6.35

श्रीभगवानुवाच ।
असंशयं महाबाहो मनो दुर्निग्रहं चलम् ।
अभ्यासेन तु कौन्तेय वैराग्येण च गृह्यते ॥
śrībhagavānuvāca |
asaṃśayaṃ mahābāho mano durnigrahaṃ calam |
abhyāsena tu kaunteya vairāgyeṇa ca gṛhyate ||
Swami Sivananda (1887–1963)Bhagavad Gita
35. Undoubtedly, O mighty-armed Arjuna, the mind is difficult to control and restless; but, by practice and by dispassion it may be restrained!
Sri Vishwesha Tirtharu (1931–2019)Gitasaroddhara
6.34–6.40 · ಧ್ಯಾನಮಾರ್ಗವು ಕಠಿಣ ಆದರೆ ನಿರಪಾಯ
ಧ್ಯಾನ ಮಾರ್ಗವು ಕಠಿಣ, ಆದರೆ ನಿರಪಾಯ ಗೀತೆಯಲ್ಲಿ ಹಾಗೂ ಉವನಿಷತ್ತಿನಲ್ಲಿ ಹೇಳಿರುವ ಈ ಧ್ಯಾನಯೋಗ ವನ್ನಾಚರಿಸುವುದು ನಿಜಜೀವನದಲ್ಲಿ ನಮಗೆ ಬಹಳ ಕಠಿಣವೆನಿಸುತ್ತದೆ. ಮನಸ್ಸು ಮರ್ಕಟನಂತಿದೆ. ಗಾಳಿಯನ್ನು ಒಂದೇಕಡೆ ಶೇಖರಿಸಿಡುವುದು ಹೇಗೋಹಾಗೆ ಮನಸ್ಸಿನ ಕೇಂದ್ರೀಕರಣವೂ ಕೈಲಾಗದ ಕಾರ್ಯವೆಂದು ನಮಗನಿಸುತ್ತದೆ. ಎಷ್ಟು ಪ್ರಯತ್ನಿಸಿದರೂ ಮನಸ್ಸು ಅಚಲವಾಗಿ ಭಗವಂತನಲ್ಲಿ ನೆಲೆನಿಲ್ಲುವಂತೆ ಮಾಡಲು ನಮಗೆ ಸಾಧ್ಯವಾಗುತ್ತಿಲ್ಲ. ಮನಸ್ಸಿನಲ್ಲಿರುವ ಈ ಚಂಚಲತೆಯು ಧ್ಯಾನಯೋಗದಲ್ಲಿ ನಮ್ಮನ್ನು ತೀರ ಅಸಮರ್ಥರನ್ನಾಗಿ ಮಾಡಿದೆ. ಇದು ನಮ್ಮೆಲ್ಲರನ್ನೂ ಕಾಡಿಸುತ್ತಿರುವ ಅನಾದಿಯಾದ ಸಮಸ್ಯೆಯಾಗಿದೆ. ನಮ್ಮೆಲ್ಲರ ಪರವಾಗಿಯೇ ಅರ್ಜುನನು ಈ ಪ್ರಶ್ನೆಯನ್ನು ಭಗವಂತನ ಮುಂದಿಡುತ್ತಾನೆ. ಚಂಚಲಂಹಿ ಮನಃ ಕೃಷ್ಣ ಪ್ರಮಾಥಿ ಬಲವದ್‌ ದೃಢಂ [ ಶ್ರೀಕೃಷ್ಣನು