चतुर्विधा भजन्ते मां जनाः सुकृतिनोऽर्जुन ।
आर्तो जिज्ञासुरर्थार्थी ज्ञानी च भरतर्षभ ॥
caturvidhā bhajante māṃ janāḥ sukṛtino'rjuna |
ārto jijñāsurarthārthī jñānī ca bharatarṣabha ||
Swami Sivananda (1887–1963)Bhagavad Gita
16. Four kinds of virtuous men worship Me, O Arjuna! They are the distressed, the seeker of
knowledge, the seeker of wealth, and the wise, O lord of the Bharatas!
Bannanje Govindacharya (1936–2020)Bhagavad Gita Pravachana
ಚತುರ್ವಿಧಾಃ ಭಜಂತೇ ಮಾಮ್ ಜನಾಃ ಸುಕೃತಿನಃ ಅರ್ಜುನ |
ಆರ್ತಃ ಜಿಜ್ಞಾಸುಃ ಅರ್ಥ ಅರ್ಥೀ ಜ್ಞಾನೀ ಚ ಭರತ ಖುಷಭ-ಓ ಭರತ ವಂಶದ ವೀರ ಅರ್ಜುನಾ, ಪುಣ್ಯವಂತರಾದ
ನಾಲ್ಕು ಬಗೆಯ ಜನರು ನನ್ನಲ್ಲಿ ಭಕ್ತಿ ಇಡುತ್ತಾರೆ: ಸಂಕಟದಲ್ಲಿರುವವರು, ಸಿರಿಯನ್ನು ಬಯಸುವವರು, ತಿಳಿಯ
ಬಯಸುವವರು ಮತ್ತು ತಿಳದವರು.
ದುಷ್ಕೃತಿಗಳ ಬಗ್ಗೆ ಮೊದಲು ವಿವರಿಸಿದ ಕೃಷ್ಣ ಈ ಶ್ಲೋಕದಲ್ಲಿ ಸುಕೃತಿಗಳ ಬಗ್ಗೆ ವಿವರಿಸುತ್ತಾನೆ. ಭಗವಂತನ
ಕಡೆಗೆ ಸಾಗುವುದು ಒಂದು ಸರಳರೇಖೆಯ ದಾರಿ ಇದ್ದಂತೆ. ಅದು ಕವಲು ದಾರಿ ಅಲ್ಲ. ಈ ಸರಳರೇಖೆಯಲ್ಲಿ
ಭಗವಂತನಿಗೆ ಬೆನ್ನು ಹಾಕಿ ಸಾಗುವವರು ಸ್ವಭಾವತಃ ದುಷ್ಕೃತಿಗಳು. ಭಗವಂತನಿಗೆ ಬೆನ್ನು ಹಾಕಿ ಸಾಗಿ,
ನಂತರ ಅರಿವು ಮೂಡಿ ಪುನಃ ಭಗವಂತನತ್ತ ಮುಖ ಹಾಕುವವರು ದುಷ್ಕೃತಿಗಳಾಗಿದ್ದು ಸುಕೃತಿಗಳಾಗುವವರು.
ಇನ್ನು ಭಗವಂತನತ್ತ ಮುಖ ಮಾಡಿ ಸಾಗುವವರು ಸ್ವಭಾವತಃ ಸುಕೃತಿಗಳು. ಇವರು ಭಗವಂತನನ್ನು
ಭಜಿಸುವವರು. ಈ ಸುಕೃತಿಗಳಲ್ಲಿ ನಾಲ್ಕು ವಿಧ: (೧) ಆರ್ತಃ (೨) ಜಿಜ್ಞಾಸುಃ (೩) ಅರ್ಥ ಅರ್ಥೀ (೪) ಜ್ಞಾನಿ.
ಕೃಷ್ಣ ಹೇಳುತ್ತಾನೆ “ನನ್ನನ್ನು ನಾಲ್ಕು ವಿಧದಲ್ಲಿ ಭಜಿಸುವ ಸುಕೃತ ಜನರಿದ್ದಾರೆ” ಎಂದು. ಇಲ್ಲಿ ಭಜಿಸುವುದು
ಅಥವಾ ‘PBT’ ಅಂದರೆ “ಭಕ್ತಿಯಿಂದ ಭಗವಂತನನ್ನು ಆರಾಧಿಸುವುದು' ಎಂದರ್ಥ. ಭಜ ಸೇವಾಯಾಂ ಧಾತು.
