9.22

अनन्याश्चिन्तयन्तो मां ये जनाः पर्युपासते ।
तेषां नित्याभियुक्तानां योगक्षेमं वहाम्यहम् ॥
ananyāścintayanto māṃ ye janāḥ paryupāsate |
teṣāṃ nityābhiyuktānāṃ yogakṣemaṃ vahāmyaham ||
Sri Madhvacharya (1238–1317)Bhagavad Gita Tatparya Nirnaya
‘सम्यग्गुणगणज्ञानादुपासा पर्युपासना’ इति च॥22॥
Swami Sivananda (1887–1963)Bhagavad Gita
22. To those men who worship Me alone, thinking of no other, of those ever united, I secure what is not already possessed and preserve what they already possess.
Sri Vishwesha Tirtharu (1931–2019)Gitasaroddhara
9.22–9.31 · ಯೋಗಕ್ಷೇಮಂ ವಹಾಮ್ಯಹಮ್
ಯೋಗಕೇಮಂ ವಹಾಮಹಂ ವೈ ೧೧2೧25. ಭೆ ತನ್ನ ಭಕ್ತ ರ ಸಂರಕ್ಷ ಣೆಯ ಪೂರ್ಣ ಭಾರವನ್ನು ಭಗವಂತನು ಹೊತ್ತಿ ರುಷನು, ತನ್ನನ್ನೇ ತ್ತ ದೃಢನಿಷ್ಠೆಯಿಂದ ಉಪಾಸಿಸುವ ನಿತ್ಯಾಭಿ ಯುಕ್ತರಾದ ಭಕ್ತರ ಯೋಗಕ್ಷೇಮವನ್ನು ತಾನು ನಿರ್ವಹಿಸುವೆನೆಂದು ಶ್ರೀಕೃಷ್ಣನು ಗೀತೆಯಲ್ಲಿ ಅಭಿವಚನವನ್ನು ನೀಡಿರುವನು. ನಮ್ಮಲ್ಲಿ ಆತ್ಮವಿಶ್ವಾಸ ಹಾಗೂ ಹೃದಯ ಬಲವನ್ನು ಕುದುರಿಸುವ ಜಗದೀಶ್ವರನ ಆಶ್ವಾಸನದ ದಿವ್ಯ ಸಂಜೀವಿನಿಯು ಮ ದ ದೊರಕಿರುವಾಗ ಜನತೆಯು ಜೀವನದ ಹೋರಾಟದಲ್ಲಿ ಕಂಗೆಡುವುದೇಕೆ? ಭಗವದ್ಭಕ್ತಿಯ ಭದ್ರವಾದತಳಹದಿಯ ಮೇಲೆ ಜೀವನದ ಉತ್ತು ೦ಗ ಸೌಧದ ನಿರ್ಮಾಣಕಾರ್ಯದಲ್ಲಿ ನಾವು ದೃಢ ನಿರ್ಧಾರದಿಂದ ತೊಡಗಬಹುದು. ತನ್ನನ್ನು ಮೊರಹೊಕ್ಕು ವ್ರಾರ್ಥಿಸುತ್ತಿ ರುವ ಭಕ್ತಃ ವರ್ಗವನ್ನು ರಕ್ಷಿಸುವುದು ತನ್ನ ವ್ರತವೆಂದು ರಾಮಾವತಾರದಲ್ಲಿ ಭಗವಂತನು ಹೇಳಿದ್ದಾನೆ. ಸಕೃದೇವ ಪ್ರಹನ್ನೋ ಯಃ ತವಾಸ್ಮೀತಿ ಚೆ ಯಾಚತೇ | ಅಭಯಂ ಸರ್ವಭೂತೇಚ್ಛಃ ದದಾಮ್ಯೇತದ್‌ ವ್ರತಂ ಮಮ ॥ ಇದು ರಾಮಾವತಾರದಲ್ಲಿ ಶರಣಾಗತ ಭಕ್ತನಿಗೆ ಪರಮಾತ್ಮನೇ ನೀಡಿದ ಅಭಯವಾಣಿಯಾಗಿದ್ದರೆ, ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ ತೇಷಾಂ ನಿತ್ಯಾಭಿಯುಕ್ತಾ ನಾಂ ಯೋಗಕ್ಷ್ನ ಮಂ ವಹಾಮ್ಯಹಂ 1 ಇದು ಕೃಷ್ಣಾ ವತಾರದಲ್ಲಿ ಭಗವಂತನು ನೀಡಿದ ಭರವಸೆಯ ಅಮೃತವಾಣಿ ಆಗಿದೆ. ಕೌಂತೇಯ ಪ್ರತಿಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ । “ಅರ್ಜುನಃ ನನ್ನ ಭಕ್ತನಿಗೆ ಎಂದೆಂದಿಗೂನಾಶವಿಲ್ಲವೆಂಬುದನ್ನು ದೃಢವಾಗಿ ತಿಳಿದುಕೋ' ಎಂದು ಭಕ್ತಿಯ ಮಾರ್ಗದಲ್ಲಿ ಮುನ್ನಡೆಯುವವನಿಗೆ ಯಾವ ಹಾನಿಯೂ ಇಲ್ಲವೆಂದು ಅಭಿನಿವೇಶದಿಂದ ಭಗವಂತನು ಸಾರಿದ್ದಾನೆ. ಇಂತಹ ಸುಸ್ಪಷ್ಟ ಘೋಷಣೆಗಳಿರುವಾಗ ಜೀವಬ್ರಹ್ಮ್ಮೈಕ್ಯದಂತಹ ಅಪಕ್ವ ಹಾಗೂ ಅಸಂಬದ್ಧ ವಿಚಾರಗಳನ್ನು ತಲೆಯಲ್ಲಿ ತುಂಬಿಕೊಂಡು ಭಕ್ತಿವಿರೋಧಿ ಮಾರ್ಗಗಳನ್ನು ಬೋಧಿಸಿ ಜನರ ಮನಸ್ಸಿನಲ್ಲಿ ವೃಥಾ ಗೊಂದಲವೆಬ್ಬಿಸುವುದನ್ನು ಕಂಡು ನಮ್ಮ ಮನಸ್ಸಿಗೆ ಬಹಳ ಸಂತಾಪವಾಗುತ್ತಿದೆ. ಭಗವಂತನೇ ಭಕ್ತಿಮಾರ್ಗವನ್ನು ಶ್ರೇಷ್ಠವೂ ಪವಿತ್ರವೂ ಎನಿಸಿದ ನಿರಾತಂಕವಾದ ರಾಜಪಥ ವೆಂದು ಘೋಷಿಸಿರುವಾಗ ಆ ಮಾರ್ಗದಲ್ಲಿ ನಡೆಯಲು ಸಂಕೋಚ, ಸಂದೇಹಗಳೇಕೆ? ಇದು ಅಜ್ಞಾನಿಗಳಿಗೆ ಮಾತ್ರ ಮೀಸಲಾದ ದಾರಿಯೆಂದು ಅದನ್ನು ಏಕೆ ಹೀಗಳೆಯುತ್ತಾರೆಂಬುದೇ ನಮಗೆ ಅರ್ಥವಾಗುತ್ತಿಲ್ಲ. ಜನರು ಇಂತಹ ಅಸಂಬದ್ಧ ವಿಚಾರ ಗೊಂದಲಗಳಲ್ಲಿ ವೃಥಾ ಕಾಲಹರಣ ಮಾಡದೆ ನಿಸಂಕೋಚಭಾವದಿಂದ ಭಕ್ತಿಯೋಗವನ್ನಾಶ್ರಯಿಸುವುದೇ ವಿಹಿತವಾಗಿದೆ. ಕೌಂತೇಯ ಪ್ರತಿಜಾನೀಹಿ ನಮೇ ಭಕ್ತಃ ಪ್ರಣಶ್ಯತಿ । ಈ ವಾಕ್ಯದಲ್ಲಿ ಶ್ರೀಕೃಷ್ಣನು ತನ್ನ ಭಕ್ತರಿಗೆ ಎಂದಿಗೂ ನಾಶವಿಲ್ಲವೆಂದು ಅರ್ಜುನನಿಂದ ಪ್ರತಿಜ್ಞೆ ಮಾಡಿಸುತ್ತಾನೆ. ಅದೇಕೆ? ತಾನು ಪ್ರತಿಜ್ಞೆ ಮಾಡದೆ ಅರ್ಜುನನಿಂದ ಭಗವಂತನು ಏಕೆ ಪ್ರತಿಜ್ಞೆ ಮಾಡಿಸುತ್ತಾನೆ? ತನ್ನ ಪ್ರತಿಜ್ಞೆಯಾದರೂ ಕೆಲವೊಮ್ಮೆ ಹುಸಿಯಾದೀತು. ತನ್ನ ಭಕ್ತರ ಪ್ರತಿಜ್ಞೆಯು ಎಂದಿಗೂ ಹುಸಿಯಾಗಲಾರದೆಂದು ಶ್ರೀಕೃಷ್ಣನ ಆಶಯವಾಗಿದೆ. ಸ್ವನಿಯಮಮಪಹಾಯ ಮತ್‌ ಪ್ರತಿಜ್ಞಾಂ ಯತಮಧಿಕರ್ತುಮವಪ್ಪುತೋ ರಥಸ್ಥಃ ಧೃತರಥಚರಣೋರಭ್ಯಯಾಚ್ಛಲದ್ದು: ಹರಿರಿವ ಹಂತುಮಿಮಂ ಗತೋತ್ತರೀಯಃ ॥ ಎಂದು ಭಾಗವತದಲ್ಲಿ ಭೀಷ್ಮರು ವರ್ಣಿಸುತ್ತಾರೆ. ""ತನ್ನ ಭಕ್ತರ ಪ್ರತಿಜ್ಞೆಯು ಹುಸಿಯಾಗಬಾರದೆಂದು ಚಕ್ರವನ್ನು ಧರಿಸಿ ತನ್ನ ಪ್ರತಿಜ್ಞೆಯನ್ನೇ ಭಕ್ತರಿಗಾಗಿ ಭಂಗಗೊಳಿಸಲು ಅಣಿಯಾದ ಶ್ರೀಕೃಷ್ಣನ ಭಕ್ತಾನುಗ್ರಹಕಾರಕವಾದ ಆ ಪ್ರಸನ್ನವದನವನ್ನು ನಾನೆಂತು ಮರೆಯಲಿ! ಮರಣಶಯ್ಯೆಯಲ್ಲಿ ದ್ವಭೀಷ್ಮರ ಉದ್ಗಾರವಿದು. ಮಹಾಭಾರತ ಯುದ್ಧದಲ್ಲಿ ತಾನು ಆಯುಧವನ್ನು ಧರಿಸುವುದಿಲ್ಲವೆಂದು ಶ್ರೀಕೃಷ್ಣನು ಪ್ರತಿಜ್ಞೆ ಮಾಡಿದ್ದರೂ ಕೃಷ್ಣನು ಆಯುಧವನ್ನು ಧರಿಸುವಂತೆ ಮಾಡುವೆನೆಂಬ ಭೀಷ್ಮರ ಪ್ರತಿಜ್ಞೆಯನ್ನು ಪರಿಪಾಲಿಸುವುದಕ್ಕಾಗಿ ಅವರ ಶಸ್ತ್ರಾಸ್ತ್ರಗಳಿಂದ ಪೀಡಿತನಾದಂತೆ ನಟಿಸಿ, ತನ್ನ ಪ್ರತಿಜ್ಞೆಯನ್ನು ಮುರಿದು ಶಸ್ತ್ರಧಾರಣೆಯನ್ನು ಮಾಡುವನು. ತನ್ನ ಮಾತಿಗಿಂತಲೂ ತನ್ನ ಭಕ್ತರ ಮಾತಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿದ ಶ್ರೀಕೃಷ್ಣನು ನಮ್ಮಲ್ಲಿ ವಿಶ್ವಾಸವನ್ನು ಮೂಡಿಸುವುದಕ್ಕಾಗಿ ತನ್ನ ಪರಮಭಕ್ತ ಅರ್ಜುನನಿಂದಲೇ ""ನ ಮೇ ಭಕ್ತಃ ಪ್ರಣಶ್ಯತಿ' ಎಂದು ಪ್ರತಿಜ್ಞೆ ಮಾಡಿಸುತ್ತಾನೆಂದು ಈ ಶ್ಲೋಕವನ್ನು ಸ್ವಾರಸ್ಯಕರ ರೀತಿಯಲ್ಲಿ ಕೆಲವರು ವ್ಯಾಖ್ಯಾನ ಮಾಡಿರುವರು.