ಮನಸ್ಸಿನ ಈ ಕುಚೇಷ್ಟೆಯನ್ನು ಎದುರಿಸಲು ಎರಡು ಮಾರ್ಗಗಳನ್ನು ಬೋಧಿಸಿದ್ದಾನೆ. ಒಂದು ನಿರಂತರ ಅಭ್ಯಾಸ, ಇನ್ನೊಂದು ವಿಷಯವೈರಾಗ್ಯ. ನಮ್ಮ ಮನಸ್ಸಿನೊಳಗೆ ಪರಮಾತ್ಮ ಕಾಲಿಡಲೇ ಸಾಧ್ಯವಿಲ್ಲ. ವಿಷಯಾಸಕ್ತಿಯ ಹೊಲಸಿನಿಂದ ಅದು ತುಂಬಿಹೋಗಿದೆ. ಮೊದಲು ನಮ್ಮಲ್ಲಿ ಅಂಟಿಕೊಂಡಿರುವ ಈ ಕಿಲುಬನ್ನು ತೆಗೆದು ಅಂತರಂಗವನ್ನು ಪರಿಶುದ್ಧಿಗೊಳಿ ಸಿದರೆ ನಮ್ಮ ಹೃದಯಮಂದಿರಕ್ಕೆ ಪರಮಾತ್ಮನನ್ನು ಸ್ವಾಗತಿಸಲು ನಮಗೆ ಎನೂ ಕ್ಲೇಶ, ಸಂಕಟಗಳಿನಿಸವು. ವಿಷಯ ಪ್ರೇಮವಿರುವವರೆಗೆ ಪರಮಾತ್ಮನ ಪ್ರೇಮ ಉದಯಿಸಲಾರದು. ಪರಮಾತ್ಮನನ್ನು ಸ್ಥರಿಸಬೇಕೆಂದರೂ ಅವನನ್ನು ಸುಲಭವಾಗಿ. ಮರೆಯುತ್ತಿರುವೆವು. ಆದರೆ ವಿಷಯಪದಾರ್ಥಗಳನ್ನು ಮರೆಯಬೇಕೆಂದು ಪ್ರಯತ್ನಿಸಿದರೂ ಅವುಗಳ ವಿಚಾರವನ್ನು ತಲೆಯಿಂದ ಹೊರಗೆ ಹಾಕಲು ಸಾಧ್ಯವಾಗುತ್ತಿಲ್ಲ. ವಿಷಯ ಪ್ರೇಮವು ಅಷ್ಟುಸುದೃಢವಾಗಿ ನಮ್ಮ ಮನಸ್ಸಿನಲ್ಲಿ ಬೇರೂರಿದೆ. ಧ್ಯಾನದಲ್ಲಿ ನಾವು ಯಶಸ್ವಿಯಾಗದಿರುವುದಕ್ಕೆ ಈ ಲೌಕಿಕ ಪ್ರೇಮದ ಒತ್ತಡ ಹಾಗೂ ಪರಮಾತ್ಮನ ಪ್ರೇಮದ ಅಭಾವಗಳೇ ಕಾರಣಗಳಾಗಿವೆ. ನಾವು ನಮ್ಮ ಮಡದಿ, ಮಕ್ಕಳು, ಮನೆ, ಮಹಡಿಗಳಲ್ಲಿ ಮಾಡುವಷ್ಟು ಪ್ರೀತಿಯನ್ನು ಪರಮಾತ್ಮನಲ್ಲಿ ಮಾಡದಿರುವಾಗ ನಾವು ಹೇಗೆ ಅವನ ಧ್ಯಾನವನ್ನು ಮಾಡಬಲ್ಲೆವು? ಎಲ್ಲಿ ಪ್ರೇಮವಿದೆಯೋ ಅಲ್ಲಿ ಮನಸ್ಸು ಕ್ರೇಂದ್ರೀಕೃತವಾಗಲು ಏನೂ ಪ್ರಯಾಸವಾಗುವುದಿಲ್ಲ. ನಮಗೆ ಪ್ರಿಯವಾದ ಲೌಕಿಕವಸ್ತುಗಳನ್ನು ಎಲ್ಲ ದೈನಂದಿನ ವ್ಯವಹಾರಗಳ ಮಧ್ಯದಲ್ಲೂ ಸ್ವಪ್ನದಲ್ಲೂ ಸದಾ ಚಿಂತಿಸುತ್ತಿರುವೆವು. ಶ್ರೀಹರಿಯನ್ನು ಒಂದು ಗಳಿಗೆಯಾದರೂ ಚಿಂತಿಸಲು ನಮಗೆ ಏಕೆ ಸಾಧ್ಯವಾಗುತ್ತಿಲ್ಲ? ಇದು