साङ्ख्ययोगौ पृथग्बालाः प्रवदन्ति न पण्डिताः ।
एकमप्यास्थितः सम्यगुभयोर्विन्दते फलम् ॥
sāṅkhyayogau pṛthagbālāḥ pravadanti na paṇḍitāḥ |
ekamapyāsthitaḥ samyagubhayorvindate phalam ||
Sri Madhvacharya (1238–1317)Bhagavad Gita Tatparya Nirnaya
बालास्तु न्यासशब्देन यत्याश्रममेव स्वीकृत्य तत्स्थानामेव साङ्ख्यशब्दोदितज्ञानाधिकारो
गृहस्थानामेव योगशब्दोदितकर्माधिकार इति मन्यन्ते। तन्न पण्डिता मन्यन्ते। कुतः ?
यस्माज्ज्ञानमार्गं कर्ममार्गं च सम्यगास्थित उभयोरपि फलं प्राप्नोति॥04॥
Swami Sivananda (1887–1963)Bhagavad Gita
4. Children, not the wise, speak of knowledge and the Yoga of action or the performance of
action as though they are distinct and different; he who is truly established in one obtains the fruits
of both.
Sri Vishwesha Tirtharu (1931–2019)Gitasaroddhara
5.2–5.6 · ಸಂನ್ಯಾಸ ಮತ್ತು ಕರ್ಮಯೋಗ
ಸಂನ್ಯಾಸ ಮತ್ತು ಕರ್ಮಯೋಗ
ಶ್ರೀಕೃಷ್ಣನು ತನ್ನ ಉಪದೇಶದಲ್ಲಿ ಕಾಮ-ಕ್ರೋಧ ಮೊದಲಾದ
ಹೃದಯದೋಷನನ್ನು ಪರಿತ್ಯಜಿಸುವುದು ಮತ್ತು ಈಶ್ವರಾರ್ಪಣ ಬುದ್ಧಿಯಿಂದ
ಕರ್ತವ್ಯವನ್ನಾಚರಿಸುವುದು - ಈ ಎರಡು ಸಂಗತಿಗಳನ್ನು ಮುಖ್ಯವಾಗಿ
ಬೋಧಿಸಿರುವನು. ಈವರೆಗಿನ ಬೋಧನೆಯ ಸಾರಾಂಶವುಇದೇ ಆಗಿದೆ. ಆದರೆ
ಇವೆರಡರಲ್ಲಿ ಯಾವುದು ಪ್ರಧಾನವೆಂಬುದನ್ನು ತಿಳಿಯುವ ಕುತೂಹಲವನ್ನು
ಅರ್ಜುನನು ವ್ಯಕ್ತಪಡಿಸುತ್ತಾನೆ. ಕಾಮಾದಿ ಮನೋದೋಷಗಳ ನಿವಾರಣೆಯೇ
ಮುಖ್ಯವಾಗಿರುವುದಾದರೆ ಅದನ್ನೇ ಸಾಧಿಸಿದರೆ ಸಾಲದೆ? ಕಾಮದ್ವೇಷಗಳ
ಜಾಲವಾದ ಈ ಯುದ್ಧದ ತೊಡಕೆನಿಂದ ತಾನು ಪಾರಾಗಬಾರದೇಕೆ?
ಎಂಬುದು ಅರ್ಜುನನ ವಿಚಾರವಾಗಿದೆ. ಸಂನ್ಯಾಸಮತ್ತು ಕರ್ಮ ಇವೆರಡನ್ನೂ
ಒಬ್ಬನೇ ನಿರ್ವಹಿಸಲಾರ. ಒಂದು ಸಂನ್ಯಾಸಿಗಳಿಗೆ ಸಂಬಂಧಿಸಿದರೆ ಇನ್ನೊಂದು
ಗೃಹಸ್ಥರಿಗಾಗಿಯೇ ಮೀಸಲು. ಪರಸ್ಪರ ವಿರೋಧಿಗಳಾದ ಈ ಸಂನ್ಯಾಸಮತ್ತು
ಕರ್ಮಯೋಗಗಳಲ್ಲಿ ತಾನು ಯಾವುದರ ಆಯ್ಕೆ ಮಾಡಲಿ? ಎನ್ನುವುದೂ
ಅರ್ಜುನನ ಜಿಜ್ಞಾ; ಸೆಯಾಗಿದೆ.
ಇದಕ್ಕೆ ಭಗವಂತನ ಉತ್ತರ ಹೀಗಿದೆ: ಈ ಸಂನ್ಯಾಸ ಮತ್ತು
ಕರ್ಮಯೋಗಗಳು ಪರಸ್ಪರ ವಿರೋಧಿಗಳಾಗಿರದೆ ಪರಸ್ಪರ ಪೂರಕಗಳಾಗಿವೆ.
ಸಂನ್ಯಾಸ ಮತ್ತು ಕರ್ಮಯೋಗ - ಈ ಶಬ್ದಗಳಿಂದ ಯತಿಧರ್ಮ ಹಾಗೂ
ಗೃಹಸ್ಫಧರ್ಮಗಳನ್ನು ಇಲ್ಲಿ ನಿರೂಪಿಸಲಾಗಿಲ್ಲ. ಸಂನ್ಯಾಸ ಎಂದರೆ ಮನಸ್ಸಿನಲ್ಲಿ
ಹುದುಗಿರುವ ಕಾಮ, ದ್ವೇಷ್ಠ ಮೋಹ ಮೊದಲಾದ ವಿಕಾರಗಳ
ವಿಮೋಚನೆಯೇ ಆಗಿದೆ. ಇದು ಕರ್ಮಯೋಗದ ಪೂರ್ವಾಂಗವಾಗಿದೆ.
