9.25

यान्ति देवव्रता देवान्पितॄन्यान्ति पितृव्रताः ।
भूतानि यान्ति भूतेज्या यान्ति मद्याजिनोऽपि माम् ॥
yānti devavratā devānpitṝnyānti pitṛvratāḥ |
bhūtāni yānti bhūtejyā yānti madyājino'pi mām ||
Swami Sivananda (1887–1963)Bhagavad Gita
25. The worshippers of the gods go to them; to the manes go the ancestor-worshippers; to the Deities who preside over the elements go their worshippers; My devotees come to Me.
Sri Vishwesha Tirtharu (1931–2019)Gitasaroddhara
9.22–9.31 · ಯೋಗಕ್ಷೇಮಂ ವಹಾಮ್ಯಹಮ್
ಯೋಗಕೇಮಂ ವಹಾಮಹಂ ವೈ ೧೧2೧25. ಭೆ ತನ್ನ ಭಕ್ತ ರ ಸಂರಕ್ಷ ಣೆಯ ಪೂರ್ಣ ಭಾರವನ್ನು ಭಗವಂತನು ಹೊತ್ತಿ ರುಷನು, ತನ್ನನ್ನೇ ತ್ತ ದೃಢನಿಷ್ಠೆಯಿಂದ ಉಪಾಸಿಸುವ ನಿತ್ಯಾಭಿ ಯುಕ್ತರಾದ ಭಕ್ತರ ಯೋಗಕ್ಷೇಮವನ್ನು ತಾನು ನಿರ್ವಹಿಸುವೆನೆಂದು ಶ್ರೀಕೃಷ್ಣನು ಗೀತೆಯಲ್ಲಿ ಅಭಿವಚನವನ್ನು ನೀಡಿರುವನು. ನಮ್ಮಲ್ಲಿ ಆತ್ಮವಿಶ್ವಾಸ ಹಾಗೂ ಹೃದಯ ಬಲವನ್ನು ಕುದುರಿಸುವ ಜಗದೀಶ್ವರನ ಆಶ್ವಾಸನದ ದಿವ್ಯ ಸಂಜೀವಿನಿಯು ಮ ದ ದೊರಕಿರುವಾಗ ಜನತೆಯು ಜೀವನದ ಹೋರಾಟದಲ್ಲಿ ಕಂಗೆಡುವುದೇಕೆ? ಭಗವದ್ಭಕ್ತಿಯ ಭದ್ರವಾದತಳಹದಿಯ ಮೇಲೆ ಜೀವನದ ಉತ್ತು ೦ಗ ಸೌಧದ ನಿರ್ಮಾಣಕಾರ್ಯದಲ್ಲಿ ನಾವು ದೃಢ ನಿರ್ಧಾರದಿಂದ ತೊಡಗಬಹುದು. ತನ್ನನ್ನು ಮೊರಹೊಕ್ಕು ವ್ರಾರ್ಥಿಸುತ್ತಿ ರುವ ಭಕ್ತಃ ವರ್ಗವನ್ನು ರಕ್ಷಿಸುವುದು ತನ್ನ ವ್ರತವೆಂದು ರಾಮಾವತಾರದಲ್ಲಿ ಭಗವಂತನು ಹೇಳಿದ್ದಾನೆ. ಸಕೃದೇವ ಪ್ರಹನ್ನೋ ಯಃ ತವಾಸ್ಮೀತಿ ಚೆ ಯಾಚತೇ | ಅಭಯಂ ಸರ್ವಭೂತೇಚ್ಛಃ ದದಾಮ್ಯೇತದ್‌ ವ್ರತಂ ಮಮ ॥ ಇದು ರಾಮಾವತಾರದಲ್ಲಿ ಶರಣಾಗತ ಭಕ್ತನಿಗೆ ಪರಮಾತ್ಮನೇ ನೀಡಿದ ಅಭಯವಾಣಿಯಾಗಿದ್ದರೆ, ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ ತೇಷಾಂ ನಿತ್ಯಾಭಿಯುಕ್ತಾ ನಾಂ ಯೋಗಕ್ಷ್ನ ಮಂ ವಹಾಮ್ಯಹಂ 1 ಇದು ಕೃಷ್ಣಾ ವತಾರದಲ್ಲಿ ಭಗವಂತನು ನೀಡಿದ ಭರವಸೆಯ ಅಮೃತವಾಣಿ ಆಗಿದೆ. ಕೌಂತೇಯ ಪ್ರತಿಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ । “ಅರ್ಜುನಃ ನನ್ನ ಭಕ್ತನಿಗೆ ಎಂದೆಂದಿಗೂನಾಶವಿಲ್ಲವೆಂಬುದನ್ನು ದೃಢವಾಗಿ ತಿಳಿದುಕೋ' ಎಂದು ಭಕ್ತಿಯ ಮಾರ್ಗದಲ್ಲಿ ಮುನ್ನಡೆಯುವವನಿಗೆ ಯಾವ ಹಾನಿಯೂ ಇಲ್ಲವೆಂದು ಅಭಿನಿವೇಶದಿಂದ ಭಗವಂತನು ಸಾರಿದ್ದಾನೆ. ಇಂತಹ ಸುಸ್ಪಷ್ಟ ಘೋಷಣೆಗಳಿರುವಾಗ ಜೀವಬ್ರಹ್ಮ್ಮೈಕ್ಯದಂತಹ ಅಪಕ್ವ ಹಾಗೂ ಅಸಂಬದ್ಧ ವಿಚಾರಗಳನ್ನು ತಲೆಯಲ್ಲಿ ತುಂಬಿಕೊಂಡು ಭಕ್ತಿವಿರೋಧಿ ಮಾರ್ಗಗಳನ್ನು ಬೋಧಿಸಿ ಜನರ ಮನಸ್ಸಿನಲ್ಲಿ ವೃಥಾ ಗೊಂದಲವೆಬ್ಬಿಸುವುದನ್ನು ಕಂಡು ನಮ್ಮ ಮನಸ್ಸಿಗೆ ಬಹಳ ಸಂತಾಪವಾಗುತ್ತಿದೆ. ಭಗವಂತನೇ ಭಕ್ತಿಮಾರ್ಗವನ್ನು ಶ್ರೇಷ್ಠವೂ ಪವಿತ್ರವೂ ಎನಿಸಿದ ನಿರಾತಂಕವಾದ ರಾಜಪಥ ವೆಂದು ಘೋಷಿಸಿರುವಾಗ ಆ ಮಾರ್ಗದಲ್ಲಿ ನಡೆಯಲು ಸಂಕೋಚ, ಸಂದೇಹಗಳೇಕೆ? ಇದು ಅಜ್ಞಾನಿಗಳಿಗೆ ಮಾತ್ರ ಮೀಸಲಾದ ದಾರಿಯೆಂದು ಅದನ್ನು ಏಕೆ ಹೀಗಳೆಯುತ್ತಾರೆಂಬುದೇ ನಮಗೆ ಅರ್ಥವಾಗುತ್ತಿಲ್ಲ. ಜನರು ಇಂತಹ ಅಸಂಬದ್ಧ ವಿಚಾರ ಗೊಂದಲಗಳಲ್ಲಿ ವೃಥಾ ಕಾಲಹರಣ ಮಾಡದೆ ನಿಸಂಕೋಚಭಾವದಿಂದ ಭಕ್ತಿಯೋಗವನ್ನಾಶ್ರಯಿಸುವುದೇ ವಿಹಿತವಾಗಿದೆ. ಕೌಂತೇಯ ಪ್ರತಿಜಾನೀಹಿ ನಮೇ ಭಕ್ತಃ ಪ್ರಣಶ್ಯತಿ । ಈ ವಾಕ್ಯದಲ್ಲಿ ಶ್ರೀಕೃಷ್ಣನು ತನ್ನ ಭಕ್ತರಿಗೆ ಎಂದಿಗೂ ನಾಶವಿಲ್ಲವೆಂದು ಅರ್ಜುನನಿಂದ ಪ್ರತಿಜ್ಞೆ ಮಾಡಿಸುತ್ತಾನೆ. ಅದೇಕೆ? ತಾನು ಪ್ರತಿಜ್ಞೆ ಮಾಡದೆ ಅರ್ಜುನನಿಂದ ಭಗವಂತನು ಏಕೆ ಪ್ರತಿಜ್ಞೆ ಮಾಡಿಸುತ್ತಾನೆ? ತನ್ನ ಪ್ರತಿಜ್ಞೆಯಾದರೂ ಕೆಲವೊಮ್ಮೆ ಹುಸಿಯಾದೀತು. ತನ್ನ ಭಕ್ತರ ಪ್ರತಿಜ್ಞೆಯು ಎಂದಿಗೂ ಹುಸಿಯಾಗಲಾರದೆಂದು ಶ್ರೀಕೃಷ್ಣನ ಆಶಯವಾಗಿದೆ. ಸ್ವನಿಯಮಮಪಹಾಯ ಮತ್‌ ಪ್ರತಿಜ್ಞಾಂ ಯತಮಧಿಕರ್ತುಮವಪ್ಪುತೋ ರಥಸ್ಥಃ ಧೃತರಥಚರಣೋರಭ್ಯಯಾಚ್ಛಲದ್ದು: ಹರಿರಿವ ಹಂತುಮಿಮಂ ಗತೋತ್ತರೀಯಃ ॥ ಎಂದು ಭಾಗವತದಲ್ಲಿ ಭೀಷ್ಮರು ವರ್ಣಿಸುತ್ತಾರೆ. ""ತನ್ನ ಭಕ್ತರ ಪ್ರತಿಜ್ಞೆಯು ಹುಸಿಯಾಗಬಾರದೆಂದು ಚಕ್ರವನ್ನು ಧರಿಸಿ ತನ್ನ ಪ್ರತಿಜ್ಞೆಯನ್ನೇ ಭಕ್ತರಿಗಾಗಿ ಭಂಗಗೊಳಿಸಲು ಅಣಿಯಾದ ಶ್ರೀಕೃಷ್ಣನ ಭಕ್ತಾನುಗ್ರಹಕಾರಕವಾದ ಆ ಪ್ರಸನ್ನವದನವನ್ನು ನಾನೆಂತು ಮರೆಯಲಿ! ಮರಣಶಯ್ಯೆಯಲ್ಲಿ ದ್ವಭೀಷ್ಮರ ಉದ್ಗಾರವಿದು. ಮಹಾಭಾರತ ಯುದ್ಧದಲ್ಲಿ ತಾನು ಆಯುಧವನ್ನು ಧರಿಸುವುದಿಲ್ಲವೆಂದು ಶ್ರೀಕೃಷ್ಣನು ಪ್ರತಿಜ್ಞೆ ಮಾಡಿದ್ದರೂ ಕೃಷ್ಣನು ಆಯುಧವನ್ನು ಧರಿಸುವಂತೆ ಮಾಡುವೆನೆಂಬ ಭೀಷ್ಮರ ಪ್ರತಿಜ್ಞೆಯನ್ನು ಪರಿಪಾಲಿಸುವುದಕ್ಕಾಗಿ ಅವರ ಶಸ್ತ್ರಾಸ್ತ್ರಗಳಿಂದ ಪೀಡಿತನಾದಂತೆ ನಟಿಸಿ, ತನ್ನ ಪ್ರತಿಜ್ಞೆಯನ್ನು ಮುರಿದು ಶಸ್ತ್ರಧಾರಣೆಯನ್ನು ಮಾಡುವನು. ತನ್ನ ಮಾತಿಗಿಂತಲೂ ತನ್ನ ಭಕ್ತರ ಮಾತಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿದ ಶ್ರೀಕೃಷ್ಣನು ನಮ್ಮಲ್ಲಿ ವಿಶ್ವಾಸವನ್ನು ಮೂಡಿಸುವುದಕ್ಕಾಗಿ ತನ್ನ ಪರಮಭಕ್ತ ಅರ್ಜುನನಿಂದಲೇ ""ನ ಮೇ ಭಕ್ತಃ ಪ್ರಣಶ್ಯತಿ' ಎಂದು ಪ್ರತಿಜ್ಞೆ ಮಾಡಿಸುತ್ತಾನೆಂದು ಈ ಶ್ಲೋಕವನ್ನು ಸ್ವಾರಸ್ಯಕರ ರೀತಿಯಲ್ಲಿ ಕೆಲವರು ವ್ಯಾಖ್ಯಾನ ಮಾಡಿರುವರು.