ಮನಸ್ಸಿನಲ್ಲಿಯೇ ನಾವು ಪ್ರಶ್ನಿಸಿಕೊಳ್ಳಬೇಕಾದ ಸಂಗತಿಯಾಗಿದೆ. ನಮ್ಮ ಹೃದಯದಲ್ಲಿ ಭಕ್ತಿಯಸೆಲೆಯೇ ಬತ್ತಿಹೋಗಿದೆ. ನಾವು ಭಕ್ತಿಯ ಪ್ರದರ್ಶನವನ್ನು ಮಾಡುತ್ತಿರುವೆವೇಹೊರತು ನಿಜವಾದ ಭಕ್ತಿಯನ್ನಲ್ಲ. ತನ್ನ ಪತಿಯ ಕಡೆಗೆ ಹೊರಟ ಮುಗುದೆಯೊಬ್ಬಳು ಧ್ಯಾನಾರೂಢನಾದ ರಾಜನನ್ನು ಅನ್ಯಮನಸ್ಥತೆಯಿಂದ ತುಳಿದು, ಅದರ ಪರಿವೆ ಇಲ್ಲದೆ ಮುಂದುವರಿಯಲು, ಅವಮಾನಿತನಾಗಿ ಕೋಪಗೊಂಡ ರಾಜನು ಅವಳನ್ನು ಕರೆಸಿ ವಿಚಾರಣೆಗೊಳಪಡಿಸಿದಾಗ ಅವಳು ನಗುತ್ತ ಉತ್ತರಿಸಿದಳು: ನಾನು ಸಾಮಾನ್ಯ ಮಾನವನಾದ ನನ್ನ ಪ್ರಿಯ ಪತಿಯನ್ನು ನೆನೆದುಕೊಂಡು ಹೋಗುವ ಭರದಲ್ಲಿ ಕಾಲಿನಿಂದ ರಾಜನನ್ನು ಮುಟ್ಟಿದ್ದು ನನಗೇ ತಿಳಿಯಲಿಲ್ಲ; ಹೀಗಿರುವಾಗ ಅನಂತ ಗುಣಶಾಲಿಯಾದ ಜಗದೊಡೆಯನನ್ನೇ ತಲ್ಲೀನತೆ ಯಿಂದ ಸ್ಥರಿಸುವ ಈ ರಾಜನಿಗೆ ಅದು ಹೇಗೆ ತಿಳಿಯಿತು? ನನಗೆ ಇರುವ ಪತಿಪ್ರೇಮದಷ್ಟೂ ಹರಿಪ್ರೇಮವು ಈತನಿಗಿಲ್ಲವೆ? ಎಂದು ಅವಳು ಸವಾಲು ಹಾಕಿದಳು. ಇದು ವಾಸ್ತವವಾದ ಪ್ರಶ್ನೆಯಾಗಿದೆ. ನಮ್ಮ ಸೊತ್ತು ಪರಿವಾರಗಳಲ್ಲಿ ಮಾಡುವ ಪ್ರೀತಿಯ ಅರ್ಧದಷ್ಟೂ ನಾವು ಪರಮಾತ್ಮನನ್ನು ಪ್ರೀತಿಸುತ್ತಿಲ್ಲ. ಆದುದರಿಂದಲೇ ನಮ್ಮ ಹೃದಯ ದೇಗುಲದಲ್ಲಿ ಪರಮಾತ್ಮನ ಪ್ರತಿಮೆಯು ಚಲವಾಗಿದೆ. ಸ್ಥಿರ ಪ್ರತಿಮೆಯನ್ನು ಸ್ಥಾಪಿಸಲು ನಾವು ಅಶಕ್ತರಾಗಿರುವೆವು. ವಿಷಯವೈರಾಗ್ಯ ಮತ್ತು ಭಗವತ್‌ ಪ್ರೇಮಗಳಿಂದಲೇ ನಾವು ಇದರಲ್ಲಿ ಯಶಸ್ವಿಯಾಗಬಲ್ಲೆವು. ಯತತೋಇಷಪಿ ಹರೇಃ ಪದಸಂಸ್ಕರಣೇ ಸಕಲಂ ಹೃಘಮಾಶು ಲಯಂ ವ್ರಜತಿ | ದ್ವಾದಶಸ್ತೊ ತ್ರ ಎಂದು ಶ್ರೀಮದಾಚಾರ್ಯರು ಅಪ್ಪಣೆ ಕೊಡಿಸಿದಂತೆ ಪರಮಾತ್ಮನ ಧ್ಯಾನವನ್ನು ಏಕಾಗ್ರತೆಯಿಂದ ಮಾಡಲು ನವಗೆ ಶಕ್ಕವಾಗದಿದ್ದರೂ ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುವುದರಿಂದಲೂ ನಮ್ಮ ಸಕಲ ಪಾಪಗಳ ಪರಿಹಾರವಾಗುವುದು. ಧ್ಯಾನಮಾರ್ಗದಲ್ಲಿ ಅಯಶಸ್ವಿಯಾಗಿ ಯೋಗಭ್ರಷ್ಟನಾದವನು ಇಹಪರ ಗಳಿರಡಕ್ಕೂ ಎರವಾ ಗುವನೆ? ಎಂಬ ಅರ್ಜುನನ ಸಂಶಯಕ್ಕೂ ಶ್ರೀಕೃಷ್ಣನು ಇದೇ ರೀತಿಯ ಪರಿಹಾರವನ್ನು ಹೇಳಿದ್ದಾ ನೆ. ನಹಿ ಕಲ್ಯಾಣಕೃತ್‌ ಕಶ್ಚಿ ದ್‌ ದುರ್ಗತಿಂತಾತ ಗಚ್ಛತಿ [ ಒಳ್ಳೆಯ ಕೆಲಸವನ್ನು ಮಾಡುವವನಿಗೆ ಅದನ್ನು ಪೂರ್ಣಗೊಳಿಸಲಾಗ ದಿದ್ದರೂ ದುರ್ಗತಿಯು ಖಂಡಿತ ಬರುವುದಿಲ್ಲ. ಸದುದ್ದೇಶದಿಂದ ಮಾಡಿದ ಪ್ರಾಮಾಣಿಕ ಪ್ರಯತ್ನಕ್ಕೆ ಉತ್ತಮ ಫಲವು ನಿಶ್ಚಯವಾಗಿ ದೊರೆಯುವುದು. ಇದು ಭಗವಂತನು ನೀಡಿದ ಭರವಸೆಯಾಗಿದೆ. ಮಂತ್ರಿ ಮಾಗಧರು ನೀಡುವ ಆಶ್ವಾಸನದಂತೆ ಇದು ಹುಸಿಯಾಗುವುದಿಲ್ಲ. ಈ ಜನ್ಮದಲ್ಲಿ ನಮ್ಮ ಸಾಧನೆ ಅದೂರ್ಣವಾದಲ್ಲಿ ಜನ್ಮಾಂತರದಲ್ಲಿ ಅದನ್ನು ಮುಂದುವರಿಸುವಸ್ನನ್ನಿವೇಶವನ್ನು ಪರಮಾತ್ಥನು ಒದಗಸತ್ತಾರೆ ಪರಮಾತ್ಮನ ಈಧಿಯವ, ಸು್ಯಸ್ಥೆಗಳ್ಲಿ ನಾವ, ಪೂರ್ಣ ವಿರ್ವಾಸವನ್ನಿಟ್ಟು ಧೈರ್ಯದಿಂದ ಸಾಧನೆಯನ್ನು ನಡೆಸಿಕೊಂಡು ಹೋಗಬೇಕು. ನಾವೀಗಎಲ್ಲರೂ ಧ್ಯಾನ, ಸಮಾಧಿಗಳನ್ನು ಮಾಡಬೇಕೆಂದು ಕರೆ ನೀಡುತ್ತಿಲ್ಲ. ತಮಗೆ ಸಾಧ್ಯವಾಗುವಂತಹ ಆಧ್ಯಾಕ್ಮಿಕ ಸಾಧನೆಯನ್ನು ಪ್ರತಿಯೊಬ್ಬರೂ ನಿರ್ವಂಚನೆಯಿಂದಕ್ಕೆಗೊಳ್ಳಲಿ. ಪ್ರತಿದಿನವೂ ಸಂಧ್ಯಾವಂದನ ದಂತಹಸರಕ ಶಾಸ್ತ್ರೀಯ ಪ್ರಾರ್ಥನೆಯ ನ್ನಾರರೂವ್ರತಿ ಯೊಬ್ಬರೂ ಆಚರಿಸಿ ಕ್ರಮಕ್ರಮವಾಗಿ ಆತ್ಮೋನ್ಸತಿಯನ್ನು ಸಾಧಿಸಲಿ ಇಂತಹ ವ್ರಾರಂಭಿಕ ಪ್ರಯತ್ನ ದಿಂದ ಮುಂದಿನಹಾದಿಯು ಸಹಜವಾಗಿ ಏನೂ ಶ್ರಮವಿಲ್ಲ ದೆಅವನಿಗೆ ಗೋಚರವಾಗುವುದು.
