿತ್ತು ಒಗೆದ ವ್ಯಕ್ತಿಯೇ ಸಂನ್ಯಾಸಿ ಎನಿಸುವನು. ಇಂತಹ ಸಂನ್ಯಾಸಿಯನ್ನು ದಂಡ ಕಾಷುಯಗಳಿಂದಲೇ ಗುರುತಿಸಬೇಕಾಗಿಲ್ಲ. ಸಂಸಾರ ಸಮಾಜಗಳ ಮಧ್ಯ ದಲ್ಲಿದ್ದುಕೊಂಡೇ ಈ ಸಂನ್ಯಾಸಿಮನೋವೃತ್ತಿಯನ್ನು ಪಡೆಯಲು ಎಲ್ಲರೂ ಪ್ರಯತ್ನಿಸಬಹುದು. ಆದರೆ ಈ ಮಾನಸಿಕ ದೋಷಗಳ ಪರಿತ್ಯಾಗವೇ ಅಂತಿಮ ಸಾಧನೆಯೆಂದು ನಾವು ಗ್ರಹಿಸಬಾರದು. ಭಗವಂತನ ಸಾಕ್ಟಾತ್ಕಾರಕ್ಕಾಗಿ ನಾವು ಮಾಡಲಿರುವಮಹಾಸಾಧನೆಗೆ ಇದು ಪೂರ್ವಭೂಮಿಕೆಯಾಗಿರುವುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಗೀತೆಯು ಹೇಳಿದ ಈ ನಿತ್ಯಸಂನ್ಯಾಸವು ಮನಸ್ಸಿನ ಪರಿಷ್ಕರಣಮಾತ್ರವಾಗಿದ್ದು ಭಗವದರ್ಪಣಭಾವನೆಯಿಂದ ನಾವು ಮಾಡುವ ಕರ್ತವ್ಯಾನುಷ್ಠುನದಿಂದಲೇ ಅದುಸಮಗ್ರತೆಯನ್ನು ಪಡೆಯುವುದು. ಹೀಗೆ ಈ ಸಂನ್ಯಾಸ ಹಾಗೂ ಕರ್ಮಯೋಗಗಳು ಪರಸ್ಪರ ಪೂರಕಗಳಾಗಿದ್ದು ರಾಗಾದಿ ಪರಿವರ್ಜನದಿಂದರೇ ನಾವೃತೃಪ್ಪರಾಗದೆ ನಿಷ್ಠಾಮಕರ್ಮಾಚರಣೆ ಯಿಂದನಮ್ಮ ಸಾಧನೆಗೆ ಪರಿಪೂರ್ಣತೆಯನ್ನು ತಂದುಕೊಳ್ಳಬೇಕು. ಈ ಅಭಿಪ್ರಾಯದಿಂದಲೇ, ತಯೋಸ್ತು ಕರ್ಮಸಂನ್ಯಾಸಾತ್‌ ಕರ್ಮಯೋಗೋ ವಿಶಿಷ್ಠತೇ | ಎಂದು ಸಂನ್ಯಾಸಕ್ಕಿಂತಲೂ ಕರ್ಮಯೋಗಕ್ಕೆ ಹೆಚ್ಚಿನ ಮಹತ್ತ್ವವನ್ನು ಗೀತೆಯಲ್ಲಿ ಹೇಳಲಾಗಿದೆ. ಇಲ್ಲಿ ಬಂದಿರುವ ಕರ್ಮಸಂನ್ಯಾಸಹಾಗೂ ಕರ್ಮಯೋಗಶಬ್ಬಗಳ ಭಾವಾರ್ಥಗಳನ್ನು ಗ್ರಹಿಸದೆ ಅನೇಕರು ಗೊಂದಲಕ್ಕೊಳಗಾಗಿದ್ದಾರೆ. ಅತಿ ಕ್ಲಿಷ್ಟವಾದ ರೀತಿಯಲ್ಲಿ ಈ ವಾಕ್ಯದ ಅರ್ಥವನ್ನು ವಿವರಿಸಲು ಪ್ರಯತ್ನಿಸಿದ್ದಾರೆ. ನಿಷ್ಕುಮಕರ್ಮದ ಸಹಕಾರದಿಂದಪಡೆಯಲಾಗುವ, ಕರ್ಮಯೋಗಕ್ಕಿಂತಲೂ ಶ್ರೇಷ್ಠ ಅವಸ್ಥೆ ಎನಿಸಿರುವ ಜ್ಞಾನಯೋಗವನ್ನು ಸಂನ್ಯಾಸವೆಂಬ ಶಬ್ದದಿಂದ ವರಿಗ್ರಹಿಸಿ, ಈ ಸಂನ್ಯಾಸಕ್ಕಿಂತಲೂ ಕರ್ಮಯೋಗವುಹೇಗೆ ಉತ್ತಮ ಎಂಬುದು ಎಲ್ಲರಿಗೂ ಸಮಸ್ಯೆಯಾಗಿತ್ತು. ಕರ್ಮಸಂನ್ಯಾಸವೆಂದರೆ ಕರ್ಮಯೋಗದ ನಂತರದ ಜ್ಞಾನಾವಸ್ಥೆ ಯೆಂದಾಗಲಿ ಸನಕಾದಿಗಳು ಅವಲಂಬಿಸಿದ ಜ್ಞಾನ ಪ್ರಧಾನವಾದ ಜ್ಞಾನಯೋಗ ಮಾರ್ಗವೆಂದಾಗಲಿ ಇಲ್ಲಿ ಅರ್ಥವಲ್ಲ. ಇವೆರಡರಲ್ಲಿಯೂ ವಾಸ್ತವವಾಗಿ ಕರ್ಮಸಂನ್ಯಾಸಕ್ಕೆ ಪ್ರಸಕ್ತಿಯೇಇರುವುದಿಲ್ಲ. ಮೋಕ್ಟಪರ್ಯಂತವಾಗಿ ಕರ್ಮವು ಅವಶ್ಯ ಆಚರಣೇಯವಿರುವುದರಿಂದ ಪ್ರತಿಯೊಂದು ಅವಸ್ಥೆಯಲ್ಲಿಯೂ ಕರ್ತವ್ಯದ ಸಂಬಂಧ ಇದ್ದೇ ಇರುವುದು. ಹೀಗಿರುವಾಗ ಕರ್ಮ ಸಂನ್ಯಾಸಕ್ಕೆ ಯಾವ ಸಂದರ್ಭದಲ್ಲಿಯೂ ಅವಕಾಶವೇ ಇರುವುದಿಲ್ಲ. ಆದುದರಿಂದ ಇಲ್ಲಿ ನಿರೂಪಿತವಾದ ಕರ್ಮಸಂನ್ಯಾಸವು ಕರ್ಮಯೋಗದ ಪೂರ್ವಾವಸ್ಥೆಯಾದ ನಿಷ್ಕುಮಕರ್ಮದ ಸಾಧನೆಗೆ ಅತ್ಯಂತ ಸಹಾಯಕವೂ ಆದರಾಗದ್ವೇಷಾದಿಗಳ ತ್ಯಾಗವೇ ಆಗಿದೆ. ಕರ್ಮಯೋಗದಲ್ಲಿ ಪೂರ್ವರಂಗವೆನಿಸಿದ ಈ ಸಂನ್ಯಾಸಕ್ಕಿಂತ ಕರ್ಮಯೋಗವು ಶ್ರೇಷ್ಠವಾಗಿದ್ದು ರಾಗದ್ವೇಷಾದಿ ಪರಿತ್ಯಾಗದಲ್ಲಿಯೇ ನಮ್ಮ ಪ್ರಯತ್ನದ ವರ್ಯವಸಾನವಾಗದೆ ಕರ್ಮಯೋಗಪರ್ಯಂತವಾಗಿ ಮುನ್ನಡೆದು ಆತ್ಯಂತಿಕ ಸಿದ್ಧಿಯನ್ನು ಪಡೆಯಬೇಕೆನ್ನುವ ಅರ್ಥದಲ್ಲಿ ಯಾವ ವಿವರ್ಯಾಸ ಗೊಂದಲಗಳಿಗೂ ಎಡೆಯಿಲ್ಲ. ಶ್ರೀಮಧ್ವಾಚಾರ್ಯರು ಯಾವಕ್ಷಿಷ್ಣತೆಗೂ ಅವಕಾಶ ನೀಡದೆ ಈ ಸರಳಾರ್ಥವನ್ನು