Bannanje Govindacharya (1936–2020)Bhagavad Gita Pravachana
ಯಾಂತಿ ದೇವವ್ರತಾಃ ದೇವಾನ್‌ ಪಿತ್ಯನ್‌ ಯಾಂತಿ ಪಿತೃವ್ರತಾಃ | ಭೂತಾನಿ ಯಾಂತಿ ಭೂತೇಜ್ಯಾಃ ಯಾಂತಿ ಮತ್‌ ಯಾಜಿನಃ ಅಪಿ ಮಾಮ್‌-ದೇವತೆಗಳ ನೇಮ ಹಿಡಿದವರು ದೇವತೆಗಳನ್ನು ಸೇರುತ್ತಾರೆ. ಪಿತೃಗಳ ನೇಮ ಹಿಡಿದವರು ಪಿತೃಗಳನ್ನು ಸೇರುತ್ತಾರೆ. ದೆವ್ವಗಳನ್ನು ಪೂಜಿಸುವವರು ದೆವ್ವಗಳನ್ನು ಸೇರುತ್ತಾರೆ. ನನ್ನನ್ನು ಪೂಜಿಸುವವರು ನನ್ನನ್ನೇ ಸೇರುತ್ತಾರೆ. ಕೃಷ್ಣ ಹೇಳುತ್ತಾನೆ “ನೀವು ಯಾರನ್ನು ಪೂಜಿಸುತ್ತೀರೋ ಅವರನ್ನೇ ಪಡೆಯುತ್ತೀರಿ” ಎಂದು. ದೇವತೆಗಳನ್ನು ಪೂಜಿಸುವವರು ದೇವತೆಗಳನ್ನೂ, ಪಿತೃಗಳನ್ನು ಪೂಜಿಸುವವರು ಪಿತೃಗಳನ್ನೂ, ಭೂತ ಪ್ರೇತವನ್ನು(ದೇವತಾ ಗಣ) ಪೂಜಿಸುವವರು ಭೂತ ಪ್ರೇತಗಳನ್ನೂ ಪಡೆಯುತ್ತಾರೆ. ಆದರೆ ಯಾರು ಏಕಭಕ್ತಿಯಿಂದ ಎಲ್ಲವುದರಲ್ಲೂ ಭಗವಂತನನ್ನು ಕಂಡು ಶ್ರದ್ಧೆಯಿಂದ ಆತನನ್ನು ಪೂಜಿಸುತ್ತಾರೋ- “ಅವರು ನನ್ನನ್ನು ಸೇರುತ್ತಾರೆ”- ಎನ್ನುವ ಭರವಸೆಯನ್ನು ಇಲ್ಲಿ ಕೃಷ್ಣ ಕೊಡುತ್ತಾನೆ. ದೇವತೆಗಳನ್ನು ಪೂಜಿಸಿ ಸ್ವರ್ಗವನ್ನು ಪಡೆಯಬಹುದು, ಆದರೆ ಮರಳಿ ಹುಟ್ಟದ ಮೋಕ್ಷವನ್ನಲ್ಲ. ಯಾವ ಪೂಜೆ ಮಾಡಿದರೂ ಸರಿಯೇ, ಪ್ರತಿಯೊಂದು ಕ್ರಿಯೆಯ ಹಿಂದೆ ಭಗವಂತನ ಅರಿವಿದ್ದು ಅದರಿಂದ ಅವನನ್ನು ಆರಾಧಿಸುವುದೇ ನಿಜವಾದ ಪೂಜೆ. ಅರಿವಿಲ್ಲದ ಪೂಜೆ ಎಂದೂ ನಮ್ಮನ್ನು ಮೋಕ್ಷದತ್ತ ಕೊಂಡೊಯ್ಯುವುದಿಲ್ಲ. ಬ್ರಹ್ಮಾದಿ ಸಮಸ್ತ ದೇವತಾ ಪರಿವಾರ ಸಮೇತನಾಗಿರತಕ್ಕಂತಹ ಭಗವಂತನ ಆರಾಧನೆ ಮಾಡಿದರೆ ಆಗ ಭಗವಂತನನ್ನು ಸೇರುತ್ತಾರೆ. ಇದು ಶಾಸ್ತ್ರದ ವ್ಯವಸ್ಥೆ ಮುಂದಿನ ಶ್ಲೋಕಕ್ಕೆ ಹೋಗುವ ಮುನ್ನ ಇಲ್ಲಿ ನಾವು ಒಂದು ವಿಚಾರವನ್ನು ಸ್ಪಷ್ಟವಾಗಿ ತಿಳಿಯಬೇಕು. ನಾವು ನಮ್ಮ ದೈನಂದಿನ ಜೀವನದಲ್ಲಿ ಗಣಹೋಮ, ನವಗ್ರಹಹೋಮ, ದೈವಾರಾಧನೆ, ಸಂಕಷ್ಟಿ, ಇತ್ಯಾದಿ ರೂಪದಲ್ಲಿ ಉಪಾಸನೆ ಮಾಡುತ್ತೇವೆ. ಇದು ತಪ್ಪೇ? ನಾವು ಗಣಪತಿ ಅಥವಾ ಇನ್ಯಾವುದೋ ಪ್ರತೀಕದಲ್ಲಿ ಭಗವಂತನ ಆರಾಧನೆ ಮಾಡಿದರೆ ನಮಗೆ ಮೋಕ್ಷ ಪ್ರಾಪ್ತಿ ಇಲ್ಲವೇ? ಯಾವುದು ಸರಿ, ಯಾವುದು ತಪ್ಪು? ಯಾವುದು ತ್ರೈವಿಧ್ಯಧರ್ಮ, ಯಾವುದು ಭಾಗವತ ಧರ್ಮ ? ನಮ್ಮಲ್ಲಿ ಇಂದು ಭಾಗವತ ಧರ್ಮ ಕಣ್ಮರೆಯಾಗುತ್ತಿದೆ. ಯಾವುದೇ ಪ್ರತೀಕದ ಅಂತರ್ಯಾಮಿ ಭಗವಂತನ ಪೂಜೆ ತಪ್ಪಲ್ಲ. ಆದರೆ ಅದರ ಹಿಂದಿರುವ ನಮ್ಮ ಸಂಕಲ್ಪ ತಪ್ಪು. ಉದಾಹರಣೆಗೆ ನವಗ್ರಹ ಹೋಮ. ಒಂದು ವೇಳೆ ನಾವು ಯಾವ ಫಲ ಕಾಮನೆಯೂ ಇಲ್ಲದೆ, ಕೇವಲ ಮೋಕ್ಷ ಪ್ರಾಪ್ತಿಗಾಗಿ, ಸಕಲ ದೇವತಾಪರಿವಾರನಾದ, ನವಗ್ರಹ ಅಂತರ್ಗತ ನಾರಾಯಣ ಪ್ರೀತ್ಯರ್ಥ ನವಗ್ರಹ ಹೋಮ ಮಾಡಿದರೆ ಏನೂ ತಪ್ಪಿಲ್ಲ. ಆದರೆ ಅಲ್ಲಿ ನಾವು "ನವಗ್ರಹ ಅಂತರ್ಗತ ನಾರಾಯಣ ಪ್ರಸನ್ನನಾಗಿ ಆ ಮೂಲಕ ನವಗ್ರಹ ದೋಷ ಪರಿಹಾರ ಮಾಡಲಿ' ಎಂದು ಸಂಕಲ್ಪ ಮಾಡಿದಾಗ ಅದು ತ್ರೈವಿಧ್ಯ ಧರ್ಮವಾಗುತ್ತದೆ. ಸಂಕಲ್ಪ ಮಾಡುವಾಗ ಯಾವುದೇ ಕಾಮನೆ ಸೇರಿಸದೆ ಕೇವಲ ಭಗವದ್‌ ಪ್ರೀತ್ಯರ್ಥ ಎಂದು ಯಾವ ಕಾಮ್ಯ ಕರ್ಮ ಮಾಡಿದರೂ ಅದು ಭಾಗವತ ಧರ್ಮ. ಭಗವಂತ ಸುಪ್ರೀತನಾದರೆ ಎಲ್ಲವೂ ಸಿದ್ದಿಸಿದಂತೆ. ಅವನು ಕೊಟ್ಟದ್ದನ್ನು