ಕಾಮದ್ವೇಷಾದಿ ಹೃದಯ ದೋಷಗಳನ್ನು ಕಿತ್ತೊಗೆದು ಅಂತಃಕರಣವನ್ನು
ಹದಗೊಳಿಸಿದ ನಂತರಕರ್ಮದ ಪವಿತ್ರಾಂಕುರಗಳನ್ನು ಅಲ್ಲಿ ನೆಡದಿದ್ದರೆ ಆವರೆಗೆ
ಮಾಡಿದ ಪ್ರಸಾಧನ ಪರಿಷ್ಕರಣಗಳೆಲ್ಲ ವ್ಯರ್ಥವಾಗುವುದಿಲ್ಲವೆ? ಹೊಲದ
ಕಳೆಗಳನ್ನು ಟ್ರೊಗೆದು ಅದನ್ನು ಕೃಷಿಯೋಗ್ಯವಾಗುವಂತೆ ಮಾಡಲು ಬೇಕಾದ
ಸಾಧನ ಸಂವಿಧಾನಗಳನ್ನು ನಡೆಸಿ ಕೃಷಿಯನ್ನು ಮಾತ್ರ ಮಾಡದಿದ್ದಲ್ಲಿ
ಅಷ್ಟರವರೆಗಿನ ಶ್ರಮ ಸಾಧನೆಯೆಲ್ಲ ಸಂಪೂರ್ಣ ವಿಫಲವೆನಿಸುವುದು.
ಗೀತೆಯಲ್ಲಿ ಇದುವರೆಗೆ ನಿರೂಪಿಸಲಾದರಾಗದ್ವೇಷಾದಿ ಪರಿತ್ಯಾಗರೂಪವಾದ
ಈ ಸಂನ್ಯಾಸವು ಮನಸ್ಸನ್ನು ಹದಗೊಳಿಸುವ ಪ್ರಕ್ರಿಯೆಯೇ ಆಗಿದೆ.
ಜ್ಞೇಯಃ ಸ ನಿತ್ಯಸಂನ್ಯಾಸೀ ಯೋನ ದ್ವೇಷ್ಟಿನ ಕಾಂಕ್ಚತಿ [
ಸುಖದುಃಖಗಳ ದ್ವಂದ್ವವನ್ನು ದಾಟನಿಂತು ದ್ವೇಷ-ಕಾಂಕ್ಷೆ ಗಳನ್ನು ಕಿತ್ತು
ಒಗೆದ ವ್ಯಕ್ತಿಯೇ ಸಂನ್ಯಾಸಿ ಎನಿಸುವನು. ಇಂತಹ ಸಂನ್ಯಾಸಿಯನ್ನು ದಂಡ
ಕಾಷುಯಗಳಿಂದಲೇ ಗುರುತಿಸಬೇಕಾಗಿಲ್ಲ. ಸಂಸಾರ ಸಮಾಜಗಳ ಮಧ್ಯ
ದಲ್ಲಿದ್ದುಕೊಂಡೇ ಈ ಸಂನ್ಯಾಸಿಮನೋವೃತ್ತಿಯನ್ನು ಪಡೆಯಲು ಎಲ್ಲರೂ
ಪ್ರಯತ್ನಿಸಬಹುದು. ಆದರೆ ಈ ಮಾನಸಿಕ ದೋಷಗಳ ಪರಿತ್ಯಾಗವೇ ಅಂತಿಮ
ಸಾಧನೆಯೆಂದು ನಾವು ಗ್ರಹಿಸಬಾರದು. ಭಗವಂತನ ಸಾಕ್ಟಾತ್ಕಾರಕ್ಕಾಗಿ ನಾವು
ಮಾಡಲಿರುವಮಹಾಸಾಧನೆಗೆ ಇದು ಪೂರ್ವಭೂಮಿಕೆಯಾಗಿರುವುದನ್ನು ನಾವು
ಗಮನದಲ್ಲಿಟ್ಟುಕೊಳ್ಳಬೇಕು. ಗೀತೆಯು ಹೇಳಿದ ಈ ನಿತ್ಯಸಂನ್ಯಾಸವು ಮನಸ್ಸಿನ
ಪರಿಷ್ಕರಣಮಾತ್ರವಾಗಿದ್ದು ಭಗವದರ್ಪಣಭಾವನೆಯಿಂದ ನಾವು ಮಾಡುವ
ಕರ್ತವ್ಯಾನುಷ್ಠುನದಿಂದಲೇ ಅದುಸಮಗ್ರತೆಯನ್ನು ಪಡೆಯುವುದು. ಹೀಗೆ ಈ
ಸಂನ್ಯಾಸ ಹಾಗೂ ಕರ್ಮಯೋಗಗಳು ಪರಸ್ಪರ ಪೂರಕಗಳಾಗಿದ್ದು ರಾಗಾದಿ
ಪರಿವರ್ಜನದಿಂದರೇ ನಾವೃತೃಪ್ಪರಾಗದೆ ನಿಷ್ಠಾಮಕರ್ಮಾಚರಣೆ ಯಿಂದನಮ್ಮ
ಸಾಧನೆಗೆ ಪರಿಪೂರ್ಣತೆಯನ್ನು ತಂದುಕೊಳ್ಳಬೇಕು. ಈ ಅಭಿಪ್ರಾಯದಿಂದಲೇ,
ತಯೋಸ್ತು ಕರ್ಮಸಂನ್ಯಾಸಾತ್ ಕರ್ಮಯೋಗೋ ವಿಶಿಷ್ಠತೇ |
ಎಂದು ಸಂನ್ಯಾಸಕ್ಕಿಂತಲೂ ಕರ್ಮಯೋಗಕ್ಕೆ ಹೆಚ್ಚಿನ ಮಹತ್ತ್ವವನ್ನು ಗೀತೆಯಲ್ಲಿ
ಹೇಳಲಾಗಿದೆ. ಇಲ್ಲಿ ಬಂದಿರುವ ಕರ್ಮಸಂನ್ಯಾಸಹಾಗೂ ಕರ್ಮಯೋಗಶಬ್ಬಗಳ
ಭಾವಾರ್ಥಗಳನ್ನು ಗ್ರಹಿಸದೆ ಅನೇಕರು ಗೊಂದಲಕ್ಕೊಳಗಾಗಿದ್ದಾರೆ. ಅತಿ
ಕ್ಲಿಷ್ಟವಾದ ರೀತಿಯಲ್ಲಿ ಈ ವಾಕ್ಯದ ಅರ್ಥವನ್ನು ವಿವರಿಸಲು ಪ್ರಯತ್ನಿಸಿದ್ದಾರೆ.
