असंयतात्मना योगो दुष्प्राप इति मे मतिः ।
वश्यात्मना तु यतता शक्योऽवाप्तुमुपायतः ॥
asaṃyatātmanā yogo duṣprāpa iti me matiḥ |
vaśyātmanā tu yatatā śakyo'vāptumupāyataḥ ||
Swami Sivananda (1887–1963)Bhagavad Gita
36. I think that Yoga is hard to be attained by one of uncontrolled self, but the
self~controlled and striving one attains to it by the (proper) means.
Sri Vishwesha Tirtharu (1931–2019)Gitasaroddhara
6.34–6.40 · ಧ್ಯಾನಮಾರ್ಗವು ಕಠಿಣ ಆದರೆ ನಿರಪಾಯ
ಧ್ಯಾನ ಮಾರ್ಗವು ಕಠಿಣ, ಆದರೆ ನಿರಪಾಯ
ಗೀತೆಯಲ್ಲಿ ಹಾಗೂ ಉವನಿಷತ್ತಿನಲ್ಲಿ ಹೇಳಿರುವ ಈ ಧ್ಯಾನಯೋಗ
ವನ್ನಾಚರಿಸುವುದು ನಿಜಜೀವನದಲ್ಲಿ ನಮಗೆ ಬಹಳ ಕಠಿಣವೆನಿಸುತ್ತದೆ. ಮನಸ್ಸು
ಮರ್ಕಟನಂತಿದೆ. ಗಾಳಿಯನ್ನು ಒಂದೇಕಡೆ ಶೇಖರಿಸಿಡುವುದು ಹೇಗೋಹಾಗೆ
ಮನಸ್ಸಿನ ಕೇಂದ್ರೀಕರಣವೂ ಕೈಲಾಗದ ಕಾರ್ಯವೆಂದು ನಮಗನಿಸುತ್ತದೆ. ಎಷ್ಟು
ಪ್ರಯತ್ನಿಸಿದರೂ ಮನಸ್ಸು ಅಚಲವಾಗಿ ಭಗವಂತನಲ್ಲಿ ನೆಲೆನಿಲ್ಲುವಂತೆ
ಮಾಡಲು ನಮಗೆ ಸಾಧ್ಯವಾಗುತ್ತಿಲ್ಲ. ಮನಸ್ಸಿನಲ್ಲಿರುವ ಈ ಚಂಚಲತೆಯು
ಧ್ಯಾನಯೋಗದಲ್ಲಿ ನಮ್ಮನ್ನು ತೀರ ಅಸಮರ್ಥರನ್ನಾಗಿ ಮಾಡಿದೆ. ಇದು
ನಮ್ಮೆಲ್ಲರನ್ನೂ ಕಾಡಿಸುತ್ತಿರುವ ಅನಾದಿಯಾದ ಸಮಸ್ಯೆಯಾಗಿದೆ. ನಮ್ಮೆಲ್ಲರ
ಪರವಾಗಿಯೇ ಅರ್ಜುನನು ಈ ಪ್ರಶ್ನೆಯನ್ನು ಭಗವಂತನ ಮುಂದಿಡುತ್ತಾನೆ.
ಚಂಚಲಂಹಿ ಮನಃ ಕೃಷ್ಣ ಪ್ರಮಾಥಿ ಬಲವದ್ ದೃಢಂ [
ಶ್ರೀಕೃಷ್ಣನು ಮನಸ್ಸಿನ ಈ ಕುಚೇಷ್ಟೆಯನ್ನು ಎದುರಿಸಲು ಎರಡು
ಮಾರ್ಗಗಳನ್ನು ಬೋಧಿಸಿದ್ದಾನೆ. ಒಂದು ನಿರಂತರ ಅಭ್ಯಾಸ, ಇನ್ನೊಂದು
ವಿಷಯವೈರಾಗ್ಯ. ನಮ್ಮ ಮನಸ್ಸಿನೊಳಗೆ ಪರಮಾತ್ಮ ಕಾಲಿಡಲೇ ಸಾಧ್ಯವಿಲ್ಲ.
ವಿಷಯಾಸಕ್ತಿಯ ಹೊಲಸಿನಿಂದ ಅದು ತುಂಬಿಹೋಗಿದೆ. ಮೊದಲು ನಮ್ಮಲ್ಲಿ
ಅಂಟಿಕೊಂಡಿರುವ ಈ ಕಿಲುಬನ್ನು ತೆಗೆದು ಅಂತರಂಗವನ್ನು ಪರಿಶುದ್ಧಿಗೊಳಿ
ಸಿದರೆ ನಮ್ಮ ಹೃದಯಮಂದಿರಕ್ಕೆ ಪರಮಾತ್ಮನನ್ನು ಸ್ವಾಗತಿಸಲು ನಮಗೆ ಎನೂ
ಕ್ಲೇಶ, ಸಂಕಟಗಳಿನಿಸವು. ವಿಷಯ ಪ್ರೇಮವಿರುವವರೆಗೆ ಪರಮಾತ್ಮನ ಪ್ರೇಮ
ಉದಯಿಸಲಾರದು. ಪರಮಾತ್ಮನನ್ನು ಸ್ಥರಿಸಬೇಕೆಂದರೂ ಅವನನ್ನು
ಸುಲಭವಾಗಿ. ಮರೆಯುತ್ತಿರುವೆವು. ಆದರೆ ವಿಷಯಪದಾರ್ಥಗಳನ್ನು
ಮರೆಯಬೇಕೆಂದು ಪ್ರಯತ್ನಿಸಿದರೂ ಅವುಗಳ ವಿಚಾರವನ್ನು ತಲೆಯಿಂದ
ಹೊರಗೆ ಹಾಕಲು ಸಾಧ್ಯವಾಗುತ್ತಿಲ್ಲ. ವಿಷಯ ಪ್ರೇಮವು ಅಷ್ಟುಸುದೃಢವಾಗಿ
ನಮ್ಮ ಮನಸ್ಸಿನಲ್ಲಿ ಬೇರೂರಿದೆ. ಧ್ಯಾನದಲ್ಲಿ ನಾವು ಯಶಸ್ವಿಯಾಗದಿರುವುದಕ್ಕೆ
ಈ ಲೌಕಿಕ ಪ್ರೇಮದ ಒತ್ತಡ ಹಾಗೂ ಪರಮಾತ್ಮನ ಪ್ರೇಮದ ಅಭಾವಗಳೇ
ಕಾರಣಗಳಾಗಿವೆ. ನಾವು ನಮ್ಮ ಮಡದಿ, ಮಕ್ಕಳು, ಮನೆ, ಮಹಡಿಗಳಲ್ಲಿ
ಮಾಡುವಷ್ಟು ಪ್ರೀತಿಯನ್ನು ಪರಮಾತ್ಮನಲ್ಲಿ ಮಾಡದಿರುವಾಗ ನಾವು ಹೇಗೆ
ಅವನ ಧ್ಯಾನವನ್ನು ಮಾಡಬಲ್ಲೆವು? ಎಲ್ಲಿ ಪ್ರೇಮವಿದೆಯೋ ಅಲ್ಲಿ ಮನಸ್ಸು
ಕ್ರೇಂದ್ರೀಕೃತವಾಗಲು ಏನೂ ಪ್ರಯಾಸವಾಗುವುದಿಲ್ಲ. ನಮಗೆ ಪ್ರಿಯವಾದ
ಲೌಕಿಕವಸ್ತುಗಳನ್ನು ಎಲ್ಲ ದೈನಂದಿನ ವ್ಯವಹಾರಗಳ ಮಧ್ಯದಲ್ಲೂ ಸ್ವಪ್ನದಲ್ಲೂ
ಸದಾ ಚಿಂತಿಸುತ್ತಿರುವೆವು. ಶ್ರೀಹರಿಯನ್ನು ಒಂದು ಗಳಿಗೆಯಾದರೂ ಚಿಂತಿಸಲು
ನಮಗೆ ಏಕೆ ಸಾಧ್ಯವಾಗುತ್ತಿಲ್ಲ? ಇದು ಮನಸ್ಸಿನಲ್ಲಿಯೇ ನಾವು
ಪ್ರಶ್ನಿಸಿಕೊಳ್ಳಬೇಕಾದ ಸಂಗತಿಯಾಗಿದೆ. ನಮ್ಮ ಹೃದಯದಲ್ಲಿ ಭಕ್ತಿಯಸೆಲೆಯೇ
ಬತ್ತಿಹೋಗಿದೆ. ನಾವು ಭಕ್ತಿಯ ಪ್ರದರ್ಶನವನ್ನು ಮಾಡುತ್ತಿರುವೆವೇಹೊರತು
ನಿಜವಾದ ಭಕ್ತಿಯನ್ನಲ್ಲ.
ತನ್ನ ಪತಿಯ ಕಡೆಗೆ ಹೊರಟ ಮುಗುದೆಯೊಬ್ಬಳು ಧ್ಯಾನಾರೂಢನಾದ
ರಾಜನನ್ನು ಅನ್ಯಮನಸ್ಥತೆಯಿಂದ ತುಳಿದು, ಅದರ ಪರಿವೆ ಇಲ್ಲದೆ
ಮುಂದುವರಿಯಲು, ಅವಮಾನಿತನಾಗಿ ಕೋಪಗೊಂಡ ರಾಜನು ಅವಳನ್ನು
ಕರೆಸಿ ವಿಚಾರಣೆಗೊಳಪಡಿಸಿದಾಗ ಅವಳು ನಗುತ್ತ ಉತ್ತರಿಸಿದಳು: ನಾನು
ಸಾಮಾನ್ಯ ಮಾನವನಾದ ನನ್ನ ಪ್ರಿಯ ಪತಿಯನ್ನು ನೆನೆದುಕೊಂಡು ಹೋಗುವ
ಭರದಲ್ಲಿ ಕಾಲಿನಿಂದ ರಾಜನನ್ನು ಮುಟ್ಟಿದ್ದು ನನಗೇ ತಿಳಿಯಲಿಲ್ಲ;
ಹೀಗಿರುವಾಗ ಅನಂತ ಗುಣಶಾಲಿಯಾದ ಜಗದೊಡೆಯನನ್ನೇ ತಲ್ಲೀನತೆ
ಯಿಂದ ಸ್ಥರಿಸುವ ಈ ರಾಜನಿಗೆ ಅದು ಹೇಗೆ ತಿಳಿಯಿತು? ನನಗೆ ಇರುವ
ಪತಿಪ್ರೇಮದಷ್ಟೂ ಹರಿಪ್ರೇಮವು ಈತನಿಗಿಲ್ಲವೆ? ಎಂದು ಅವಳು ಸವಾಲು
ಹಾಕಿದಳು. ಇದು ವಾಸ್ತವವಾದ ಪ್ರಶ್ನೆಯಾಗಿದೆ. ನಮ್ಮ ಸೊತ್ತು ಪರಿವಾರಗಳಲ್ಲಿ
ಮಾಡುವ ಪ್ರೀತಿಯ ಅರ್ಧದಷ್ಟೂ ನಾವು ಪರಮಾತ್ಮನನ್ನು ಪ್ರೀತಿಸುತ್ತಿಲ್ಲ.
ಆದುದರಿಂದಲೇ ನಮ್ಮ ಹೃದಯ ದೇಗುಲದಲ್ಲಿ ಪರಮಾತ್ಮನ ಪ್ರತಿಮೆಯು
ಚಲವಾಗಿದೆ. ಸ್ಥಿರ ಪ್ರತಿಮೆಯನ್ನು ಸ್ಥಾಪಿಸಲು ನಾವು ಅಶಕ್ತರಾಗಿರುವೆವು.
ವಿಷಯವೈರಾಗ್ಯ ಮತ್ತು ಭಗವತ್ ಪ್ರೇಮಗಳಿಂದಲೇ ನಾವು ಇದರಲ್ಲಿ
ಯಶಸ್ವಿಯಾಗಬಲ್ಲೆವು.
ಯತತೋಇಷಪಿ ಹರೇಃ ಪದಸಂಸ್ಕರಣೇ
ಸಕಲಂ ಹೃಘಮಾಶು ಲಯಂ ವ್ರಜತಿ |
ದ್ವಾದಶಸ್ತೊ ತ್ರ
ಎಂದು ಶ್ರೀಮದಾಚಾರ್ಯರು ಅಪ್ಪಣೆ ಕೊಡಿಸಿದಂತೆ ಪರಮಾತ್ಮನ ಧ್ಯಾನವನ್ನು
ಏಕಾಗ್ರತೆಯಿಂದ ಮಾಡಲು ನವಗೆ ಶಕ್ಕವಾಗದಿದ್ದರೂ ಅದಕ್ಕಾಗಿ ಪ್ರಾಮಾಣಿಕ
ಪ್ರಯತ್ನವನ್ನು ಮಾಡುವುದರಿಂದಲೂ ನಮ್ಮ ಸಕಲ ಪಾಪಗಳ
ಪರಿಹಾರವಾಗುವುದು.
