पत्रं पुष्पं फलं तोयं यो मे भक्त्या प्रयच्छति ।
तदहं भक्त्युपहृतमश्नामि प्रयतात्मनः ॥
patraṃ puṣpaṃ phalaṃ toyaṃ yo me bhaktyā prayacchati |
tadahaṃ bhaktyupahṛtamaśnāmi prayatātmanaḥ ||
Swami Sivananda (1887–1963)Bhagavad Gita
26. Whoever offers Me with devotion and a pure mind (heart), a leaf, a flower, a fruit or a
little water—I accept (this offering).
Sri Vishwesha Tirtharu (1931–2019)Gitasaroddhara
9.22–9.31 · ಯೋಗಕ್ಷೇಮಂ ವಹಾಮ್ಯಹಮ್
ಯೋಗಕೇಮಂ ವಹಾಮಹಂ
ವೈ ೧೧2೧25. ಭೆ
ತನ್ನ ಭಕ್ತ ರ ಸಂರಕ್ಷ ಣೆಯ ಪೂರ್ಣ ಭಾರವನ್ನು ಭಗವಂತನು ಹೊತ್ತಿ ರುಷನು,
ತನ್ನನ್ನೇ ತ್ತ ದೃಢನಿಷ್ಠೆಯಿಂದ ಉಪಾಸಿಸುವ ನಿತ್ಯಾಭಿ ಯುಕ್ತರಾದ ಭಕ್ತರ
ಯೋಗಕ್ಷೇಮವನ್ನು ತಾನು ನಿರ್ವಹಿಸುವೆನೆಂದು ಶ್ರೀಕೃಷ್ಣನು ಗೀತೆಯಲ್ಲಿ
ಅಭಿವಚನವನ್ನು ನೀಡಿರುವನು. ನಮ್ಮಲ್ಲಿ ಆತ್ಮವಿಶ್ವಾಸ ಹಾಗೂ ಹೃದಯ
ಬಲವನ್ನು ಕುದುರಿಸುವ ಜಗದೀಶ್ವರನ ಆಶ್ವಾಸನದ ದಿವ್ಯ ಸಂಜೀವಿನಿಯು
ಮ ದ
ದೊರಕಿರುವಾಗ ಜನತೆಯು ಜೀವನದ ಹೋರಾಟದಲ್ಲಿ ಕಂಗೆಡುವುದೇಕೆ?
ಭಗವದ್ಭಕ್ತಿಯ ಭದ್ರವಾದತಳಹದಿಯ ಮೇಲೆ ಜೀವನದ ಉತ್ತು ೦ಗ ಸೌಧದ
ನಿರ್ಮಾಣಕಾರ್ಯದಲ್ಲಿ ನಾವು ದೃಢ ನಿರ್ಧಾರದಿಂದ ತೊಡಗಬಹುದು. ತನ್ನನ್ನು
ಮೊರಹೊಕ್ಕು ವ್ರಾರ್ಥಿಸುತ್ತಿ ರುವ ಭಕ್ತಃ ವರ್ಗವನ್ನು ರಕ್ಷಿಸುವುದು ತನ್ನ ವ್ರತವೆಂದು
ರಾಮಾವತಾರದಲ್ಲಿ ಭಗವಂತನು ಹೇಳಿದ್ದಾನೆ.
ಸಕೃದೇವ ಪ್ರಹನ್ನೋ ಯಃ ತವಾಸ್ಮೀತಿ ಚೆ ಯಾಚತೇ |
ಅಭಯಂ ಸರ್ವಭೂತೇಚ್ಛಃ ದದಾಮ್ಯೇತದ್ ವ್ರತಂ ಮಮ ॥
ಇದು ರಾಮಾವತಾರದಲ್ಲಿ ಶರಣಾಗತ ಭಕ್ತನಿಗೆ ಪರಮಾತ್ಮನೇ ನೀಡಿದ
ಅಭಯವಾಣಿಯಾಗಿದ್ದರೆ,
ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ
ತೇಷಾಂ ನಿತ್ಯಾಭಿಯುಕ್ತಾ ನಾಂ ಯೋಗಕ್ಷ್ನ ಮಂ ವಹಾಮ್ಯಹಂ 1
ಇದು ಕೃಷ್ಣಾ ವತಾರದಲ್ಲಿ ಭಗವಂತನು ನೀಡಿದ ಭರವಸೆಯ ಅಮೃತವಾಣಿ
ಆಗಿದೆ.