Bannanje Govindacharya (1936–2020)Bhagavad Gita Pravachana
ಅನನ್ಯಾಃ ಚಿಂತಯಂತಃ ಮಾಮ್‌ ಯೇ ಜನಾಃ ಪರ್ಯುಪಾಸತೇ | ತೇಷಾಮ್‌ ನಿತ್ಯ ಅಭಿಯುಕ್ತಾನಾಮ್‌ ಯೋಗ ಕ್ಷೇಮಮ್‌ ವಹಾಮಿ ಅಹಮ್‌- ಬೇರೆಲ್ಲಾ ತೊರೆದು ನನ್ನನ್ನೇ ನೆನೆಯುತ್ತಾ ಪರಿಪರಿಯಿಂದ ಪೂಜಿಸುವ ಜನರು ಎಲ್ಲೆಲ್ಲೂ ನನ್ನ ಸೇವೆಗೆ ಮುಡಿಪಾದವರು. ಅವರ ಯೋಗ- ಕ್ಷೇಮದ ಹೊಣೆ ನನ್ನದು. ಭಾಗವತರು ಯಾವುದನ್ನೂ ಬೇಕು ಎಂದು ಬಯಸುವುದಿಲ್ಲ. ಅವರಿಗೆ ಭಗವಂತನ ಚಿಂತನೆಯೊಂದನ್ನು ಬಿಟ್ಟರೆ ಬೇರೆ ಚಿಂತನೆಯೇ ಇಲ್ಲ. ಇವರು ಅನನ್ಯವಾಗಿ ಭಗವಂತನನ್ನು ಮಾತ್ರ ಬಯಸುತ್ತಾರೆ. ಯಾವುದೋ ಬಯಕೆಗೆ ಕಟ್ಟು ಬಿದ್ದು ಅವರು ಪೂಜೆ ಮಾಡುವುದಿಲ್ಲ. ಇವರು ಭಗವಂತನಲ್ಲದೆ ಇನ್ಯಾವುದೇ ದೇವತೆಯನ್ನು ಪ್ರಧಾನವಾಗಿಟ್ಟುಕೊಂಡು ಆಹುತಿ ಕೊಟ್ಟು ಆರಾಧನೆ ಮಾಡುವುದಿಲ್ಲ. ಎಲ್ಲಾ ದೇವತೆಯ ಒಳಗೂ ಇವರು ಕೇವಲ ಭಗವಂತನನ್ನು ಕಾಣುತ್ತಾರೆ. ಇದು. ಏಕಭಕ್ತಿ; ಪರಮಾತ್ಮನನ್ನು, ಮೋಕ್ಷವನ್ನು ಸೇರಲು ಅನುಸರಿಸಬೇಕಾದ ಮಾರ್ಗ. ನಾವು ಪೂಜೆ ಮಾಡಿಸಿದಾಗ ಸಂಕಲ್ಪ ಮಾಡುತ್ತೇವೆ. ಇಲ್ಲಿ ನಾವು ಎಂದೂ ನಮ್ಮ ಐಹಿಕ ಬಯಕೆಗಳನ್ನು ಭಗವಂತನ ಮುಂದಿಡಬಾರದು. ಕೇವಲ ಜ್ಞಾನ, ಭಕ್ತಿ, ಮೋಕ್ಷ- ಇದು ನಮ್ಮ ಸಂಕಲ್ಪವಾಗಿರಬೇಕು. ನಶ್ಚರವಾದ ಬಯಕೆಗಳನ್ನು ಮುಂದಿಟ್ಟು ಪೂಜೆ ಮಾಡಿಸಿದಾಗ ನಾವು ಮಹತ್ತಾದ ಫಲವನ್ನು ಕಳೆದುಕೊಳ್ಳುತ್ತೇವೆ. ನಮಗೆ ಏನು ಬೇಕು ಏನು ಬೇಡ ಎನ್ನುವುದು ಆ ಭಗವಂತನಿಗೆ ನಮಗಿಂತ ಚೆನ್ನಾಗಿ ಗೊತ್ತು