ಭಗವಂತನನ್ನು ಎಲ್ಲವುದಕ್ಕಿಂತ ಹಿರಿದಾಗಿ ಮತ್ತು ಹೆಚ್ಚಾಗಿ ಪ್ರೀತಿಸಿ, ಆ ಪ್ರೀತಿಗೆ ತಕ್ಕಂತೆ ನಡೆದುಕೊಳ್ಳುವುದು
ಭಜನೆ. ಈ ರೀತಿ ಭಜಿಸುವವರಲ್ಲಿ ಮೊದಲನೆಯವರು ಆರ್ತರು.
ಮನುಷ್ಯ ಯಾವುದೋ ಒಂದು ತೊಂದರೆಗೆ ಸಿಕ್ಕಿಕೊಂಡಾಗ, ದುಃಖಕ್ಕೊಳಗಾದಾಗ, ಪರಿಹಾರ ಕೋರಿ
ದೇವರಲ್ಲಿ ಪ್ರಾರ್ಥನೆ ಮಾಡುತ್ತಾನೆ. ಇದು ಆರ್ತಃ ಭಕ್ತಿ. ಈ ಭಕ್ತಿಯಲ್ಲಿ ಅತ್ಯಂತ ಕೆಳ ಮಟ್ಟದಿಂದ ಅತ್ಯಂತ ಶ್ರೇಷ್ಠ
ಮಟ್ಟವನ್ನು ಕಾಣಬಹುದು. ಕಷ್ಟ ಬಂದಾಗ ದೇವರನ್ನು ಆರ್ತನಾಗಿ ಭಜಿಸಿ, ಸುಖ ಬಂದಾಗ ಸಂಪೂರ್ಣ
ಮರೆತರೆ- ಸಂಕಟ ಬಂದಾಗ ವೆಂಕಟರಮಣ' ಎನ್ನುವಂತೆ ಅದು ಅತ್ಯಂತ ಕೆಳಮಟ್ಟದ ಆರ್ತಭಕ್ತಿಯಾಗುತ್ತದೆ.
ಆರ್ತ ಭಕ್ತಿಯಲ್ಲಿ ಅತ್ಯಂತ ಶ್ರೇಷ್ಠ ಮಟ್ಟದ ಭಕ್ತಿಗೆ ಉತ್ತಮ ದೃಷ್ಟಾಂತ ದ್ರೌಪದಿ. ಸಭೆಯಲ್ಲಿ ಆಕೆಯ ಮಾನಭಂಗ
ಪ್ರಸಂಗ ಎದುರಾದಾಗ, ಆಕೆ ಕೃಷ್ಣನನ್ನು ಆರ್ತನಾದದಿಂದ ಕೂಗಿ ಭಜಿಸುತ್ತಾಳೆ.(ಇಲ್ಲಿ ದ್ರೌಪದಿ ಕೃಷ್ಣನನ್ನು
ನಿರಂತರ ಭಜಿಸುತ್ತಿದ್ದಳು ಎನ್ನುವುದನ್ನು ನಾವು ಮರೆಯಬಾರದು). ಮೊಸಳೆ ತನ್ನ ಕಾಲನ್ನು ಕಚ್ಚಿ ಹಿಡಿದಾಗ
ಗಜೇಂದ್ರ ಮಾಡಿದ್ದೂ ಕೂಡಾ ಆರ್ತ ಭಕ್ತೆ.