ಬೋಧಿಸಿ, ಗೀತೆಯ ನಿಜವಾದತಾತ್ಪರ್ಯವನ್ನು ಅರುಹಿದ್ದಾರೆ. ಶ್ರೀ ಶಂಕರಾಚಾರ್ಯರ ವಿವೇಚನೆ ಹೀಗಿದೆ ""ಸಂಸ್ಯಾಸವೆಂದರೆ ಕರ್ಮಗಳ ಸಂಪೂರ್ಣ ಪರಿತ್ಯಾಗವೇ ಆಗಿದೆ. ಇಂತಹ ಸಂನ್ಯಾಸವೂ ನಿಷ್ಕುಮ ಕರ್ಮಾನುಷ್ಠಾನರೂಪಿಯಾದಕರ್ಮಯೋಗವೂಪರಸ್ಪರವಿರೋಧಿಯಾಗಿವೆ. ಇವೆರಡು ಒಂದೇ ಕಡೆ ಇರಲು ಸಾಧ್ಯವೇ ಇಲ್ಲ. ಬ್ರಹ್ಮಜ್ಞಾನವು ಸಂಭವಿಸಿದ ಕೂಡಲೇ ಮಾಯಾಮಯವಾದ ಪ್ರಪಂಚವೇ ಕರಗಿ ಹೋಗುವುದರಿಂದ ಜ್ಞಾನಿಗೆ ವಿಶ್ವದ ಕಲ್ಪನೆಯೇ ಇರಲಾರದು. ಇಂತಹ ಅವಸ್ಥೆಯಲ್ಲಿ ಕರ್ಮದ ಆಚರಣೆಯೆಂತು? ಹೀಗೆ ಜ್ಞಾನಿಗೆ ಕರ್ಮಸಂನ್ಯಾಸದಲ್ಲಿ ಮಾತ್ರ ಅವಕಾಶವಿದ್ದು ಕರ್ಮಯೋಗದ ಪ್ರಸಕ್ತಿಯೇ ಇಲ್ಲದಿರುವಾಗ ಸಂನ್ಯಾಸಕ್ಕಿಂತಲೂ ಕರ್ಮಯೋಗವೇಶ್ರೇಷ್ಠವೆನ್ನುವಮಾತಿಗೆ ಅರ್ಥವೇ ಉಳಿಯುವುದಿಲ್ಲ. ಎರಡು ಮಾರ್ಗಗಳನ್ನೂ ಪರಿಗ್ರಹಿಸಲು ಸಂದರ್ಭವಿದ್ದರೆ, ಒಂದನ್ನು ಶ್ರೇಷ್ಠವೆಂದೂ ಇನ್ನೊಂದನ್ನು ಅಮುಖ್ಯವೆಂದೂ ಹೇಳಬಹುದು. ಜ್ಞಾನಿಯಲ್ಲಿ ಕರ್ಮ ಯೋಗಕ್ಕೆ ಅವಕಾಶವೇ ಇಲ್ಲದಿರುವಾಗ ಸಂನ್ಯಾಸಕ್ಕಿಂತಲೂ ಕರ್ಮಯೋಗವು ಶ್ರೇಷ್ಠವೆಂದು ಹೇಳುವುದು ಅನುಚಿತವಾಗುವುದು. ಆದುದರಿಂದ ಗೀತೆಯ ಈ ಸಂದರ್ಭವು ಕರ್ಮಸಂನ್ಯಾಸದ ಅವಸ್ಥೆಯನ್ನು ತಲುಪದ ಅಜ್ಞಾನಿಯಾದವ್ವಕ್ಕಿಗೆ ಸಂಬಂಧಿಸಿರುವುದು. ಅಜ್ಞಾ; ನಿಯಾದ ಪುರುಷನಿಗೆ ಕರ್ಮಸಂನ್ಯಾಸಕ್ಕಿಂತಲೂ ಕರ್ಮಯೋಗವೇ ಶ್ರೇಷ್ಠವೆಂದು ಗೀತೆಯ ಆಶಯವಾಗಿದೆ.'' ಗೀತೆಯಲ್ಲಿ ಸಾಮಾನ್ಯವಾಗಿ ಬಂದಿರುವ ಮಾತನ್ನು ತಮ್ಮ ವಿಚಾರ ಸಂಪ್ರದಾಯಗಳಿಗೆ ಅನುಗುಣವಾಗಿ ಎಳೆಯುವ ಪ್ರಯತ್ನವನ್ನು ಈ ವಿವೇಚನೆಯಲ್ಲಿ ಶ್ರೀಶಂಕರಾಚಾರ್ಯರು ಮಾಡಿದಂತಿದೆ. ಎಲ್ಲರಿಗೂ ಅನ್ವಯವಾಗುವವಿಚಾರವೆಂದು ಗೀತೆಯಲ್ಲಿ ಕಂಡುಬಂದಿರುವ ವಚನವನ್ನು ಅಜ್ಞಾನಿಗಳಿಗೆ ಮಾತ್ರ ಸಂಬಂಧಿಸಿದ್ದೆಂದು ಪರಿಮಿತಗೊಳಿಸುವುದು ಅಷ್ಟು ಸಮರ್ಪಕವೆನಿಸಲಾರದು. ಜ್ಞಾನಿಗಳಿಗೆ ಕರ್ಮಯೋಗದ ಪ್ರಸಂಗವಿಲ್ಲದಿರು ವಂತೆ, ಅಜ್ಞಾನಿಗಳಿಗೆ ಕರ್ಮಸಂನ್ಯಾಸದ ಸಂದರ್ಭವೂ ಇರುವುದಿಲ್ಲ. ಶಂಕರಾಚಾರ್ಯರ ವಾದಸರಣಿಯಂತೆ ಜ್ಞಾನವನ್ನು ಪಡೆದನಂತರವೇ ಕರ್ಮಸಂನ್ಯಾಸವಾಗುವುದರಿಂದ ಜ್ಞಾನಿಗಳಲ್ಲಿ ಕರ್ಮಸಂನ್ಯಾಸ ಒಂದೇ ಉಳಿಯುವಂತೆ ಅಜ್ಞಾನಿಗಳಲ್ಲಿ ಕರ್ಮಯೋಗವು ಮಾತ್ರವಿರುತ್ತದೆ. ಇಂತಹ ಸಂದರ್ಭದಲ್ಲಿ ಕರ್ಮಸಂನ್ಯಾಸ ಹಾಗೂ ಕರ್ಮಯೋಗಗಳ ತುಲನೆಯನ್ನು ಮಾಡುತ್ತ ಒಂದರ ಶ್ರೇಷ್ಠತೆಯನ್ನು ವಿವೇಚಿಸುವ ಪ್ರಸಂಗವು ಎಂದಿಗೂ ಬರುವುದಿಲ್ಲ. ಹೀಗಾಗಿ ಗೀತೆಯ ಈ ವಾಕ್ಯವು ಅನಾವಶ್ಯಕವೆನಿಸುವ ಸನ್ನಿವೇಶ ಒದಗುವುದು. ಆದುದರಿಂದ ಶ್ರೀಮಧ್ವಾಚಾರ್ಯರು ಬೋಧಿಸಿದ ಸರಳಾರ್ಥವೇ ಸಮರ್ಪಕವೆನಿಸುತ್ತದೆ. ಸಂನ್ಯಾಸ ಮತ್ತುಕರ್ಮಯೋಗಗಳಿಗೆ ವಿರೋಧವಿಲ್ಲ. ಇವು ಎರಡನ್ನೂ ಒಬ್ಬನಲ್ಲೇ ಸಮನ್ವಯಗೊಳಿಸಬೇಕು ಎಂಬುದಾಗಿ ಶ್ರೀಮಧ್ವಾಚಾರ್ಯರು ಬೋಧಿಸಿದ ವಿಚಾರವು ಗೀತೆಯಲ್ಲಿ ಅಲ್ಲಲ್ಲಿ ನಿರೂಪಿತವಾಗಿದೆ. ಸಂನ್ಯಾಸವೆಂದರೆ ಕರ್ಮತ್ಯಾಗವಲ್ಲ. ಕಾಮನಾತ್ಯಾಗವೇ ಸಂನ್ಯಾಸವೆಂದು ಜ್ಞ್ನ (ಯಃ ಸ ನಿತ್ಯಸಂನ್ಯಾಸೀ ಯೋ ನ ದ್ವೇಷ್ಟಿ ನ ಕಾಂಕ್ಚ ತಿ। ಕಾಮ್ಯಾನಾಂ ಕರ್ಮಣಾಂ ನ್ಯಾಸಂ ಸಂನ್ಯಾಸ ಕವಯೋ ವಿದುಃ । ಮೊದಲಾದ ಕಡೆಗಳಲ್ಲಿ ಹೇಳಲಾಗಿದೆ. ಸ ಸಂನ್ಯಾಸೀ ಚಯೋಗೀಚ। ಎಂದು ಆರನೆಯ ಅಧ್ಯಾಯದಲ್ಲಿ ಸಂನ್ಯಾಸ-ಕರ್ಮಯೋಗಗಳ ಸಮಾವೇಶವನ್ನು ಸುಸ್ಪಷ್ಟವಾಗಿ ತಿಳಿಸಲಾಗಿದೆ. ಇವೆಲ್ಲ ಮಾತುಗಳ ಬೆಳಕಿನಲ್ಲಿ ಈ ಭಾಗವನ್ನು ಪರಿಶೀಲಿಸಿದಲ್ಲಿ ರಾಗದ್ವೇಷಾದಿ ಮನೋವಿಕಾರಗಳ ಪರಿತ್ಯಾಗ ಹಾಗೂ ಭಕ್ತಿಯಿಂದ, ಸಮರ್ಪಣಬುದ್ಧಿಯಿಂದ ಕರ್ಮಾನುಷ್ಠಾನ ಇವೆರಡು ಜ್ಞಾನದ ಪ್ರಧಾನಸಾಧನಗಳ ವಿವೇಚನೆ ಮಾಡಿ, ಇವೆರಡರ ಆವಶ್ಯಕತೆಯನ್ನೂ ಪರಸ್ಪರ ಸಂಬಂಧವನ್ನೂ ಇಲ್ಲಿ ಪ್ರತಿಪಾದಿಸಿದ್ದಾರೆಂಬುದು ಸ್ಪಷ್ಟವಾಗುವುದು. ನಿಜವಾಗಿಯೂ ಇವೆರಡು ಸೇರಿಯೇ ಕರ್ಮಯೋಗದನಿಷ್ಟತ್ತಿಯಾಗುವುದು. ರಾಗದ್ವೇಷಾದಿ ಮನೋವಿಕಾರಗಳ ತ್ಯಾಗವು ಕರ್ಮಯೋಗದ ಮೊದಲನೇ ಭಾಗವಾಗಿದ್ದರೆ ಕರ್ಮಗಳನ್ನು ಆಚರಿಸಿ ಭಗವಂತನಿಗೆ ಅರ್ಪಿಸುವವ್ಯಾಪಾರವೇ ಅದರ ಉತ್ತರಾರ್ಧವೆನಿಸುವುದು. ಇವೆರಡರ ಸಮನ್ವಯವೇ ಸಮಗ್ರ ಕರ್ಮಯೋಗವೆನಿಸುವುದರಿಂದ ಇವುಗಳಲ್ಲಿ ಯಾವುದು ಶ್ರೇಷ್ಠವೆಂಬಪ್ರಶ್ನೆಯೇ ಉದ್ಭವಿಸುವುದಿಲ್ಲ. ಕಟ್ಟಡಕ್ಕೆ ತಳಹದಿಯೂ ಬೇಕು, ಮೇಲುಭಾಗದಮಾಡಿನ ಹೊದಿಕೆಯೂ ಬೇಕು. ಇವುಗಳಲ್ಲಿ ಯಾವುದು ಶ್ರೇಷ್ಠವೆಂದು ಯಾರೂ ಚರ್ಚಿಸುವುದಿಲ್ಲ. ಆದರೆತಳಹದಿಯನ್ನು ಮಾತ್ರ ಕಟ್ಟಿಸಿ ಮಾಡುಗೋಡೆಗಳನ್ನು ಕಟ್ಟಿಸದೆ ಮಧ್ಯದಲ್ಲಿಯೇ ಕೆಲಸ ನಿಲ್ಲಿಸಿದರೆ ಅವನ ಆವರೆಗಿನ ಶ್ರಮವು ವ್ಯರ್ಥವೆನಿಸಿಕ್ಲೇಶ- ಅಪಹಾಸಗಳಿಗೆ ಗುರಿಯಾಗುವನು. ಅದರಂತೆ- ಸಂನ್ಯಾಸಸ್ತು ಮಹಾಬಾಹೋ ದುಃಖಮಾಪ್ರಮಯೋಗತಃ | ಮನೋವಿಕಾರದ ತ್ಯಾಗರೂಪವಾದ ಬಹುಶ್ರಮಸಾಧ್ಯವಾದ ಸಂನ್ಯಾಸದ ಕಂಬವನ್ನು ಕಟ್ಟಿ ಕರ್ಮಯೋಗದ ಸೇತುವೆಯನ್ನು ಮಾತ್ರ ನಿರ್ಮಿಸದೆ ಅರ್ಧದಲ್ಲೇ ಬಿಟ್ಟರೆ ಈ ಪ್ರಯತ್ನ ಸಾಹಸಗಳೆಲ್ಲ ವೃಥಾ ಶ್ರಮವೆನಿಸಿ ದುಃಖ, ಸಂಕಟಗಳಿಗೆ ನಿಮಿತ್ತವಾಗುವವು. ಕರ್ಮಾಚರಣೆಯಿಲ್ಲದ ಸಂನ್ಯಾಸವುಮರ, ಸಸಿಗಳಿಲ್ಲದತೋಟದಂತೆ ಬರೀ ಶೂನ್ಯ ಆದುದರಿಂದ ಕರ್ಮಯೋಗದ ಈ ಎರಡು ಅಂಗಗಳಲ್ಲಿ ಉತ್ತರಾರ್ಧವೆನಿಸಿದ ಕರ್ಮಸಮರ್ಪಣೆಯನ್ನೇ ಪ್ರಧಾನವೆಂದು ಪರಿಗಣಿಸಿದ್ದಾರೆ. ಯೋಗವಿಲ್ಲದ ಸಂನ್ಯಾಸವು ತಲೆಯಿಲ್ಲದ ಶರೀರದಂತಿದ್ದು ಅಪೂರ್ಣವೂ ದುಃಖಕಾರಣವೂ ಎಂದಿದ್ದಾ ರೆ.
Bannanje Govindacharya (1936–2020)Bhagavad Gita Pravachana
ಜ್ಞೇಯಃ ಸ ನಿತ್ಯಸಂನ್ಯಾಸೀ ಯಃ ನದ್ವೇಷ್ಟಿನ ಕಾಂಕ್ಷತಿ | ನಿರ್ದ್ವಂದ್ವಃ ಹಿ ಮಹಾಬಾಹೋ ಸುಖಮ್‌ ಬಂಧಾತ್‌ ಪ್ರಮುಚ್ಯತೇ -- ದ್ವೇಷಿಸದವನು ಮತ್ತು ಬಯಸದವನು ನಿಜವಾದ ಸಂನ್ಯಾಸಿಯೆಂದರಿಯಬೇಕು. ಮಹಾವೀರಾ, ಇಂತಹ ದ್ವಂದ್ವಗಳನ್ನು ಗೆದ್ದವನು ಹಾಯಾಗಿ ಕರ್ಮ ಸೆರೆಯಿಂದ ಪಾರಾಗುತ್ತಾನೆ. ಇಲ್ಲಿ ಅರ್ಜುನನ ಪ್ರಶ್ನೆಗೆ ಕೃಷ್ಣನ ಉತ್ತರ ಒಗಟಿನ ರೂಪದಲ್ಲಿದೆ. ಈ ಶ್ಲೋಕವನ್ನು ಎಚ್ಚರಿಕೆಯಿಂದ ಬಿಡಿಸಿ ಅರ್ಥೈಸಿಕೊಳ್ಳಬೇಕು. ಇಲ್ಲಿ ಹೇಳುವ ಸಂನ್ಯಾಸ ಸಂನ್ಯಾಸಾಶ್ರಮವಲ್ಲ. ಯಾರು ರಾಗ ದ್ವೇಷವನ್ನು ದಾಟಿ ನಿಲ್ಲುತ್ತಾನೋ ಅವನು ಸಂನ್ಯಾಸಿ. ಸ*ಅಹಂ*ನ್ಯಾಸ-ಸಂನ್ಯಾಸ. 