Bannanje Govindacharya (1936–2020)Bhagavad Gita Pravachana
ಭಗವಾನ್‌ ಉವಾಚ-ಭಗವಂತ ಹೇಳಿದನು: ಅಸಂಶಯಮ್‌ ಮಹಾಬಾಹೋ ಮನಃ ದುರ್ನಿಗ್ರಹಮ್‌ ಚಲಮ್‌ | ಅಭ್ಯಾಸೇನ ತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇ -ಮಹಾವೀರಾ, ಖಂಡಿತಾ ಹೌದು; ಬಗೆ ಚಪಲವಾದದ್ದು, ಹಿಡಿತಕ್ಕೆ ಸಿಗದ್ದು. ಆದರೆ ಕೌಂತೇಯಾ, ಮರಳಿಮರಳಿ ಯತ್ನಿಸುವುದರಿಂದ ಮತ್ತು ವೈರಾಗ್ಯದಿಂದ ಅದನ್ನು ಬಿಗಿಹಿಡಿಯಬಹುದು. ಕೃಷ್ಣ ಹೇಳುತ್ತಾನೆ: “ನೀನು ಹೇಳುವುದರಲ್ಲಿ ಯಾವ ಸಂಶಯವೂ ಇಲ್ಲ. ಮನಸ್ಸನ್ನು ತಡೆ ಹಿಡಿಯುವುದು ಸುಲಭದ ಕೆಲಸವಲ್ಲ, ಆದರೆ ಅಭ್ಯಾಸ ಮತ್ತು ವೈರಾಗ್ಯದಿಂದ ಇದನ್ನು ಕ್ರಮೇಣವಾಗಿ ಸಾಧಿಸಬಹುದು” ಎಂದು. ನಾವು ಪ್ರಯತ್ನವಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಪ್ರತಿಯೊಂದಕ್ಕೂ ಪ್ರಯತ್ನ ಬೇಕು. ನಾವು ನಮ್ಮ ಮನಸ್ಸು ಹೇಳಿದಂತೆ ಕುಣಿಯುವ ಅಭ್ಯಾಸ ಮಾಡಿಕೊಂಡು ಬಿಟ್ಟಿದ್ದೇವೆ. ಅದನ್ನು ಬಿಟ್ಟು ನಾವು ಹೇಳಿದಂತೆ ಮನಸ್ಸು ಕೇಳುವಂತೆ ಮಾಡುವ ಪ್ರಯತ್ನವನ್ನು ನಾವೆಂದೂ ಮಾಡಿರುವುದಿಲ್ಲ. ಇಲ್ಲಿ ಕೃಷ್ಣ ವೈರಾಗ್ಯ ಮತ್ತು ಅಭ್ಯಾಸ ಎನ್ನುವ ಎರಡು ವಿಚಾರವನ್ನು ಒತ್ತುಕೊಟ್ಟು ಹೇಳುತ್ತಾನೆ. ವೈರಾಗ್ಯ ಎಂದರೆ ಯಾವುದರ ಕಡೆ ಮನಸ್ಸು ಹರಿಯಬಾರದೋ ಅದನ್ನು ಮನಸ್ಸಿಗೆ ಉಣಿಸದೇ(೯966) ದೂರವಿಡುವುದು. ನಮಗೆ ದೇವರು ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ತಿಳಿದುಕೊಳ್ಳುವ ಬುದ್ಧಿ ಕೊಟ್ಟಿದ್ದಾನೆ. ಆ ಬುದ್ದಿಯನ್ನು ಉಪಯೋಗಿಸಿ ನಮ್ಮ ಮನಸ್ಸನ್ನು ಕೆಟ್ಟದ್ದರಿಂದ ದೂರವಿರಿಸುವುದು. ಕೆಟ್ಟದ್ದನ್ನು ಮನಸ್ಸಿಗೆ ಪರಿಚಯ ಮಾಡಿಕೊಡದೇ ಇರುವುದು. ಹೀಗೆ ಯಾವುದು ನಮ್ಮ ಬೆಳವಣಿಗೆಗೆ ಬಾಧಕವೋ ಅದನ್ನು ಮನಸ್ಸಿನಿಂದ ದೂರವಿಡುವುದು ವೈರಾಗ್ಯ. ಇದರ ಜೊತೆಗೆ ನಿರಂತರವಾಗಿ ಏಕಾಗ್ರತೆಗೆ ಬೇಕಾದ ಅಭ್ಯಾಸವನ್ನು ತಪ್ಪದೇ ಮಾಡುವುದು. ಇದರಿಂದ ನಾವು ಮನಸ್ಸನ್ನು ಖಂಡಿತವಾಗಿ ನಿಯಂತ್ರಿಸಬಹುದು ಎನ್ನುತ್ತಾನೆ ಕೃಷ್ಣ. ಸಾಮಾನ್ಯವಾಗಿ ನಾವು ನಮ್ಮ ಮನಸ್ಸಿಗೆ ಪ್ರತೀದಿನ ಬೇಡದ ತರಬೇತಿಯನ್ನೇ ಕೊಡುತ್ತೇವೆ. ಉದಾಹರಣೆಗೆ ನಮ್ಮ ಅಮೂಲ್ಯವಾದ ಸಮಯದಲ್ಲಿ ದೂರದರ್ಶನದಲ್ಲಿ ಬರುವ ಯಾವುದೋ ದೈನಂದಿನ ದಾರಾವಾಹಿ, ಸಿನಿಮ ಇತ್ಯಾದಿ ವಿಷಯದಲ್ಲಿ ನಮ್ಮ ಮನಸ್ಸನ್ನು ಸಂಪೂರ್ಣ ತೊಡಗಿಸಿಕೊಳ್ಳುತ್ತೇವೆ. ನಮಗೆ ಆಧ್ಯಾತ್ಮಿಕ ಗ್ರಂಥಗಳನ್ನು ಓದಲು ಸಮಯವೇ ಇರುವುದಿಲ್ಲ! ದೇವರ ಪೂಜೆ. ಮಾಡುವಾಗ ಕೂಡಾ ನಮಗೆ ಆ ದಾರಾವಾಹಿಯ ಮುಂದಿನ ಭಾಗದ ಚಿಂತೆ. ನಾವು ರಾತ್ರಿ ಮಲಗುವಾಗ ಯಾವುದೋ ಕೆಟ್ಟ ಪುಸ್ತಕವನ್ನು ಓದಿ, ಕೆಟ್ಟ ದಾರಾವಾಹಿಯನ್ನು ನೋಡಿ ಮಲಗುವ ಬದಲು, ಒಳ್ಳೆಯ ಆಧ್ಯಾತ್ಮಿಕ ಗ್ರಂಥವನ್ನು ಓದುವ ಅಭ್ಯಾಸವನ್ನು ಮಾಡಿಕೊಂಡು ನಮಗೆ ಬೇಡವಾದ ವಿಷಯದತ್ತ ವೈರಾಗ್ಯ ಸಾಧಿಸಬೇಕು. ಇದು ಕೇವಲ ಒಂದು ಉದಾಹರಣೆಯಷ್ಟೆ. ನಾವು ನಮ್ಮ ದೈನಂದಿನ ಚಟುವಟಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ನಮಗೆ ಇಂತಹ ಸಾವಿರ ಉದಾಹರಣೆಗಳು ಸಿಗುತ್ತವೆ. ಮನಸ್ಸು ತನಗೆ ತಿಳಿಯದ ವಿಷಯದತ್ತ ಹೆಚ್ಚು ಗಮನ ಕೊಡುವುದಿಲ್ಲ. ಆದರೆ ಒಮ್ಮೆ ರುಚಿ ನೋಡಿದರೆ ಅದು ನಿಮ್ಮನ್ನು ಬಿಡುವುದಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಮದ್ಯ ಸೇವನೆ. ಎಂದೂ ಮದ್ಯ ಸೇವನೆ ಮಾಡದವನಿಗೆ ಮದ್ಯ ಅಸಹ್ಯವಾಗಿ ಕಾಣುತ್ತದೆ. ಆದರೆ ಒಮ್ಮೆ ಒತ್ತಾಯದಿಂದ ಬೇಡದ ಮದ್ಯವನ್ನು ಸೇವಿಸಿ ನಮ್ಮ ಮನಸ್ಸಿಗೆ ಅದರ ಪರಿಚಯ ಮಾಡಿಸಿದಾಗ ನಮ್ಮ ಮನಸ್ಸು “ಹೇಗೂ ಒಮ್ಮೆ ಕುಡಿದಿದ್ದೀಯ ಇನ್ನೊಮ್ಮೆ ಕುಡಿದರೆ ಏನೂ ಆಗುವುದಿಲ್ಲ-ಕುಡಿ” ಎಂದು ಹೇಳುತ್ತದೆ! ಇದರ ಪರಿಣಾಮ ಏನು ಎನ್ನುವುದನ್ನು ಇಲ್ಲಿ ವಿವರಿಸಬೇಕಾಗಿಲ್ಲ. ನಮ್ಮ ಇನ್ನೊಂದು ಮಹಾ ತಪ್ಪು ಎಂದರೆ ಬೇಡದ ವಿಷಯದಲ್ಲಿ ತಲೆ ಹಾಕುವುದು. “ಯಾರೋ ಏನೋ ಮಾಡಿದರಂತೆ”-ಈ ರೀತಿ ಒಂದು ಮಾತು ನಮ್ಮ ಕಿವಿಗೆ ಬಿದ್ದಾಗ ನಾವು ನಮಗೆ ಆ ವಿಚಾರವನ್ನು ತಿಳಿಯುವುದರಿಂದ ಏನು ಉಪಯೋಗ ಎಂದು ಯೋಚಿಸದೆ ಆ ವಿಷಯಕ್ಕೆ ತಲೆ ಹಾಕುತ್ತೇವೆ. ಒಮ್ಮೆ ತಲೆ ಹಾಕಿದರೆ ಮತ್ತೆ ಮನಸ್ಸು ಅದನ್ನು ಬಿಡುವುದಿಲ್ಲ. ಎಲ್ಲವನ್ನೂ ಬಿಟ್ಟು ಆ ವಿಷಯದ ಬೆನ್ನು ಹತ್ತುತ್ತದೆ. ಆದ್ದರಿಂದ ಒಂದು ವಿಷಯಕ್ಕೆ ತಲೆ ಹಾಕುವ ಮೊದಲು ಆ ವಿಷಯದ ಬಗ್ಗೆ ಬುದ್ಧಿಪೂರ್ವಕವಾಗಿ ನಿರ್ಧಾರ ತೆಗೆದುಕೊಂಡು ಮನಸ್ಸು ಇಲ್ಲ ಸಲ್ಲದ ವಿಚಾರದ ಹಿಂದೆ ಓಡದಂತೆ ತಡೆಹಿಡಿಯಬೇಕು. ಇದಕ್ಕೆ ಉತ್ತಮ ದೃಷ್ಟಾಂತ ಗ್ರೀಕ್‌ ದೇಶದ ಸೋಕ್ರಾಟೆಸ್‌ ಎನ್ನುವ ವಿಚಾರವಾಧಿಯ ಮೂರು ಹಂತದ ಸೋಸುವಿಕೆ ಎನ್ನುವ ಕಥೆ(7೧6 Socrates Triple Filter Test). ಒಮ್ಮೆ ಸೋಕ್ರಾಟೆಸ್‌ ನ ಒಬ್ಬ ಪರಿಚಯದ ವ್ಯಕ್ತಿ ಬಂದು ಸೋಕ್ರಾಟೆಸ್‌ ನಲ್ಲಿ ಈ ರೀತಿ ಹೇಳುತ್ತಾನೆ: “ನಾನು ನಿನ್ನ ಮಿತ್ರನ ಬಗ್ಗೆ ಏನು ಕೇಳಿದೆ ಗೊತ್ತಾ?( Do you know what | just heard about your 119767)” ಎಂದು. ತಕ್ಷಣ ಸೋಕ್ರಾಟೆಸ್‌ ಹೇಳುತ್ತಾನೆ “ಸ್ವಲ್ಪ ನಿಲ್ಲು (Hold on a minute); ನೀನು ನನ್ನ ಮಿತ್ರನ ಬಗ್ಗೆ ಏನನ್ನಾದರೂ ಹೇಳುವ ಮೊದಲು ನಾನು ಮೂರು ವಿಚಾರವನ್ನು ತಿಳಿಯ ಬಯಸುತ್ತೇನೆ. ಮೊದಲಿಗೆ ನೀನು ಹೇಳಲು ಹೊರಟಿರುವ ವಿಚಾರದ ಬಗ್ಗೆ ನಿನಗೆ ನೈಜ ಮಾಹಿತಿ ಇದೆಯೋ?(12೪ಆ you made absolutely sure that what you are about to tell me is true?)”. ಆಗ ಆ ವ್ಯಕ್ತಿ ಹೇಳುತ್ತಾನೆ: “ ಇಲ್ಲ... ಆದರೆ ನಾನು ಈ ವಿಚಾರವನ್ನು ಕೇಳಿಸಿಕೊಂಡೆ...(“!10, actually | just heard about it and...)” ಎಂದು. ಈಗ ಸೋಕ್ರಾಟೆಸ್‌ ಕೇಳುತ್ತಾನೆ: “ ಅಂದರೆ ನಿನಗೆ ಆ ವಿಚಾರ ಸರಿಯಾಗಿ ತಿಳಿದಿಲ್ಲ(50 you don't really know if it's true or not), ಇರಲಿ, ನೀನು ಹೇಳಬೇಕೆಂದಿರುವ ವಿಚಾರ ತುಂಬಾ ಒಳ್ಳೆಯ ವಿಚಾರವೋ?