ಆರ್ತ ಭಕ್ತಿಯಲ್ಲಿ ಒಂದು ಸಮಸ್ಯೆ ಇದೆ. ಸಾಮಾನ್ಯವಾಗಿ ನಮಗೆ ಸುಖ ಬಂದಾಗ ನಾವು ಭಗವಂತನನ್ನು
ಮರೆತುಬಿಡುತ್ತೇವೆ. ನಮ್ಮೆಲ್ಲಾ ಐಶ್ವರ್ಯ-ಸಂಪತ್ನು “ನಮ್ಮ ದುಡಿಮೆಯ ಫಲ' ಅಂದುಕೊಳ್ಳುತ್ತೇವೆ. ಆಗ ನಮಗೆ
ದೇವರು ನನಪಿಗೆ ಬರುವುದೇ ಇಲ್ಲ. ಆದರೆ ಒಂದು ವೇಳೆ ಏನಾದರೂ ಸಮಸ್ಯೆ ಬಂದರೆ-ಮೊದಲು ನೆನಪಿಗೆ
ಬರುವುದು ದೇವರು. ಎಂದೆಂದೂ "ದೇವರು ಸುಖವನ್ನೇಕೆ ಕೊಟ್ಟ' ಎಂದು ಯೋಚಿಸದ ನಾವು, ಕಷ್ಟ ಬಂದಾಗ
"ದೇವರು ನನಗೇಕೆ ಹೀಗೆ ಮಾಡಿದ' ಎನ್ನಲಾರಂಭಿಸುತ್ತೇವೆ! ಸಾಮಾನ್ಯವಾಗಿ ಜನರು ಸಂಕಟ ಬಂದಾಗ
ಮೊದಲು ಜ್ಯೋತಿಷಿಗಳ ಬಳಿ ಹೋಗುತ್ತಾರೆ. ಜ್ಯೋತಿಷಿಗಳು ಒಂದು ಪರಿಹಾರ ಮಾರ್ಗವನ್ನು ಸೂಚಿಸುತ್ತಾರೆ.
ನವಗ್ರಹ ಪೂಜೆ, ನಾಗಾರಾಧನೆ, ಗಣಪತಿ ಪೂಜೆ, ದೇವೀ ಆರಾಧನೆ ಇತ್ಯಾದಿ. ಇಲ್ಲಿ ಕೆಲವು ಶಾಸ್ತ್ರ ಜ್ಞಾನವಿಲ್ಲದ
ಮತ್ತು ಅಧ್ಯಾತ್ಮದ ಅರಿವಿಲ್ಲದ ಸಾಮಾನ್ಯ ಜ್ಯೋತಿಷಿಗಳು, ಜನರಿಗೆ ಸರಿಯಾದ ಮಾರ್ಗದರ್ಶನ ಮಾಡದೇ
ತಪ್ಪು ಮಾರ್ಗ ತೋರಿಸುವ ಸಾಧ್ಯತೆ ಹೆಚ್ಚು. ಕೆಲವರು. “ನೀನು ವಿಷ್ಣು ಪೂಜೆ ಮಾಡಿದ್ದರಿಂದ ದೇವಿ
ಕೋಪಗೊಂಡಿದ್ದಾಳೆ!!” ಎಂಬಿತ್ಯಾದಿ ಅಸಂಬದ್ಧ ಹೇಳಿಕೆ ಕೊಟ್ಟು, ಜನರನ್ನು ದಾರಿತಪ್ಪಿಸುವ ಪ್ರಸಂಗವಿದೆ.
ಹೀಗಾದಾಗ ಸಾಮಾನ್ಯ ಜನರು ಎಲ್ಲಾ ದೇವತೆಗಳನ್ನು ಬೇರೆ ಬೇರೆಯಾಗಿ ಪೂಜಿಸಿ, ಏಕಭಕ್ತಿಯಿಂದ ದೂರ
ಸರಿಯುತ್ತಾರೆ. ಇದರಿಂದಾಗಿ ಭಗವಂತನನ್ನು ಪ್ರೀತಿಸುವ ಬದಲು ಭಯದಿಂದ “ದೇವರಿಂದ ನನಗೆ ಯಾವ
ತೊಂದರೆ ಆಗದಿರಲಿ' ಎನ್ನುವಂತೆ ಭಕ್ತಿ ಮಾಡುವ ಸಾಧ್ಯತೆ ಇದೆ! ಈ ಎಲ್ಲಾ ಕಾರಣದಿಂದ ನಿರಂತರಭಕ್ತೆ ಮತ್ತು
ಏಕಭಕ್ತಿ ಆರ್ತಭಕ್ತರಲ್ಲಿ ಇಲ್ಲದೇ ಇರುವ ಸಾಧ್ಯತೆ ಹೆಚ್ಚು.