ನಿಷ್ಕುಮಕರ್ಮದ ಸಹಕಾರದಿಂದಪಡೆಯಲಾಗುವ, ಕರ್ಮಯೋಗಕ್ಕಿಂತಲೂ
ಶ್ರೇಷ್ಠ ಅವಸ್ಥೆ ಎನಿಸಿರುವ ಜ್ಞಾನಯೋಗವನ್ನು ಸಂನ್ಯಾಸವೆಂಬ ಶಬ್ದದಿಂದ
ವರಿಗ್ರಹಿಸಿ, ಈ ಸಂನ್ಯಾಸಕ್ಕಿಂತಲೂ ಕರ್ಮಯೋಗವುಹೇಗೆ ಉತ್ತಮ ಎಂಬುದು
ಎಲ್ಲರಿಗೂ ಸಮಸ್ಯೆಯಾಗಿತ್ತು. ಕರ್ಮಸಂನ್ಯಾಸವೆಂದರೆ ಕರ್ಮಯೋಗದ
ನಂತರದ ಜ್ಞಾನಾವಸ್ಥೆ ಯೆಂದಾಗಲಿ ಸನಕಾದಿಗಳು ಅವಲಂಬಿಸಿದ ಜ್ಞಾನ
ಪ್ರಧಾನವಾದ ಜ್ಞಾನಯೋಗ ಮಾರ್ಗವೆಂದಾಗಲಿ ಇಲ್ಲಿ ಅರ್ಥವಲ್ಲ.
ಇವೆರಡರಲ್ಲಿಯೂ ವಾಸ್ತವವಾಗಿ ಕರ್ಮಸಂನ್ಯಾಸಕ್ಕೆ ಪ್ರಸಕ್ತಿಯೇಇರುವುದಿಲ್ಲ.
ಮೋಕ್ಟಪರ್ಯಂತವಾಗಿ ಕರ್ಮವು ಅವಶ್ಯ ಆಚರಣೇಯವಿರುವುದರಿಂದ
ಪ್ರತಿಯೊಂದು ಅವಸ್ಥೆಯಲ್ಲಿಯೂ ಕರ್ತವ್ಯದ ಸಂಬಂಧ ಇದ್ದೇ ಇರುವುದು.
ಹೀಗಿರುವಾಗ ಕರ್ಮ ಸಂನ್ಯಾಸಕ್ಕೆ ಯಾವ ಸಂದರ್ಭದಲ್ಲಿಯೂ ಅವಕಾಶವೇ
ಇರುವುದಿಲ್ಲ. ಆದುದರಿಂದ ಇಲ್ಲಿ ನಿರೂಪಿತವಾದ ಕರ್ಮಸಂನ್ಯಾಸವು
ಕರ್ಮಯೋಗದ ಪೂರ್ವಾವಸ್ಥೆಯಾದ ನಿಷ್ಕುಮಕರ್ಮದ ಸಾಧನೆಗೆ ಅತ್ಯಂತ
ಸಹಾಯಕವೂ ಆದರಾಗದ್ವೇಷಾದಿಗಳ ತ್ಯಾಗವೇ ಆಗಿದೆ. ಕರ್ಮಯೋಗದಲ್ಲಿ
ಪೂರ್ವರಂಗವೆನಿಸಿದ ಈ ಸಂನ್ಯಾಸಕ್ಕಿಂತ ಕರ್ಮಯೋಗವು ಶ್ರೇಷ್ಠವಾಗಿದ್ದು
ರಾಗದ್ವೇಷಾದಿ ಪರಿತ್ಯಾಗದಲ್ಲಿಯೇ ನಮ್ಮ ಪ್ರಯತ್ನದ ವರ್ಯವಸಾನವಾಗದೆ
ಕರ್ಮಯೋಗಪರ್ಯಂತವಾಗಿ ಮುನ್ನಡೆದು ಆತ್ಯಂತಿಕ ಸಿದ್ಧಿಯನ್ನು
ಪಡೆಯಬೇಕೆನ್ನುವ ಅರ್ಥದಲ್ಲಿ ಯಾವ ವಿವರ್ಯಾಸ ಗೊಂದಲಗಳಿಗೂ
ಎಡೆಯಿಲ್ಲ. ಶ್ರೀಮಧ್ವಾಚಾರ್ಯರು ಯಾವಕ್ಷಿಷ್ಣತೆಗೂ ಅವಕಾಶ ನೀಡದೆ ಈ
ಸರಳಾರ್ಥವನ್ನು ಬೋಧಿಸಿ, ಗೀತೆಯ ನಿಜವಾದತಾತ್ಪರ್ಯವನ್ನು ಅರುಹಿದ್ದಾರೆ.
ಶ್ರೀ ಶಂಕರಾಚಾರ್ಯರ ವಿವೇಚನೆ ಹೀಗಿದೆ ""ಸಂಸ್ಯಾಸವೆಂದರೆ ಕರ್ಮಗಳ
ಸಂಪೂರ್ಣ ಪರಿತ್ಯಾಗವೇ ಆಗಿದೆ. ಇಂತಹ ಸಂನ್ಯಾಸವೂ ನಿಷ್ಕುಮ
ಕರ್ಮಾನುಷ್ಠಾನರೂಪಿಯಾದಕರ್ಮಯೋಗವೂಪರಸ್ಪರವಿರೋಧಿಯಾಗಿವೆ.