( Is what you are about to tell me about my friend something 90067)”. ಆಗ ಆ ವ್ಯಕ್ತಿ ಹೇಳುತ್ತಾನೆ: “ಅಲ್ಲ ಅದು ಒಳ್ಳೆಯ ವಿಚಾರವಲ್ಲ-ವ್ಯತಿರಿಕ್ತ(10, on the contrary...)” ಎಂದು. ಕೊನೆಯದಾಗಿ ಸೋಕ್ರಾಟೆಸ್‌ ಕೇಳುತ್ತಾನೆ: “ನೀನು ಹೇಳಲು ಹೊರಟಿರುವ ವಿಚಾರ ನನಗೆ ಉಪಯೋಗಕ್ಕೆ ಬರುವ ವಿಚಾರವೋ?( Is what you want to tell me about my friend going to be useful to 1167)”. ಆಗ ಆ ವ್ಯಕ್ತಿ ಹೇಳುತ್ತಾನೆ “ಅಲ್ಲ (No, not really)” ಎಂದು. ಈಗ ಸೋಕ್ರಾಟೆಸ್‌ ಹೇಳುತ್ತಾನೆ “ನೀನು ಹೇಳಲು ಹೊರಟಿರುವ ವಿಚಾರ ನಿಜವಲ್ಲ, ಒಳ್ಳೆಯ ವಿಚಾರವಲ್ಲ, ಉಪಯೋಗಕ್ಕೆ ಬರುವ ವಿಚಾರವೂ ಅಲ್ಲ. ಮತ್ತೆ ಏಕೆ ನನಗೆ ಹೇಳುತ್ತೀಯ?( if what you want to tell me is neither true nor good nor even useful, why tell it to me at all)”. ಸ್ನೇಹಿತರೇ, ಇಲ್ಲಿ ನಾವು ಕಲಿಯಬೇಕಾದ ವಿಚಾರವೇನೆಂದರೆ ಮನಸ್ಸನ್ನು ಇಲ್ಲ ಸಲ್ಲದ ವಿಚಾರದಲ್ಲಿ ತೊಡಗಿಸುವ ಮೊದಲು ವಿಷಯವನ್ನು ಮೂರು ಬಾರಿ ಸೋಸುವುದನ್ನು ಕಲಿಯಿರಿ. ಬೇಡದ ವಿಚಾರದಲ್ಲಿ ವೈರಾಗ್ಯವನ್ನು ತಾಳಿ ಮತ್ತು ಮನಸ್ಸನ್ನು ಏಕಾಗ್ರಮಾಡುವ ಸಾಧನೆಯನ್ನು ಮನಸ್ಸಿಗೆ ಅಭ್ಯಾಸ ಮಾಡಿಸಿ. ಈ ಮಾರ್ಗದಲ್ಲಿ ಸಾಗಿದವರಿಗೆ ಧ್ಯಾನಯೋಗ ಎಂದೂ ಅಸಾಧ್ಯವಲ್ಲ.
Bibek Debroy (1955–2024)The Bhagavad Gita
(35) Bhagavan37 said: ‘O mighty-armed!38 There is no doubt that the mind is restless and difficult to control. But, O son of Kunti,39 through practice and detachment, it can be restrained.’