ಆರ್ತರು ಕಷ್ಟವನ್ನು ನೀಗುವಂತೆ ಭಗವಂತನಲ್ಲಿ ಭಕ್ತಿ ಮಾಡಿದರೆ, ಜಿಜ್ಞಾಸುಗಳು ಜ್ಞಾನಕ್ಕಾಗಿ ಭಗವಂತನಲ್ಲಿ ಭಕ್ತಿ
ಮಾಡುತ್ತಾರೆ. ಅದೇ ರೀತಿ ಅರ್ಥಾರ್ಥಿಗಳು ಐಹಿಕ ಸಂಪತ್ತಿಗಾಗಿ, ಐಶ್ವರ್ಯಕ್ಕಾಗಿ, ಏನನ್ನೋ
ಪಡೆಯುವುದಕ್ಕಾಗಿ ಭಗವಂತನನ್ನು ಪೂಜಿಸುತ್ತಾರೆ.
ಈ ಮೂರು ಭಕ್ತರಿಗಿಂತ ಭಿನ್ನ ನಾಲ್ಕನೇ ವಿಧದ ಭಕ್ತ. ಆತ ಜ್ಞಾನಿ. ಆತ ಏನೋ ಬೇಕು ಅಥವಾ ಬೇಡ ಎಂದು
ಭಗವಂತನನ್ನು ಪೂಜಿಸುವುದಿಲ್ಲ; ಬದಲಿಗೆ ಭಗವಂತನ ಮಹಿಮೆಯನ್ನು ಸಂಪೂರ್ಣ ತಿಳಿದ ಆತ ಸಹಜವಾಗಿ
ಭಗವಂತನನ್ನು ಅನನ್ಯವಾಗಿ ಪ್ರೀತಿಸುತ್ತಿರುತ್ತಾನೆ. ಈತನಲ್ಲಿ ಏಕಭಕ್ತಿ ಮತ್ತು ನಿರಂತರ ಭಕ್ತಿ ಇರುತ್ತದೆ.
ಯಾವುದೇ ಐಹಿಕ ಫಲಾಪೇಕ್ಷೆಯಿಂದ ಈತ ಭಗವಂತನನ್ನು ಭಜಿಸುವುದಿಲ್ಲ.
ಮುಂದಿನ ಶ್ಲೋಕಕ್ಕೆ ಹೋಗುವ ಮೊದಲು ಇಲ್ಲಿ ನಾವು ಏಕಭಕ್ತಿ ಅಂದರೆ ಏನು ಎನ್ನುವುದನ್ನು ಸ್ಪಷ್ಟವಾಗಿ
ತಿಳಿದಿರಬೇಕು. ಏಕಭಕ್ತಿ ಎಂದರೆ ಎಲ್ಲಾ ದೇವತೆಗಳನ್ನು, ಗುರು-ಹಿರಿಯರನ್ನು ನಿರ್ಲಕ್ಷಿಸಿ ಕೇವಲ ಭಗವಂತನನ್ನು
ಪೂಜಿಸುವುದಲ್ಲ. ಒಂದು ವೇಳೆ ನಾವು ಹೀಗೆ ಮಾಡಿದರೆ ಅದು ಭಗವಂತನನ್ನು ಅವಮಾನ ಮಾಡಿದಂತೆ.
