7.17

तेषां ज्ञानी नित्ययुक्त एकभक्तिर्विशिष्यते ।
प्रियो हि ज्ञानिनोऽत्यर्थमहं स च मम प्रियः ॥
teṣāṃ jñānī nityayukta ekabhaktirviśiṣyate |
priyo hi jñānino'tyarthamahaṃ sa ca mama priyaḥ ||
Sri Madhvacharya (1238–1317)Bhagavad Gita Tatparya Nirnaya
विष्णोर्वशे ततोऽनन्यभक्त्या तं शरणं व्रजेत्। यादृशी तत्र भक्तिः स्यात् तादृश्यन्यत्र नैव चेत्। अनन्यभक्तिः सा ज्ञेया विष्णावेव तु सा भवेत्। अन्येषु वैष्णवत्वेन लक्ष्मीब्रह्महरादिषु। कुर्याद्भक्तिं नान्यथा तु तद्वशा एव ते यतः॥17॥
Swami Sivananda (1887–1963)Bhagavad Gita
17. Of them, the wise, ever steadfast and devoted to the One, excels (is the best); for, I am exceedingly dear to the wise and he is dear to Me.
Sri Vishwesha Tirtharu (1931–2019)Gitasaroddhara
ಭಕ್ತಿಯ ಪ್ರಕಾರಗಳು
ಭಕ್ತಿಯ ಪ್ರಕಾರಗಳು ಪರಮಾತ್ಮನ ಈ ಮಹಿಮೆಯ ಜ್ಞಾನದಿಂದಲೂ ನಮಗೆ ಪ್ರತಿಕ್ಷಣವೂ ಅವನಿಂದ ಒದಗುವ ಉಪಕಾರವನ್ನು ಸ್ಥ ರಿಸಿಯೂ ಅವನಲ್ಲಿ ನಮ್ಮ ಭಕ್ತಿ ಯು ಉಕ್ಕೇರುವುದು. ಭಕ್ತರಲ್ಲಿ ಅನೇಕ ಪ್ರಕಾರಗಳಿವೆ. ತಮ್ಮ ದುಃಖಸಂಕಷ್ಟಗಳ ನಿವಾರಣೆಗಾಗಿ ಪರಮಾತ್ಮನಲ್ಲಿ ಮೊರೆಇಡುವ ಅರ್ತಭಕ್ತರು ಕೆಲವರು. ಸಂಪತ್ತು ವೈಭವಗಳಿಗಾಗಿ ಅವನನ್ನು ಭಜಿಸುವ ಅರ್ಥಾರ್ಥಿಗಳು ಕೆಲವರು. ಲೌಕಿಕ ಫಲಗಳ ಆಶೆಯಿಂದನಾನಾ ವಿಧ ಅವ್ಯವಹಾರಗಳನ್ನು ಮಾಡುವುದಕ್ಕಿಂತ, ನಾನಾ ವ್ಯಕ್ತಿಗಳನ್ನು ಬೇಡುತ್ತ ದೀನಜೀವನ ನಡೆಸುವುದಕ್ಕಿಂತ, ಲೌಕಿಕ ಫಲಗಳನ್ನು ಪೂಸೈಸಕೊಳ್ಳವುದಕ್ಕಾಗಿ ಭಗವಂತನನ್ನೇ ಜೇಡುವವರು ಸಕಾಮರಾದರೂಶ್ರೇಷ್ಠ ರೂ ಉದಾರಪುರುಪರೂ ಆಗಿರುವರು. ಲೌಕಿಕಪ್ರಯೋಜನವನ್ನು ಬಯಸದೆ ಭಗವಂತನ ಜ್ಞಾನ, ಸಾಕ್ಷಾತ್ಯಾರಗಳಿಗಾಗಿಯೇ ಅವನನ್ನು ಆರಾಧಿಸುವ ಜಿಜ್ಞಾಸುಗಳು ಉತ್ತಮ ಶ್ರೇಣಿಯ ಭಕ್ತರು. ಇವರೆಲ್ಲರಿಗಿಂತಲೂ ಮಿಗಿಲಾದವನು ಭಗವತ್‌ ಸಾಕ್ಷಾತ್ಯಾರಪಡೆದ ಭಕ್ತನು. ಭಗವಂತನ ದಿವ್ಯ ಸುಂದರಮೂರ್ತಿಯನ್ನು ಸಾಕ್ಚಾತ್ಮಾಗಿ ನೋಡಿ : ಉತ್ಕಟವಾದ ವ್ರೇಮಭಾವವನ್ನು ಹೊಂದಿದವನೇ ಪರಿಪೂರ್ಣ ಭಕ್ಷನೆನಿಸುತ್ತಾನೆ. ಒಂದು ವಸ್ತುವನ್ನು ಕೇಳಿ ತಿಳಿದಾಗ ಅಲ್ಲಿ ಉಂಟಾಗುವ ಪ್ರೀತಿಗೂ ಪ್ರತ್ಯಕ್ಷವಾಗಿ ಅದನ್ನು ನೋಡಿದಾಗ ಮೂಡುವ ಪ್ರೀತಿಗೂ ಬಹಳ ಅಂತರವಿದೆ. ಸಕಾಮ ಹಾಗೂ ಜಿಜ್ಞಾಸುಗಳಿಗೆ ಭಗವದ್ದರ್ಶನವಾಗಿರುವುದಿಲ್ಲ. ಶಾಸ್ತ್ರಗಳಿಂದಹಾಗೂ ಗುರುಗಳ ಉವದೇಶದಿಂದಲೇ ಭಗವಂತನ ಸಾಮಾನ್ಯ ಜ್ಞಾನವನ್ನು ಪಡೆದು ಅವರು ಮಾಡುವ ಭಕ್ತಿಯು ಸಾಧಾರಣವೇ ಇರುತ್ತದೆ. ಅವರೋಕ್ಷ ಜ್ಞಾನಿಯು ಸ್ವತಃ ಪರಮಾತ್ಮನನ್ನು ನೋಡುತ್ತಿರುವುದರಿಂದ ಭಕ್ತಿಯ ವರಾಕಾಷ್ಠೆಯನ್ನು ಅನುಭವಿಸಬಲ್ಲನು. ಪ್ರಿಯೋಹಿ ಜ್ಞಾ; ನಿನೋತತ್ಯರ್ಥ ಮಹಂಸ ಚಮಮಪ್ರಿಯಃ। ಎಂದು ಜ್ಞಾನಿಭಕ್ತನಿಗೆ ಭಗವಂತನೂ ಭಗವಂತನಿಗೆ ಜ್ಞಾನಿಯೂ ಪರಸ್ಪರವಾಗಿ ವರಮಪ್ರಿಯರೆನಿಸಿಕೊಳ್ಳುವರು. ಈ ವರಮಭಕ್ತಿಯಿಂದಲೇ ಜ್ಞಾನಿಯು ಪರಮಾತ್ಮನ ಅತ್ಯಂತ ಅನುಗ್ರಹಕ್ಕೆ ಪಾತ್ರನಾಗುವನು.
Bannanje Govindacharya (1936–2020)Bhagavad Gita Pravachana
ತೇಷಾಮ್‌ ಜ್ಞಾನೀ ನಿತ್ಯಯುಕ್ತಃ ಏಕಭಕ್ತೆಃ ವಿಶಿಷ್ಯತೇ | ಪ್ರಿಯಃ ಹಿ ಜ್ಞಾನಿನಃ ಅತ್ಯರ್ಥಮ್‌ ಅಹಮ್‌ ಸಃ ಚ ಮಮ ಪ್ರಿಯಃ -ಅವರಲ್ಲಿ ತಿಳಿದವನು ಮಿಗಿಲಾದವನು ; ನನ್ನಲ್ಲೇ ಭಕ್ತಿಯನ್ನಿಟ್ಟು, ನನ್ನನ್ನೇ ಸದಾ ನೆನೆಯುವವನು. ತಿಳಿದವನಿಗೆ ನಾನೆಂದರೆ ತುಂಬಾ ಇಷ್ಟ, ಅವನೆಂದರೆ ನನಗೂ ತುಂಬಾ ಇಷ್ಟ. ಮೇಲೆ ಹೇಳಿದ ನಾಲ್ಕು ರೀತಿಯ ಭಕ್ತರಲ್ಲಿ ಜ್ಞಾನಿ ಎಲ್ಲರಿಗಿಂತ ಶ್ರೇಷ್ಠ. ಆತ ಜ್ಞಾನಪೂರ್ವಕವಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ಭಗವಂತನನ್ನು ತಿಳಿದು ಸಹಜವಾಗಿ ಪ್ರೀತಿಸುತ್ತಾನೆ. ಹಿಂದಿನ ಅಧ್ಯಾಯಗಳಲ್ಲಿ ನೋಡಿದಂತೆ ನಾವು ಏನನ್ನು ಮಾಡುತ್ತೇವೋ ಅದನ್ನೇ ಪಡೆಯುತ್ತೇವೆ. ಭಗವಂತನನ್ನು ಹೇಗೆ ಕಾಣುತ್ತೇವೋ ಹಾಗೇ ಭಗವಂತ ನಮ್ಮನ್ನು ಕಾಣುತ್ತಾನೆ. ಈ ಕಾರಣದಿಂದ ಜ್ಞಾನಪೂರ್ವಕವಾದ, ಫಲಾಪೇಕ್ಷೆ ಇಲ್ಲದ, ಏಕಭಕ್ತಿಯುಳ್ಳ ಜ್ಞಾನಿ ಭಗವಂತನಿಗೆ ಬಹಳ ಹತ್ತಿರದಲ್ಲಿರುತ್ತಾನೆ.
Bibek Debroy (1955–2024)The Bhagavad Gita
(17) ‘Of these, those who know, always united and worshipping only one,23 are the best. I am extremely beloved by one who knows. And he is also my beloved.’