ಮತ್ತು ಆತ ಎಂದೂ ನಮ್ಮನ್ನು ಬಿಟ್ಟು ಹಾಕುವುದಿಲ್ಲ. ಪೂಜೆ ಕೇವಲ ಭಗವಂತನ ಪ್ರೀತ್ಯರ್ಥವಾಗಿ ಮಾಡಿ ಆತನಲ್ಲಿ ಅನನ್ಯ ಭಕ್ತಿ ನೆಟ್ಟಾಗ ಭಗವಂತ ನಮ್ಮನ್ನು ಪ್ರೀತಿಸುತ್ತಾನೆ. ಕೃಷ್ಣ ಹೇಳುತ್ತಾನೆ. “ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್‌” -ಇಂತಹ ಭಕ್ತರ ಯೋಗಕ್ಷೇಮದ ಹೊಣೆ ನನ್ನದು ಎಂದು. ಇದಕ್ಕಿಂತ ಹೆಚ್ಚಿನ ಭರವಸೆ ಏನು ಬೇಕು? ನಾವು ಗಾಢವಾಗಿ “ಭಗವಂತ ನಮ್ಮನ್ನು ರಕ್ಷಿಸಿಯೇ ರಕ್ಷಿಸುತ್ತಾನೆ” ಎಂದು ಗಟ್ಟಿಯಾಗಿ ನಂಬಿದರೆ ಆತ ರಕ್ಷಿಸಿಯೇ ರಕ್ಷಿಸುತ್ತಾನೆ. ಭಗವಂತನ ಮೇಲಿನ ನಮ್ಮ ನಂಬಿಕೆಯಲ್ಲಿ ನಾವು ಎಂದೂ ವಿಚಲಿತರಾಗಬಾರದು. ಅದು ದೃಢವಾಗಿರಬೇಕು. ಗುರಿ ಕೇವಲ ಭಗವಂತನನ್ನು ಸೇರುವತ್ತ ಇರಬೇಕು. ಭಗವಂತ ಏನು ಕೊಟ್ಟನೋ ಅದೇ ಮಹಾ ಪ್ರಸಾದವೆಂದು ಸ್ವೀಕರಿಸಿ ಸಂಪೂರ್ಣ ಆತನಲ್ಲಿ ಶರಣಾಗಬೇಕು. ಇಂತಹ ಸ್ಥಿತಿಯಲ್ಲಿ ನಮಗೆ ಎಂದೂ ದುಃಖವಾಗುವುದಿಲ್ಲ. ಬದುಕು ಆನಂದಮಯವಾಗಿರುತ್ತದೆ. ಜೀವನದಲ್ಲಿ ಏನೇ ಘಟನೆ ನಡೆದರೂ “ಭಗವಂತನ ಚಿತ್ತದಂತೆ ಆಯಿತು” ಎಂದು ತಿಳಿದು ಅದನ್ನು ಸಂತೋಷದಿಂದ ಸ್ವೀಕರಿಸುವ ಮನೋವೃತ್ತಿ ನಮ್ಮದಾಗಬೇಕು. ಇದು ಮೋಕ್ಷದ ಹೆಬ್ಬಾಗಿಲು.
Bibek Debroy (1955–2024)The Bhagavad Gita
(22) ‘Those who worship me, minds focused on me alone and always immersed in me, I preserve for them what has been attained and what is yet to be attained.’25