ಇವೆರಡು ಒಂದೇ ಕಡೆ ಇರಲು ಸಾಧ್ಯವೇ ಇಲ್ಲ. ಬ್ರಹ್ಮಜ್ಞಾನವು ಸಂಭವಿಸಿದ
ಕೂಡಲೇ ಮಾಯಾಮಯವಾದ ಪ್ರಪಂಚವೇ ಕರಗಿ ಹೋಗುವುದರಿಂದ
ಜ್ಞಾನಿಗೆ ವಿಶ್ವದ ಕಲ್ಪನೆಯೇ ಇರಲಾರದು. ಇಂತಹ ಅವಸ್ಥೆಯಲ್ಲಿ ಕರ್ಮದ
ಆಚರಣೆಯೆಂತು? ಹೀಗೆ ಜ್ಞಾನಿಗೆ ಕರ್ಮಸಂನ್ಯಾಸದಲ್ಲಿ ಮಾತ್ರ ಅವಕಾಶವಿದ್ದು
ಕರ್ಮಯೋಗದ ಪ್ರಸಕ್ತಿಯೇ ಇಲ್ಲದಿರುವಾಗ ಸಂನ್ಯಾಸಕ್ಕಿಂತಲೂ
ಕರ್ಮಯೋಗವೇಶ್ರೇಷ್ಠವೆನ್ನುವಮಾತಿಗೆ ಅರ್ಥವೇ ಉಳಿಯುವುದಿಲ್ಲ. ಎರಡು
ಮಾರ್ಗಗಳನ್ನೂ ಪರಿಗ್ರಹಿಸಲು ಸಂದರ್ಭವಿದ್ದರೆ, ಒಂದನ್ನು ಶ್ರೇಷ್ಠವೆಂದೂ
ಇನ್ನೊಂದನ್ನು ಅಮುಖ್ಯವೆಂದೂ ಹೇಳಬಹುದು. ಜ್ಞಾನಿಯಲ್ಲಿ ಕರ್ಮ
ಯೋಗಕ್ಕೆ ಅವಕಾಶವೇ ಇಲ್ಲದಿರುವಾಗ ಸಂನ್ಯಾಸಕ್ಕಿಂತಲೂ ಕರ್ಮಯೋಗವು
ಶ್ರೇಷ್ಠವೆಂದು ಹೇಳುವುದು ಅನುಚಿತವಾಗುವುದು. ಆದುದರಿಂದ ಗೀತೆಯ ಈ
ಸಂದರ್ಭವು ಕರ್ಮಸಂನ್ಯಾಸದ ಅವಸ್ಥೆಯನ್ನು ತಲುಪದ ಅಜ್ಞಾನಿಯಾದವ್ವಕ್ಕಿಗೆ
ಸಂಬಂಧಿಸಿರುವುದು. ಅಜ್ಞಾ; ನಿಯಾದ ಪುರುಷನಿಗೆ ಕರ್ಮಸಂನ್ಯಾಸಕ್ಕಿಂತಲೂ
ಕರ್ಮಯೋಗವೇ ಶ್ರೇಷ್ಠವೆಂದು ಗೀತೆಯ ಆಶಯವಾಗಿದೆ.''
ಗೀತೆಯಲ್ಲಿ ಸಾಮಾನ್ಯವಾಗಿ ಬಂದಿರುವ ಮಾತನ್ನು ತಮ್ಮ ವಿಚಾರ
ಸಂಪ್ರದಾಯಗಳಿಗೆ ಅನುಗುಣವಾಗಿ ಎಳೆಯುವ ಪ್ರಯತ್ನವನ್ನು ಈ
ವಿವೇಚನೆಯಲ್ಲಿ ಶ್ರೀಶಂಕರಾಚಾರ್ಯರು ಮಾಡಿದಂತಿದೆ. ಎಲ್ಲರಿಗೂ
ಅನ್ವಯವಾಗುವವಿಚಾರವೆಂದು ಗೀತೆಯಲ್ಲಿ ಕಂಡುಬಂದಿರುವ ವಚನವನ್ನು
ಅಜ್ಞಾನಿಗಳಿಗೆ ಮಾತ್ರ ಸಂಬಂಧಿಸಿದ್ದೆಂದು ಪರಿಮಿತಗೊಳಿಸುವುದು ಅಷ್ಟು
ಸಮರ್ಪಕವೆನಿಸಲಾರದು. ಜ್ಞಾನಿಗಳಿಗೆ ಕರ್ಮಯೋಗದ ಪ್ರಸಂಗವಿಲ್ಲದಿರು
ವಂತೆ, ಅಜ್ಞಾನಿಗಳಿಗೆ ಕರ್ಮಸಂನ್ಯಾಸದ ಸಂದರ್ಭವೂ ಇರುವುದಿಲ್ಲ.
ಶಂಕರಾಚಾರ್ಯರ ವಾದಸರಣಿಯಂತೆ ಜ್ಞಾನವನ್ನು ಪಡೆದನಂತರವೇ
ಕರ್ಮಸಂನ್ಯಾಸವಾಗುವುದರಿಂದ ಜ್ಞಾನಿಗಳಲ್ಲಿ ಕರ್ಮಸಂನ್ಯಾಸ ಒಂದೇ
ಉಳಿಯುವಂತೆ ಅಜ್ಞಾನಿಗಳಲ್ಲಿ ಕರ್ಮಯೋಗವು ಮಾತ್ರವಿರುತ್ತದೆ. ಇಂತಹ
ಸಂದರ್ಭದಲ್ಲಿ ಕರ್ಮಸಂನ್ಯಾಸ ಹಾಗೂ ಕರ್ಮಯೋಗಗಳ ತುಲನೆಯನ್ನು
ಮಾಡುತ್ತ ಒಂದರ ಶ್ರೇಷ್ಠತೆಯನ್ನು ವಿವೇಚಿಸುವ ಪ್ರಸಂಗವು ಎಂದಿಗೂ
ಬರುವುದಿಲ್ಲ. ಹೀಗಾಗಿ ಗೀತೆಯ ಈ ವಾಕ್ಯವು ಅನಾವಶ್ಯಕವೆನಿಸುವ ಸನ್ನಿವೇಶ
ಒದಗುವುದು. ಆದುದರಿಂದ ಶ್ರೀಮಧ್ವಾಚಾರ್ಯರು ಬೋಧಿಸಿದ
ಸರಳಾರ್ಥವೇ ಸಮರ್ಪಕವೆನಿಸುತ್ತದೆ. ಸಂನ್ಯಾಸ ಮತ್ತುಕರ್ಮಯೋಗಗಳಿಗೆ
ವಿರೋಧವಿಲ್ಲ. ಇವು ಎರಡನ್ನೂ ಒಬ್ಬನಲ್ಲೇ ಸಮನ್ವಯಗೊಳಿಸಬೇಕು
ಎಂಬುದಾಗಿ ಶ್ರೀಮಧ್ವಾಚಾರ್ಯರು ಬೋಧಿಸಿದ ವಿಚಾರವು ಗೀತೆಯಲ್ಲಿ
ಅಲ್ಲಲ್ಲಿ ನಿರೂಪಿತವಾಗಿದೆ. ಸಂನ್ಯಾಸವೆಂದರೆ ಕರ್ಮತ್ಯಾಗವಲ್ಲ.
ಕಾಮನಾತ್ಯಾಗವೇ ಸಂನ್ಯಾಸವೆಂದು
ಜ್ಞ್ನ (ಯಃ ಸ ನಿತ್ಯಸಂನ್ಯಾಸೀ ಯೋ ನ ದ್ವೇಷ್ಟಿ ನ ಕಾಂಕ್ಚ ತಿ।
ಕಾಮ್ಯಾನಾಂ ಕರ್ಮಣಾಂ ನ್ಯಾಸಂ ಸಂನ್ಯಾಸ ಕವಯೋ ವಿದುಃ ।
ಮೊದಲಾದ ಕಡೆಗಳಲ್ಲಿ ಹೇಳಲಾಗಿದೆ.
ಸ ಸಂನ್ಯಾಸೀ ಚಯೋಗೀಚ।
ಎಂದು ಆರನೆಯ ಅಧ್ಯಾಯದಲ್ಲಿ ಸಂನ್ಯಾಸ-ಕರ್ಮಯೋಗಗಳ ಸಮಾವೇಶವನ್ನು
ಸುಸ್ಪಷ್ಟವಾಗಿ ತಿಳಿಸಲಾಗಿದೆ. ಇವೆಲ್ಲ ಮಾತುಗಳ ಬೆಳಕಿನಲ್ಲಿ ಈ ಭಾಗವನ್ನು
ಪರಿಶೀಲಿಸಿದಲ್ಲಿ ರಾಗದ್ವೇಷಾದಿ ಮನೋವಿಕಾರಗಳ ಪರಿತ್ಯಾಗ ಹಾಗೂ
ಭಕ್ತಿಯಿಂದ, ಸಮರ್ಪಣಬುದ್ಧಿಯಿಂದ ಕರ್ಮಾನುಷ್ಠಾನ ಇವೆರಡು ಜ್ಞಾನದ
ಪ್ರಧಾನಸಾಧನಗಳ ವಿವೇಚನೆ ಮಾಡಿ, ಇವೆರಡರ ಆವಶ್ಯಕತೆಯನ್ನೂ ಪರಸ್ಪರ
ಸಂಬಂಧವನ್ನೂ ಇಲ್ಲಿ ಪ್ರತಿಪಾದಿಸಿದ್ದಾರೆಂಬುದು ಸ್ಪಷ್ಟವಾಗುವುದು.
ನಿಜವಾಗಿಯೂ ಇವೆರಡು ಸೇರಿಯೇ ಕರ್ಮಯೋಗದನಿಷ್ಟತ್ತಿಯಾಗುವುದು.
ರಾಗದ್ವೇಷಾದಿ ಮನೋವಿಕಾರಗಳ ತ್ಯಾಗವು ಕರ್ಮಯೋಗದ ಮೊದಲನೇ
ಭಾಗವಾಗಿದ್ದರೆ ಕರ್ಮಗಳನ್ನು ಆಚರಿಸಿ ಭಗವಂತನಿಗೆ ಅರ್ಪಿಸುವವ್ಯಾಪಾರವೇ
ಅದರ ಉತ್ತರಾರ್ಧವೆನಿಸುವುದು. ಇವೆರಡರ ಸಮನ್ವಯವೇ ಸಮಗ್ರ
ಕರ್ಮಯೋಗವೆನಿಸುವುದರಿಂದ ಇವುಗಳಲ್ಲಿ ಯಾವುದು ಶ್ರೇಷ್ಠವೆಂಬಪ್ರಶ್ನೆಯೇ
ಉದ್ಭವಿಸುವುದಿಲ್ಲ. ಕಟ್ಟಡಕ್ಕೆ ತಳಹದಿಯೂ ಬೇಕು, ಮೇಲುಭಾಗದಮಾಡಿನ
ಹೊದಿಕೆಯೂ ಬೇಕು. ಇವುಗಳಲ್ಲಿ ಯಾವುದು ಶ್ರೇಷ್ಠವೆಂದು ಯಾರೂ
ಚರ್ಚಿಸುವುದಿಲ್ಲ. ಆದರೆತಳಹದಿಯನ್ನು ಮಾತ್ರ ಕಟ್ಟಿಸಿ ಮಾಡುಗೋಡೆಗಳನ್ನು
ಕಟ್ಟಿಸದೆ ಮಧ್ಯದಲ್ಲಿಯೇ ಕೆಲಸ ನಿಲ್ಲಿಸಿದರೆ ಅವನ ಆವರೆಗಿನ ಶ್ರಮವು
ವ್ಯರ್ಥವೆನಿಸಿಕ್ಲೇಶ- ಅಪಹಾಸಗಳಿಗೆ ಗುರಿಯಾಗುವನು. ಅದರಂತೆ-
ಸಂನ್ಯಾಸಸ್ತು ಮಹಾಬಾಹೋ
ದುಃಖಮಾಪ್ರಮಯೋಗತಃ |
ಮನೋವಿಕಾರದ ತ್ಯಾಗರೂಪವಾದ ಬಹುಶ್ರಮಸಾಧ್ಯವಾದ ಸಂನ್ಯಾಸದ
ಕಂಬವನ್ನು ಕಟ್ಟಿ ಕರ್ಮಯೋಗದ ಸೇತುವೆಯನ್ನು ಮಾತ್ರ ನಿರ್ಮಿಸದೆ
ಅರ್ಧದಲ್ಲೇ ಬಿಟ್ಟರೆ ಈ ಪ್ರಯತ್ನ ಸಾಹಸಗಳೆಲ್ಲ ವೃಥಾ ಶ್ರಮವೆನಿಸಿ ದುಃಖ,
ಸಂಕಟಗಳಿಗೆ ನಿಮಿತ್ತವಾಗುವವು. ಕರ್ಮಾಚರಣೆಯಿಲ್ಲದ ಸಂನ್ಯಾಸವುಮರ,
ಸಸಿಗಳಿಲ್ಲದತೋಟದಂತೆ ಬರೀ ಶೂನ್ಯ ಆದುದರಿಂದ ಕರ್ಮಯೋಗದ ಈ
ಎರಡು ಅಂಗಗಳಲ್ಲಿ ಉತ್ತರಾರ್ಧವೆನಿಸಿದ ಕರ್ಮಸಮರ್ಪಣೆಯನ್ನೇ
ಪ್ರಧಾನವೆಂದು ಪರಿಗಣಿಸಿದ್ದಾರೆ. ಯೋಗವಿಲ್ಲದ ಸಂನ್ಯಾಸವು ತಲೆಯಿಲ್ಲದ
ಶರೀರದಂತಿದ್ದು ಅಪೂರ್ಣವೂ ದುಃಖಕಾರಣವೂ ಎಂದಿದ್ದಾ ರೆ.