ಉದಾಹರಣೆಗೆ ನಮಗೆ ಯಾವುದೋ ತೊಂದರೆ ಬಂದಾಗ ಜ್ಯೋತಿಷಿಯೊಬ್ಬರು "ನವಗ್ರಹ ಶಾಂತಿ' ಮಾಡಿಸಿ
ಪರಿಹಾರವಾಗುತ್ತದೆ ಎಂದು ಹೇಳುತ್ತಾರೆ. ಹೀಗೆ ಹೇಳಿದಾಗ ನಾವು ಅದನ್ನು ನಿರ್ಲಕ್ಷಿಸಿ ಕೇವಲ ಭಗವಂತನನ್ನು
ಮಾತ್ರ ನಾನು ಭಜಿಸುತ್ತೇನೆ, ಭಗವಂತನ ಅಧೀನ ದೇವತೆಯ ಪೂಜೆಯ ಅಗತ್ಯವೇನು ಎಂದು
ತಿಳಿದುಕೊಂಡರೆ ಅದು ತಪ್ಪಾಗುತ್ತದೆ. ನವಗ್ರಹಗಳ ಪರಿವಾರ ಸಹಿತನಾಗಿ ಕೂತ ಭಗವಂತನಿಗೆ ಮಾಡುವ
ಪೂಜೆ "ನವಗ್ರಹ ಪೂಜೆ'. ಇದು ಯಾವುದರಿಂದ ಸಮಸ್ಯೆ ಬಂತೋ ಅದರ ಮುಖಂಡನಾಗಿ ಕುಳಿತ ಭಗವಂತನ
ಪೂಜೆ. ಭಗವಂತನ ಸಮಸ್ತ ಪರಿವಾರದ ವೈಭವನ್ನು ನೆನೆಸಿಕೊಂಡು ಯಾವುದೇ ಪೂಜೆ ಮಾಡಿದರೂ ಅದು
ಶ್ರೇಷ್ಠ ಪೂಜೆ ಎನಿಸುತ್ತದೆ. ಸಮಸ್ತ ದೇವತೆಗಳ ಸಹಿತನಾದ ಭಗವಂತನ ಉಪಾಸನೆಯೇ ಏಕಭಕ್ತಿ. ಭಗವಂತ
ಏಕಾಕಿ ಅಲ್ಲ. ಆತ ಅನಂತ ಪ್ರಜಾಪತಿ. ಆದ್ದರಿಂದ ಭಗವಂತನನ್ನು ಪ್ರಧಾನವಾಗಿಟ್ಟುಕೊಂಡು ಇತರ
ದೇವತೆಗಳನ್ನು ಭಗವಂತನ ಪರಿವಾರವಾಗಿ ತಿಳಿದು ನಿಷ್ಠೆಯಿಂದ ಪೂಜಿಸಬೇಕು. ಇದು ದೇವರನ್ನು ಸೇರಲು
ನಮಗೆ ಮಾರ್ಗದರ್ಶನ ಮಾಡುವ ದೇವತೆಗಳೂ ಇಷ್ಟಪಡುವ ಅತಿಶ್ರೇಷ್ಠ ಭಕ್ತಿ. ಒಂದು ವೇಳೆ ನಾವು
ಭಗವಂತನನ್ನು ಮರೆತು ಕೇವಲ ಒಂದು ದೇವತೆಯನ್ನು ಪೂಜಿಸಿದರೆ ಆ ದೇವತೆ ನಮ್ಮ ಪೂಜೆಯನ್ನು
ಸ್ವೀಕರಿಸದೇ ಇರಬಹುದು. ಪೂಜೆ ಪರಿಪೂರ್ಣವಾಗಬೇಕಾದರೆ ನಾವು ಏಕಭಕ್ತಿಯನ್ನು ಭಗವಂತನಲ್ಲಿ
ತೋರಬೇಕು.
ಗುರುಭಕ್ತಿ. ಕೂಡಾ ಇದೇ ರೀತಿ. ಗುರುಭಕ್ತಿಯಲ್ಲಿ ನಾವು. ಕಾಣಬೇಕಾಗಿರುವುದು. ಗುರುವಿನ
ಅಂತರಂಗದೊಳಗಿರುವ ಭಗವಂತನನ್ನು. ಜ್ಞಾನಿ ಎಲ್ಲವುದರಲ್ಲೂ ಅದರ ಅಂತರ್ಯಾಮಿಯಾದ ಭಗವಂತನನ್ನು
ಕಾಣುತ್ತಾ, ಐಹಿಕ ಫಲಾಪೇಕ್ಷೆ ಇಲ್ಲದ ಏಕಭಕ್ತೆ ಮತ್ತು ನಿರಂತರ ಭಕ್ತಿಯನ್ನು ರೂಢಿಸಿಕೊಂಡಿರುತ್ತಾನೆ.
Bibek Debroy (1955–2024)The Bhagavad Gita
(16)
‘O best of the Bharatas!21 O Arjuna! There are four types of people, pure of
heart, who worship me—those who are suffering, those who want
satisfaction,22 those who want self-knowledge and those who know.’