ಧ್ಯಾನಮಾರ್ಗದಲ್ಲಿ ಅಯಶಸ್ವಿಯಾಗಿ ಯೋಗಭ್ರಷ್ಟನಾದವನು ಇಹಪರ
ಗಳಿರಡಕ್ಕೂ ಎರವಾ ಗುವನೆ? ಎಂಬ ಅರ್ಜುನನ ಸಂಶಯಕ್ಕೂ ಶ್ರೀಕೃಷ್ಣನು ಇದೇ
ರೀತಿಯ ಪರಿಹಾರವನ್ನು ಹೇಳಿದ್ದಾ ನೆ.
ನಹಿ ಕಲ್ಯಾಣಕೃತ್ ಕಶ್ಚಿ ದ್ ದುರ್ಗತಿಂತಾತ ಗಚ್ಛತಿ [
ಒಳ್ಳೆಯ ಕೆಲಸವನ್ನು ಮಾಡುವವನಿಗೆ ಅದನ್ನು ಪೂರ್ಣಗೊಳಿಸಲಾಗ
ದಿದ್ದರೂ ದುರ್ಗತಿಯು ಖಂಡಿತ ಬರುವುದಿಲ್ಲ. ಸದುದ್ದೇಶದಿಂದ ಮಾಡಿದ
ಪ್ರಾಮಾಣಿಕ ಪ್ರಯತ್ನಕ್ಕೆ ಉತ್ತಮ ಫಲವು ನಿಶ್ಚಯವಾಗಿ ದೊರೆಯುವುದು. ಇದು
ಭಗವಂತನು ನೀಡಿದ ಭರವಸೆಯಾಗಿದೆ. ಮಂತ್ರಿ ಮಾಗಧರು ನೀಡುವ
ಆಶ್ವಾಸನದಂತೆ ಇದು ಹುಸಿಯಾಗುವುದಿಲ್ಲ. ಈ ಜನ್ಮದಲ್ಲಿ ನಮ್ಮ ಸಾಧನೆ
ಅದೂರ್ಣವಾದಲ್ಲಿ ಜನ್ಮಾಂತರದಲ್ಲಿ ಅದನ್ನು ಮುಂದುವರಿಸುವಸ್ನನ್ನಿವೇಶವನ್ನು
ಪರಮಾತ್ಥನು ಒದಗಸತ್ತಾರೆ ಪರಮಾತ್ಮನ ಈಧಿಯವ, ಸು್ಯಸ್ಥೆಗಳ್ಲಿ ನಾವ,
ಪೂರ್ಣ ವಿರ್ವಾಸವನ್ನಿಟ್ಟು ಧೈರ್ಯದಿಂದ ಸಾಧನೆಯನ್ನು ನಡೆಸಿಕೊಂಡು
ಹೋಗಬೇಕು. ನಾವೀಗಎಲ್ಲರೂ ಧ್ಯಾನ, ಸಮಾಧಿಗಳನ್ನು ಮಾಡಬೇಕೆಂದು ಕರೆ
ನೀಡುತ್ತಿಲ್ಲ. ತಮಗೆ ಸಾಧ್ಯವಾಗುವಂತಹ ಆಧ್ಯಾಕ್ಮಿಕ ಸಾಧನೆಯನ್ನು
ಪ್ರತಿಯೊಬ್ಬರೂ ನಿರ್ವಂಚನೆಯಿಂದಕ್ಕೆಗೊಳ್ಳಲಿ. ಪ್ರತಿದಿನವೂ ಸಂಧ್ಯಾವಂದನ
ದಂತಹಸರಕ ಶಾಸ್ತ್ರೀಯ ಪ್ರಾರ್ಥನೆಯ ನ್ನಾರರೂವ್ರತಿ ಯೊಬ್ಬರೂ ಆಚರಿಸಿ
ಕ್ರಮಕ್ರಮವಾಗಿ ಆತ್ಮೋನ್ಸತಿಯನ್ನು ಸಾಧಿಸಲಿ ಇಂತಹ ವ್ರಾರಂಭಿಕ
ಪ್ರಯತ್ನ ದಿಂದ ಮುಂದಿನಹಾದಿಯು ಸಹಜವಾಗಿ ಏನೂ ಶ್ರಮವಿಲ್ಲ ದೆಅವನಿಗೆ
ಗೋಚರವಾಗುವುದು.