ಸಂತೋಷವಾಗಿ ಭೋಗಿಸು, ಕೊಡದಿದ್ದುದನ್ನು ಬಯಸಬೇಡ. ನಿನಗೆ ಬಂದ ಕಷ್ಟ ನಿವಾರಣೆ ಮಾಡು ಎಂದು ಭಗವಂತನನ್ನು ಪೂಜಿಸಬೇಡ, ಬದಲಿಗೆ ಬಂದದ್ದನ್ನು ಪ್ರಸಾದವಾಗಿ ಸ್ವೀಕರಿಸು ಮತ್ತು ಜ್ಞಾನ ವೈರಾಗ್ಯ ಭಕ್ತಿ-ಮೋಕ್ಷ ಕೊಡು ಎಂದು ನಿರಂತರ ಭಗವಂತನನ್ನು ಪ್ರಾರ್ಥಿಸು. ನಿನ್ನ ರಕ್ಷಣೆಯ ಭಾರ ಆ ಭಗವಂತನದ್ದು. ಅದಕ್ಕಾಗಿ ನೀನು ತಲೆ ಕೆಡಿಸಿಕೊಳ್ಳಬೇಡ. ನಿನ್ನ ಜೀವನದಲ್ಲಿ ಏನು ನಡೆಯುತ್ತಿದೆ ಅದು ಆಕಸ್ಮಿಕವಲ್ಲ. ಅದು ಭಗವಂತನ ಇಚ್ಛೆ, ಅದರ ನಿವಾರಣೆಗಾಗಿ ನೀನು ಭಗವಂತನನ್ನು ಪೂಜಿಸುವುದಲ್ಲ ಬದಲಿಗೆ ಭಗವಂತನನ್ನು ಸೇರಲು ಭಗವಂತನನ್ನು ಪೂಜಿಸುವುದು. ಈ ರೀತಿ ನಾವು ನಮ್ಮ ಸಂಕಲ್ಪದ ಹಿಂದಿನ ಅನುಸಂಧಾನವನ್ನು ಬದಲಿಸಿಕೊಂಡಾಗ ಅದು ಭಾಗವತ ಧರ್ಮವಾಗುತ್ತದೆ. ಒಬ್ಬ ತ್ರೈವಿಧ್ಯ ತನ್ನ ಗುರುವಿಗೆ “ನನ್ನ ಗುರು' ಎಂದು ನಮಸ್ಕಾರ ಮಾಡಿದರೆ ಭಾಗವತ “ಆ ಗುರುಗಳ ಒಳಗೆ ಭಗವಂತ ಕೂತು ನನಗೆ ಪಾಠ ಹೇಳುತ್ತಿದ್ದಾನೆ' ಎಂದು ತಿಳಿದು ನಮಸ್ಕಾರ ಮಾಡುತ್ತಾನೆ. ಭಾಗವತ ತನ್ನೆಲ್ಲಾ ಕ್ರಿಯೆಯಲ್ಲಿ ಭಗವಂತನನ್ನು ಕಾಣುತ್ತಾನೆ. ಆತ ತನ್ನೆಲ್ಲಾ ಕ್ರಿಯಾ ಕರ್ಮದಲ್ಲಿ ಮೋಕ್ಷ ಮತ್ತು ಭಗವಂತನನ್ನು ಬಿಟ್ಟು ಇನ್ನೇನನ್ನೂ ಬಯಸುವುದಿಲ್ಲ. ಆತನ ಪೂಜಾ ಸಂಕಲ್ಪದಲ್ಲಿ ಮೋಕ್ಷದ ಬಯಕೆಯನ್ನು ಬಿಟ್ಟು ಇನ್ಯಾವುದೇ ಬಯಕೆ ಇರುವುದಿಲ್ಲ. ನಾವು ಈ ಎತ್ತರಕ್ಕೇರುವುದು ಅಸಾಧ್ಯವಲ್ಲ. ಇದನ್ನು ಸಾಧ್ಯ ಮಾಡಲು ಪ್ರಯತ್ನ ಬೇಕು ಅಷ್ಟೇ. ನಾವು ಎಷ್ಟುಎಷ್ಟು ಭಗವದ್‌ ಪ್ರೀತ್ಯರ್ಥ ಕರ್ಮ ಮಾಡುತ್ತೇವೋ ಅಷ್ಟುಅಷ್ಟು ಹೆಚ್ಚು ಮೋಕ್ಷಕ್ಕೆ ಹತ್ತಿರವಾಗುತ್ತೇವೆ. ಭಗವಂತನಲ್ಲಿ “ನನಗೆ ಇದನ್ನು ಕೊಡು' ಎಂದಾಗಾಲೀ ಅಥವಾ “ಇದನ್ನು ನಿವಾರಿಸು' ಎಂದಾಗಲಿ ಎಂದೂ ಕೇಳಬೇಡ. ನಿನಗೆ ಏನು ಬೇಕು ಎನ್ನುವುದು ಭಗವಂತನಿಗೆ ಗೊತ್ತಿದೆ, ಅದನ್ನು ಭಗವಂತನಿಗೆ ಬಿಡು. ಕೇವಲ ಭಗವದ್‌ ಪ್ರೀತಿಗಾಗಿ, ಮೋಕ್ಷ ಸಾಧನೆಗಾಗಿ ಕರ್ಮ ಮಾಡು”. “ಇದು ಕೇವಲ ಭೀಮಸೇನ/ವಾಯುದೇವರಿಗೆ ಮಾತ್ರ” ಎಂದು ಪಲಾಯನ ವಾದ ಮಾಡದೇ, ಯಾವುದೇ ಫಲ ಕಾಮನೆ ಇಲ್ಲದೇ ಪೂರ್ಣ ಭಕ್ತಿಯಿಂದ ಭಗವಂತನ ಪೂಜೆ ಮಾಡು. ಪೂಜೆಯಲ್ಲಿ ನಿನಗೆ ಬೇಡಲು ಇರುವ ಅಧಿಕಾರ ಕೇವಲ "ಮೋಕ್ಷ ಮತ್ತು ಭಗವಂತ'. ಅದನ್ನು ಪಡೆಯಲು ನಿನ್ನ ಸಾಧನೆಯನ್ನು ಮೀಸಲಿಡು. ಜೀವನದಲ್ಲಿ ಬರುವ ಏಳು ಬೀಳು ಎಲ್ಲವೂ ನಶ್ವರ, ಆ ಬಗ್ಗೆ ಯೋಚಿಸದೇ, ಸಂಸಾರದಿಂದ ಕಳಚಿಕೊಂಡು ಸಾವಿಲ್ಲದ ಮೋಕ್ಷವನ್ನು ಸೇರುವುದಕ್ಕಾಗಿ ಸಾಧನೆ ಮಾಡು. ಇದು ಇಲ್ಲಿರುವ ಮೂಲ ಸಂದೇಶ. ಭಗವಂತನ ಪೂಜೆಗೆ ಬೇಕಾಗಿರುವುದು ಧನ-ಕನಕವಲ್ಲ. ಕೇವಲ ನಿಷ್ಕಾಮ ಭಕ್ತಿ. ಭಗವಂತನ ಪೂಜೆ ಎಷ್ಟು ಸುಲಭ ಎನ್ನುವುದನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ:
Bibek Debroy (1955–2024)The Bhagavad Gita
(25) ‘Those who worship the gods attain the gods. Those who worship the ancestors attain the ancestors.28 Those who worship the elements29 attain the elements. And mine30 attain me.’