5.4–5.5 · ಜ್ಞಾನ ಕರ್ಮಗಳಲ್ಲಿ ಅವಿರೋಧ
ಜ್ಞಾನ ಕರ್ಮಗಳಲ್ಲಿ ಅವಿರೋಧ
ಇಲ್ಲಿ ಒಂದು ಪ್ರಶ್ನೆ ಉದ್ಭವಿಸಬಹುದು. ರಾಗದ್ವೇಷವರ್ಜನ,
ಕರ್ಮಾನುಷ್ಠುನ ಇವೆರಡು ಸೇರಿ ಒಂದು ಸಮಗ್ರಸಾಧನೆಯಾಗುವುದು ಹೇಗೆ?
ಒಂದು ಜ್ಞಾನಕ್ಕೆ ವಿರೋಧಿ, ಇನ್ನೊಂದು ಜ್ಞಾನಕ್ಕೆ ಪೋಷಕ. ಹೀಗೆ
ವಿರುದ್ಧಮುಖಗಳಾದ ಈ ಸಂನ್ಯಾಸ ಹಾಗೂ ಕರ್ಮಗಳೆರಡೂ ಸುಸಂಗತಗಳಾಗಿ
ಒಂದು ಮಹಾಘಲವನ್ನು ಹೇಗೆ ಸಾಧಿಸಿಕೊಡಬಲ್ಲವು? ವಿಷಯವೈರಾಗ್ಯವು
ಜ್ಞಾನದ ಸಾಧನವಾಗಿದೆ. ಪ್ರಾಪಂಚಿಕ ವಿಷಯದಲ್ಲಿ ಆಸಕ್ತಿ ಇರುವವನಿಗೆ ಎಷ್ಟು
ಉಪದೇಶಗಳನ್ನು ನೀಡಿದರೂ ಅದು ಬೆಂಕಿಗಾಗಿ ಹಸಿ ಕಟ್ಟಿಗೆಯನ್ನು
ಊದಿದಂತೆ. ಎಷ್ಟು ಪ್ರಯತ್ನಪಟ್ಟರೂ ವಿಷಯವೈರಾಗ್ಯವಿಲ್ಲದ, ಆಸಕ್ತಿಯಿಂದ
ತುಂಬಿದ ಹೃದಯದಲ್ಲಿ ಜ್ಞಾನದ ಕಿಡಿಯು ಮಿಂಚಲಾರದು. ಆದುದರಿಂದ
ಕಾಮದ್ವೇಷಾದಿಗಳ ಪರಿತ್ಯಾಗವೆನ್ನುವ ವಿಷಯವೈರಾಗ್ಯರೂಪವಾದ ಸಂನ್ಯಾಸವು
ಜ್ಞಾನಕ್ಕೆ ಅಂತರಂಗ ಸಾಧನವಾಗಿದೆ. ಆದರೆ. ಕರ್ಮಾನುಷ್ಠುನವನ್ನು
ಜ್ಞಾನವಿರೋಧಿಯೆಂದೇ ಅನೇಕಕಡೆಗಳಲ್ಲಿ ವರ್ಣಿಸಿದ್ದಾರೆ. ಕರ್ಮಾನುಷ್ಠಾನ
ಮಾಡುವವರನ್ನು ನಿಂದಿಸುವವಾಕ್ಯಗಳೂ ಉಪನಿಷತ್ ಹಾಗೂ ಭಾಗವತದಲ್ಲಿ
ದೊರೆಯುವವು. "“ಅಗ್ನಿಮುಗ್ಧ”ರು-ಯಜ್ಞದ ಅಗ್ನಿಯಲ್ಲೇ ಮೋಹ
ಗೊಂಡವರು ಅರ್ಥಾತ್ ಕರ್ಮಾಸಕ್ತರು. '"ಧೂಮತಾಂತ''ರು- ಹೋಮ
ಧೂಮಗಳಿಂದ ಗ್ಲಾನಿಗೊಂಡವರು. ""ಧೂಮಧೂವ್ರಾತ್ಮ''ರು - ಯಜ್ಞಾ
ಗ್ನಿಯ ಹೊಗೆಯನ್ನು ಸೇವಿಸಿ ಇವರ ಅಂತಃಕರಣವೇ ಮಲಿನವಾಗಿದೆ ಎಂದು
ಮುಂತಾಗಿಕರ್ಮಾನುಷ್ಠಾತೃಗಳನ್ನು ಜರೆದಿದ್ದಾರೆ. ಈಕರ್ಮಮಾರ್ಗವು ಜ್ಞಾನಕ್ಕೆ
ವಿರೋಧಿಯೆಂದೂ ಅಲ್ಲಿ ಬಣ್ಣಿಸಿದ್ದಾರೆ. ಹೀಗಿರುವಾಗ ಜ್ಞಾನಕ್ಕೆ
ಅಂತರಂಗಸಾಧನವಾದ ಸಂನ್ಯಾಸವನ್ನೂ ಜ್ಞಾನಕ್ಕೆ ವಿರೋಧಿಯಾದ ಕರ್ಮದ
ಜಾಲವನ್ನೂ ಜೋಡಿಸಿ ಅದನ್ನು ಕರ್ಮಯೋಗವೆಂದು ಹೇಗೆ ಕರೆದಿದ್ದಾರೆ?
ಸಂನ್ಯಾಸಕ್ಕಿಂತ ಕರ್ಮಾಚರಣೆ ಶ್ರೇಷ್ಠವೆನಿಸುವುದಾದರೂ ಹೇಗೆ?