'ಸ'. ಅಂದರೆ ಸಂಪೂರ್ಣವಾದ, ಸಮೀಚೇನವಾದ, ದೋಷರಹಿತ ಮತ್ತು ಗುಣಪೂರ್ಣನಾದ ಭಗವಂತ. ಅವನಲ್ಲಿ ನಮ್ಮ ಅಹಂ(ರಾಗ ದ್ವೇಷ ಅಹಂಕಾರ)ನ್ನು ನ್ಯಾಸ ಮಾಡುವುದು ಸಂನ್ಯಾಸ. ಕೃಷ್ಣ ಹೇಳುತ್ತಾನೆ: "ಕರ್ಮಯೋಗ ಕರ್ಮಸಂನ್ಯಾಸಕ್ಕಿಂತ ಮಿಗಿಲು" ಎಂದು. ಏಕೆಂದರೆ ಇಲ್ಲಿ ಅರ್ಜುನ 'ನನಗೆ ಕೌರವರ ಮೇಲೆ ದ್ವೇಷವಿಲ್ಲ, ನಾವೇ ಗೆಲ್ಲಬೇಕು ಎನ್ನು ವ ಬಯಕೆ ಇಲ್ಲ, ನನಗೆ ಯಾವ ಫಲದ ಆಸೆಯೂ ಇಲ್ಲ' ಎಂದು ಯುದ್ಧ ಮಾಡದೇ ನಿರ್ಲಿಪ್ತನಾಗಿ-ನಿಷ್ಕ್ರೀಯನಾಗಿ ಕುಳಿತರೆ ಅದು ಕರ್ಮಸಂನ್ಯಾಸವಾಗುತ್ತದೆ. ಆದರೆ ಹೀಗೆ ಸುಮ್ಮನೆ ಕುಳಿತರೆ ಕರ್ತವ್ಯಕರ್ಮ(ಕರ್ಮಯೋಗ) ಮಾಡಿದಂತಾಗುವುದಿಲ್ಲ . ಇದರಿಂದಾಗಿ ಅಧರ್ಮಕ್ಕೆ ಜಯವಾಗುತ್ತದೆ. ಆದ್ದರಿಂದ ಕರ್ಮಸಂನ್ಯಾಸ ಮತ್ತು ಕರ್ಮಯೋಗ ಜೊತೆ-ಜೊತೆಯಾಗಿರಬೇಕು. ಕರ್ಮಯೋಗವಿಲ್ಲದ ಕರ್ಮಸಂನ್ಯಾಸ ಎಂದೂ ಶ್ರೇಯಸ್ಸನ್ನು ತರುವುದಿಲ್ಲ ಎನ್ನುವುದು ಕೃಷ್ಣನ ಉತ್ತರ. ಸಂನ್ಯಾಸ ಅನ್ನುವುದು ಅರ್ಥಪೂರ್ಣವಾಗಬೇಕಾದರೆ ಕಾಮ ಕ್ರೋಧಗಳ ತ್ಯಾಗದ ಜೊತೆಗೆ ಕ್ರಿಯೆ ಇರಬೇಕು. ಹೋರಾಡಬೇಕು-ಆದರೆ ರಾಗದ್ವೇಷದಿಂದಲ್ಲ. ಕ್ರಿಯೆ ಇಲ್ಲದೆ. ರಾಗ-ದ್ವೇಷ ತ್ಯಾಗಕ್ಕೆ ಅರ್ಥವಿಲ್ಲ. ಆದ್ದರಿಂದ ದ್ವಂದ್ವಾತೀತವಾಗಿ ಕರ್ಮ ಮಾಡಬೇಕು ಎನ್ನುವುದು ಕೃಷ್ಣನ ಸಂದೇಶ. ನಮ್ಮ ಜೀವನವೇ ಒಂದು ಹೋರಾಟ. ಇಲ್ಲಿ ನಮ್ಮ ಕರ್ತವ್ಯಕರ್ಮದಿಂದ ದೂರ ಸರಿದು, ರಾಗ-ದ್ವೇಷ, ಕಾಮ- ಕ್ರೋಧವನ್ನು ಬಿಟ್ಟು, ನಿಷ್ಕ್ರೀಯನಾಗಿ, “ಕರ್ಮಸಂನ್ಯಾಸವನ್ನು ಸಾಧಿಸಿದೆ' ಎಂದುಕೊಂಡರೆ ನಮ್ಮ ಜೀವನ ವ್ಯರ್ಥ. ಅದರಿಂದ ಎಂದೂ ಶ್ರೇಯಸ್ಸಿಲ್ಲ ಮತ್ತು ಮೋಕ್ಷವಿಲ್ಲ. ರಾಗ-ದ್ವೇಷ ತ್ಯಾಗದ ಜೊತೆಗೇ, ಬದುಕು ಎನ್ನುವ ಜೀವನ ಸಂಗ್ರಾಮದಲ್ಲಿ. ನಮ್ಮ ಕರ್ತವ್ಯಕರ್ಮದ ಮುಖೇನ ಹೋರಾಟ ಮಾಡುವುದೇ ನಿಜವಾದ ಜೀವನಧರ್ಮ. ಈ ರೀತಿ ದ್ವಂದ್ವಾತೀತ ಬದುಕನ್ನು ಬಾಳುವವನು ಕರ್ಮದ ಸೆರೆಯಿಂದ ಪಾರಾಗುತ್ತಾನೆ. ಇಲ್ಲಿ ಕೃಷ್ಣ ಅರ್ಜುನನನ್ನು ಮಹಾಬಾಹು ಎಂದು ಸಂಬೋಧಿಸಿದ್ದಾನೆ. ಹಿಂದೆ ಹೇಳಿದಂತೆ ಮಹಾಬಾಹು ಎಂದರೆ ಮಹಾವೀರ ಎನ್ನುವುದು ಮೇಲ್ನೋಟದ ಅರ್ಥ. ಇಲ್ಲಿ ಈ ವಿಶೇಷಣಕ್ಕೆ ವಿಶೇಷ ಅರ್ಥವಿದೆ. 'ಮಹಾಬಾ' ಅಂದರೆ ರಾಗ-ದ್ವೇಷ, ಮತ್ತು ಕಾಮನೆಗಳ ಮಡುವಿನಲ್ಲಿರುವವ. ಇಂತಹ ಮಹತ್ತರವಾದ ರಾಗ-ದ್ವೇಷಗಳನ್ನು ತ್ಯಾಗ ಮಾಡಿದವ ಮಹಾಬಾಹು. "ನಿನ್ನಲ್ಲಿ ಕರ್ಮಸಂನ್ಯಾಸವಿದೆ, ಅದರ ಜೊತೆಗೆ ಕರ್ಮಯೋಗ ಮಾಡಲು ಅರ್ಹತೆಯುಳ್ಳ ಮಹಾವೀರ ನೀನು" ಎನ್ನುವ ಧ್ವನಿ ಈ ಸಂಬೋಧನೆಯಲ್ಲಿದೆ. ನಮ್ಮ ಜೀವನ ಸಂಗ್ರಾಮದಲ್ಲಿ ರಾಗ-ದ್ವೇಷಗಳನ್ನು ಬಿಟ್ಟು ಕರ್ಮ ಮಾಡಬೇಕು. ಕರ್ಮಸಂನ್ಯಾಸ ಮತ್ತು ಕರ್ಮಯೋಗ ಎರಡೂ ಒಟ್ಟಿಗಿರಬೇಕು ಎನ್ನುವುದು ಮೂಲ ಸಂದೇಶ. ಅದಕ್ಕೆ ಹೊಂದಿಕೆಯಾಗುವಂತೆ ಇಲ್ಲಿ 'ಮಹಾಬಾಹು' ಎನ್ನುವ ವಿಶೇಷಣ ಬಳಕೆಯಾಗಿದೆ.
Bibek Debroy (1955–2024)The Bhagavad Gita
(3) ‘O mighty-armed!4 He who does not desire and he who does not hate, know him to be a perpetual sannyasi.5 Freed from opposites,6 he is happily freed from bondage.’