Bannanje Govindacharya (1936–2020)Bhagavad Gita Pravachana
ಅಸಂಯತ ಆತ್ಮನಾ ಯೋಗಃ Hay Be ಇತಿ ಮೇ ಮತಿಃ |
ವಶ್ಯ ಆತ್ಮನಾ ತು ಸತತಂ ಶಕ್ಯಃ ಆವಾಪುುಮ್ ಅಶೇಷತಃ -ಬಗೆ ಬಿಗಿಗೊಳಿಸದವನಿಗೆ ಸಮಾಧಿ ಸಿಗುವಂತದ್ದಲ್ಲ
ಎಂದು ನನ್ನ ತೀರ್ಮಾನ. ಬಗೆಯನ್ನು ಸದಾ ಹಿಡಿತದಲ್ಲಿಟ್ಟವನು ಸಮಗ್ರವಾಗಿ ಸಮಾಧಿಯನ್ನು ಸಾಧಿಸಬಲ್ಲ.
ಯಾರು ತನ್ನ ಸೋಮಾರಿತನದಿಂದ, ಕೆಟ್ಟ ಲೌಕಿಕ ಅಭಿಲಾಷೆಯಿಂದ ಈ ರೀತಿ ಪ್ರಯತ್ನ ಮಾಡುವುದಿಲ್ಲವೋ
ಅವನಿಗೆ ಸಮಾಧಿ ಎಂದೂ ದಕ್ಕುವುದಿಲ್ಲ. ವೈರಾಗ್ಯ ಮತ್ತು ಅಭ್ಯಾಸವೆಂಬ ಉಪಾಯದಿಂದ ಮನಸ್ಸನ್ನು ಮಣಿಸಿ
ನಮಗೆ ಬೇಕಾದಂತೆ ಆ ಮನಸ್ಸಿನಿಂದ ಕೆಲಸವನ್ನು ಮಾಡಿಸಿಕೊಳ್ಳಬೇಕು. ಹೀಗೆ ಮಾಡಿದಾಗ ಸಮಾಧಿಯನ್ನು
ಸಾಧಿಸಬಹುದು ಎನ್ನುವ ಭರವಸೆಯನ್ನು ಕೃಷ್ಣ ಇಲ್ಲಿ ಕೊಟ್ಟಿದ್ದಾನೆ.
ಕೃಷ್ಣನ ಈ ಉತ್ತರದಲ್ಲಿ ನಮಗೆ ಧ್ಯಾನಕ್ಕೆ ಬೇಕಾದ ಉಪಾಯ ದೊರಕಿತು. ಆದರೆ ಈಗ ನಮ್ಮೆಲ್ಲರಿಗೆ ಇನ್ನೊಂದು
ಪ್ರಶ್ನೆ ಎದುರಾಗುತ್ತದೆ. ಅದೇನೆಂದರೆ ಸಂಸಾರದಲ್ಲಿರುವ ನಾವು ಒಂದು ವೇಳೆ ಸಾಧನೆಯ ಹಾದಿಯಲ್ಲಿ ಪೂರ್ಣ
ಸಮಾಧಿಯನ್ನು ಸಾಧಿಸದೇ ಮಧ್ಯದಲ್ಲೇ ನಿಂತಿದ್ದರೆ ಅಥವಾ ಅರ್ಧ ಸಾಧನೆಯ ನಂತರ ನನ್ನ ಈ ಜನ್ಮ
ಕೊನೆಗೊಂಡರೆ ಆಗ ನನ್ನ ಪಾಡೇನು? ಈ ಜನ್ಮದ ಸಾಧನೆ ವ್ಯರ್ಥವೋ? ನಾನು ಭಗವಂತನನ್ನು ಸೇರುವುದು
ಅಸಾಧ್ಯವೋ? ನಮ್ಮ ಈ ಪ್ರಶ್ನೆಯನ್ನೇ ಮುಂದಿನ ಶ್ಲೋಕದಲ್ಲಿ ಅರ್ಜುನ ಕೃಷ್ಣನಲ್ಲಿ ಕೇಳುತ್ತಾನೆ.
ಅರ್ಜುನ ಉವಾಚ ।
Bibek Debroy (1955–2024)The Bhagavad Gita
(36)
‘My view is that yoga is difficult for someone whose mind is uncontrolled.
But it is possible to achieve for someone whose mind is controlled and who
makes special effort.’