ಈಪ್ರಶ್ನೆಯನ್ನು-
ಸಾಂಖ್ಯಯೋಗಾ ಪೃಥಗ್ ಬಾಲಾಃ ಪ್ರವದಂತಿ ನ ಪಂಡಿತಾಃ ।
ಮುಂತಾದ ಶ್ಲೋಕಗಳಲ್ಲಿ ಪರಿಹರಿಸಲಾಗಿದೆ. ಭಾಗವತ ಮತ್ತು
ಉಪನಿಷತ್ತುಗಳಲ್ಲಿ ಜ್ಞಾನದ ಪ್ರತಿರೋಧಿ ಎಂದು ನಿಂದಿಸಿರುವುದು ಗೀತೆಯು
ಬೋಧಿಸಿದ ಕರ್ಮಯೋಗವನ್ನಲ್ಲ. ಸ್ವರ್ಗಭೋಗ ಮೊದಲಾದ ಫಲದ
ಆಮಿಷಕ್ಕೆ ಒಳಗಾಗಿ ನಾವುಮಾಡುತ್ತಿರುವವಿವಿಧ ಲೌಕಿಕಕರ್ಮಗಳನ್ನು ಮಾತ್ರ
ಅಲ್ಲಿ ಅಪಹಾಸ ಮಾಡಲಾಗಿದೆ. ಗೀತೆಯು ಅಂತಹ ಕಾಮ್ಯ-ಕರ್ಮಗಳನ್ನು
ಬಲವಾಗಿ ವಿರೋಧಿಸಿದೆ. ಕರ್ಮಯೋಗದಲ್ಲಿ ಅಡಕವಾದ ಕರ್ಮವು
ನಿಷ್ಕಾಮವಾದ ಪವಿತ್ರ ಭಾಗವತ ಧರ್ಮವಾಗಿದ್ದು ಅದು ಜ್ಞಾನಕ್ಕೆ ಅತ್ಯಂತ
ಪೋಷಕವೇ ಆಗಿದೆ. ನಿಷ್ಕುಮಕರ್ಮವು ಅಂತಚರಣ ನೈರ್ಮಲ್ಯ ಹಾಗೂ
ತತ್ತ್ವಜ್ಞಾನದ ಉದಯಕ್ಕೆ ಕಾರಣವಾಗಿ ಜೀವನದ ಪರಮ ಹಾಗೂ ಚರಮ
ಫಲವೆನಿಸುವ ಮುಕ್ತಿಯ ಕಡೆಗೆ ನಮ್ಮನ್ನು ಒಯ್ಯುವುದು. ಆದುದರಿಂದ ಜ್ಞಾನದ
ಸಾಧನಗಳೇ ಆದ ಸಂನ್ಯಾಸ ಮತ್ತು ಕರ್ಮಯೋಗ ಇವೆರಡನ್ನೂ
ಜೋಡಿಸುವುದರಲ್ಲಿ ಯಾವ ಅನೌಚಿತ್ಯವೂ ಇಲ್ಲ. ಯತಿಗಳು
ಜ್ಞಾನಯೋಗಿಗಳು, ಅವರಿಗೆ ಕರ್ಮದಲ್ಲಿ ಅಧಿಕಾರ ಇಲ್ಲವೆಂದೂ
ಕರ್ಮಯೋಗಿಗಳಾದ ಗೃಹಸ್ಥರು ಸಾಂಖ್ಯಮಾರ್ಗವೆಂದು ಪ್ರಸಿದ್ಧವಾದ
ಜ್ಞಾನಯೋಗದಲ್ಲಿ ತೊಡಗಲು ಅನರ್ಹರೆಂದೂ ಕೆಲವರ ಗ್ರಹಿಕೆ ಇದೆ.
ಜ್ಞಾನ-ಕರ್ಮಗಳನ್ನು ಈ ರೀತಿ ವಿಂಗಡಿಸಿ ಅವುಗಳನ್ನು ಪ್ರತ್ಯೇಕವಾದ ಸ್ವತಂತ್ರ
ಮಾರ್ಗಗಳೆಂದು ಭಾವಿಸಬಾರದು.
ಏಕಂ ಸಾಂಖ್ಯಂ ಚಯೋಗಂಚಯಃ ಪಶ್ಯತಿ ಸ ಪಶ್ಯತಿ [
ಸಾಧಕನಲ್ಲಿ ಈ ಜ್ಞಾನ- ಕರ್ಮಗಳೆರಡೂ ಜೊತೆಗೆಇರಲೇಬೇಕಾಗುವುದು.
ಜ್ಞಾನಯೋಗಿಗಳಲ್ಲಿ ಜ್ಞಾನದ ಹಾಗೂ ಕರ್ಮಯೋಗಿಗಳಲ್ಲಿ ಕರ್ಮದ
ಪ್ರಧಾನತೆಯು ಇರಬಹುದಾದರೂ ಜ್ಞಾನ-ಕರ್ಮಗಳೆರಡರಸಹಾಯವಿಲ್ಲದೆ
ಬರಿ ಒಂದರಿಂದ ಮುಕ್ತಿ ಯನ್ನು ಪಡೆಯಲು ಸಾಧ್ಯವಿಲ್ಲ ತತ್ತ್ವಜ್ಞಾನ ಹಾಗೂ
ನಿಷ್ಕುಮಕರ್ಮ ಇವೆರಡರ ಗುಧಿ ಒಂದೇಇರುವುದು.
ಏಕಮಪ್ಯಾಸ್ಥಿತಃ ಸಮ್ಯಗ್ ಉಭಯೋರ್ವಿಂದತೇ ಫಲಂ।
ಜ್ಞಾನಯೋಗ ಹಾಗೂ ಕರ್ಮಯೋಗ ಇವೆರಡರಲ್ಲಿ ಒಂದನ್ನು
ಸಮಗ್ರವಾಗಿ ಸಂಗ್ರಹಿಸಬೇಕಾದರೂ ಇವೆರಡರ ಸಮಾವೇಶವಾಗಿಯೇ
ಪೂರ್ಣಫಲವನ್ನು ಪಡೆಯಬೇಕಾಗುವುದು. ಹೀಗೆ ಜ್ಞಾನ, ಕರ್ಮಸಂನ್ಯಾಸ
ಹಾಗೂ ಕರ್ಮಗಳಿಗೆ ಇರುವ ಅನ್ಯೋನ್ಯ ಸಂಬಂಧವನ್ನು ಸಮರ್ಥಿಸಿ ಸಮಗ್ರ
ಸಾಧನೆಯಲ್ಲಿ ಇವೆಲ್ಲವುಗಳೂ ಅಡಕವಾಗಿರುವುದರ ಆವಶ್ಯಕತೆಯನ್ನು ಈ
ಪ್ರಕರಣದಲ್ಲಿ ಪ್ರತಿಪಾದಿಸಲಾಗಿದೆ.
Bannanje Govindacharya (1936–2020)Bhagavad Gita Pravachana
ಸಾಂಖ್ಯ ಯೋಗೌ ಪೃಥಕ್ ಬಾಲಾಃ ಪ್ರವದಂತಿ ನ ಪಂಡಿತಾಃ |
ಏಕಮ್ ಅಪಿ ಅಸ್ಥಿತಃ ಸಮ್ಯಕ್ ಉಭಯೋಃ ವಿಂದತೇ ಫಲಮ್ -- ಜ್ಞಾನ ಮತ್ತು ಕರ್ಮದ ದಾರಿ ಬೇರೆಬೇರೆ
[ಒಂದು ಸಂನ್ಯಾಸಿಗಳಿಗೆ ಹಾಗೂ ಇನ್ನೊಂದು ಸಂಸಾರಿಗಳಿಗೆ] ಎಂದು ನುಡಿದವರು ಬಾಲಿಷರು[ತಿಳಿಗೇಡಿಗಳು];
ತಿಳಿದವರಲ್ಲ. ಯಾವುದೇ ಒಂದು ದಾರಿಯಲ್ಲಿ ಸರಿಯಾಗಿ ನಡೆದವನು ಎರಡರ ಫಲವನ್ನೂ ಪಡೆಯುತ್ತಾನೆ.
ಹಿಂದೆ ಕರ್ಮಸಂನ್ಯಾಸ ಮತ್ತು ಕರ್ಮಯೋಗವನ್ನು ವಿವರಿಸಿದಂತೆ ಕೃಷ್ಣ ಇಲ್ಲಿ ಸಾಂಖ್ಯವನ್ನು(ಜ್ಞಾನ-51ಗ॥08!
Wisdom) ಮತ್ತು ಯೋಗವನ್ನು (ಅನುಷ್ಠಾನ-5/118! Practice) ವಿವರಿಸುತ್ತಾನೆ. ಶಾಸ್ತ್ರದಲ್ಲಿ ಸಾಂಖ್ಯ(ಸಮ್ಯಕ್
ಖ್ಯಾತಿ) ಎಂದರೆ ಗಣಿತವಲ್ಲ; ಅದು ಶುದ್ಧ ಆತ್ಮತತ್ವವಿಜ್ಞಾನ-ಭಗವಂತನ ಜ್ಞಾನ. ಯಾರ ಅಂಕೆಯಲ್ಲಿ ಈ ಇಡೀ
ಜಗತ್ತು ನಡೆಯುತ್ತಿದೆಯೋ ಅವನ ಅರಿವು. ಇದನ್ನು ತಿಳಿಯದೇ ಇರುವವರನ್ನು ಕೃಷ್ಣ ಬಾಲಿಷರು ಹಾಗೂ
ಅಂತವರ ಮಾತಿಗೆ ಮೂಲ ಆಧಾರ ಎನ್ನುವುದಿಲ್ಲ ಎನ್ನುತ್ತಾನೆ. ಇಷ್ಟು ಹೇಳಿ ಕೃಷ್ಣ ಹೇಳುತ್ತಾನೆ
"ಏಕಮಪ್ಯಾಸ್ಥಿತಃ ಸಮ್ಯಗುಭಯೋರ್ವಿಂದತೇ ಫಲಮ್" ಎಂದು. ಅಂದರೆ "ಯಾವುದೇ ಒಂದನ್ನು ನೀನು
ಚೆನ್ನಾಗಿ ಅಚರಣೆಗೆ ತಂದರೂ, ಎರಡರ ಫಲವನ್ನೂ SBE ಎಂದರ್ಥ. ಇಲ್ಲಿ ಪುನಃ ನಮಗೆ
ಗೊಂದಲವಾಗಬಹುದು. ಇದರರ್ಥ ಜ್ಞಾನವನ್ನು ಮಾತ್ರ ಅಥವಾ ಕರ್ಮವನ್ನು ಮಾತ್ರ ಆಚರಣೆ ಮಾಡುವುದು
ಎಂದಲ್ಲ. ನಾವು ಕರ್ಮವನ್ನು ಚೆನ್ನಾಗಿ ಮಾಡುವದು ಎಂದರೆ ತಿಳಿದು ಜ್ಞಾನಪೂರ್ವಕವಾಗಿ ಮಾಡುವದು. ಅದೇ
ರೀತಿ ಜ್ಞಾನ ಚೆನ್ನಾಗಿರುವುದು ಎಂದರೆ ತಿಳಿದದ್ದನ್ನು ಅನುಷ್ಠಾನಗೊಳಿಸುವುದು. ಆದ್ದರಿಂದ ಒಂದು
'ಜ್ಞಾನಪ್ರಧಾನ' ಇನ್ನೊಂದು 'ಕರ್ಮಪ್ರಧಾನ'ವಾಗಿರಬಹುದು. ಆದರೆ ಒಂದು ಇನ್ನೊಂದಕ್ಕೆ ಪೂರಕ. ಯಾರು
ಇದನ್ನು ತಿಳಿದಿದ್ದಾರೋ ಅವರು ಪಂಡಿತರು ಹಾಗೂ ಅವರು ನಿಜವಾದ ಫಲವನ್ನು ಪಡೆಯುತ್ತಾರೆ.
Bibek Debroy (1955–2024)The Bhagavad Gita
(4)
‘The ignorant,7 not the wise, speak of renunciation and action as distinct.8 If
one of these is followed properly, the fruits of both result.’