ಕೌಂತೇಯ ಪ್ರತಿಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ ।
“ಅರ್ಜುನಃ ನನ್ನ ಭಕ್ತನಿಗೆ ಎಂದೆಂದಿಗೂನಾಶವಿಲ್ಲವೆಂಬುದನ್ನು ದೃಢವಾಗಿ
ತಿಳಿದುಕೋ' ಎಂದು ಭಕ್ತಿಯ ಮಾರ್ಗದಲ್ಲಿ ಮುನ್ನಡೆಯುವವನಿಗೆ ಯಾವ
ಹಾನಿಯೂ ಇಲ್ಲವೆಂದು ಅಭಿನಿವೇಶದಿಂದ ಭಗವಂತನು ಸಾರಿದ್ದಾನೆ. ಇಂತಹ
ಸುಸ್ಪಷ್ಟ ಘೋಷಣೆಗಳಿರುವಾಗ ಜೀವಬ್ರಹ್ಮ್ಮೈಕ್ಯದಂತಹ ಅಪಕ್ವ ಹಾಗೂ
ಅಸಂಬದ್ಧ ವಿಚಾರಗಳನ್ನು ತಲೆಯಲ್ಲಿ ತುಂಬಿಕೊಂಡು ಭಕ್ತಿವಿರೋಧಿ
ಮಾರ್ಗಗಳನ್ನು ಬೋಧಿಸಿ ಜನರ ಮನಸ್ಸಿನಲ್ಲಿ ವೃಥಾ ಗೊಂದಲವೆಬ್ಬಿಸುವುದನ್ನು
ಕಂಡು ನಮ್ಮ ಮನಸ್ಸಿಗೆ ಬಹಳ ಸಂತಾಪವಾಗುತ್ತಿದೆ. ಭಗವಂತನೇ
ಭಕ್ತಿಮಾರ್ಗವನ್ನು ಶ್ರೇಷ್ಠವೂ ಪವಿತ್ರವೂ ಎನಿಸಿದ ನಿರಾತಂಕವಾದ ರಾಜಪಥ
ವೆಂದು ಘೋಷಿಸಿರುವಾಗ ಆ ಮಾರ್ಗದಲ್ಲಿ ನಡೆಯಲು ಸಂಕೋಚ,
ಸಂದೇಹಗಳೇಕೆ? ಇದು ಅಜ್ಞಾನಿಗಳಿಗೆ ಮಾತ್ರ ಮೀಸಲಾದ ದಾರಿಯೆಂದು
ಅದನ್ನು ಏಕೆ ಹೀಗಳೆಯುತ್ತಾರೆಂಬುದೇ ನಮಗೆ ಅರ್ಥವಾಗುತ್ತಿಲ್ಲ. ಜನರು
ಇಂತಹ ಅಸಂಬದ್ಧ ವಿಚಾರ ಗೊಂದಲಗಳಲ್ಲಿ ವೃಥಾ ಕಾಲಹರಣ ಮಾಡದೆ
ನಿಸಂಕೋಚಭಾವದಿಂದ ಭಕ್ತಿಯೋಗವನ್ನಾಶ್ರಯಿಸುವುದೇ ವಿಹಿತವಾಗಿದೆ.
ಕೌಂತೇಯ ಪ್ರತಿಜಾನೀಹಿ ನಮೇ ಭಕ್ತಃ ಪ್ರಣಶ್ಯತಿ ।
ಈ ವಾಕ್ಯದಲ್ಲಿ ಶ್ರೀಕೃಷ್ಣನು ತನ್ನ ಭಕ್ತರಿಗೆ ಎಂದಿಗೂ ನಾಶವಿಲ್ಲವೆಂದು
ಅರ್ಜುನನಿಂದ ಪ್ರತಿಜ್ಞೆ ಮಾಡಿಸುತ್ತಾನೆ. ಅದೇಕೆ? ತಾನು ಪ್ರತಿಜ್ಞೆ ಮಾಡದೆ
ಅರ್ಜುನನಿಂದ ಭಗವಂತನು ಏಕೆ ಪ್ರತಿಜ್ಞೆ ಮಾಡಿಸುತ್ತಾನೆ? ತನ್ನ
ಪ್ರತಿಜ್ಞೆಯಾದರೂ ಕೆಲವೊಮ್ಮೆ ಹುಸಿಯಾದೀತು. ತನ್ನ ಭಕ್ತರ ಪ್ರತಿಜ್ಞೆಯು
ಎಂದಿಗೂ ಹುಸಿಯಾಗಲಾರದೆಂದು ಶ್ರೀಕೃಷ್ಣನ ಆಶಯವಾಗಿದೆ.
ಸ್ವನಿಯಮಮಪಹಾಯ ಮತ್ ಪ್ರತಿಜ್ಞಾಂ
ಯತಮಧಿಕರ್ತುಮವಪ್ಪುತೋ ರಥಸ್ಥಃ
ಧೃತರಥಚರಣೋರಭ್ಯಯಾಚ್ಛಲದ್ದು:
ಹರಿರಿವ ಹಂತುಮಿಮಂ ಗತೋತ್ತರೀಯಃ ॥
ಎಂದು ಭಾಗವತದಲ್ಲಿ ಭೀಷ್ಮರು ವರ್ಣಿಸುತ್ತಾರೆ. ""ತನ್ನ ಭಕ್ತರ ಪ್ರತಿಜ್ಞೆಯು
ಹುಸಿಯಾಗಬಾರದೆಂದು ಚಕ್ರವನ್ನು ಧರಿಸಿ ತನ್ನ ಪ್ರತಿಜ್ಞೆಯನ್ನೇ ಭಕ್ತರಿಗಾಗಿ
ಭಂಗಗೊಳಿಸಲು ಅಣಿಯಾದ ಶ್ರೀಕೃಷ್ಣನ ಭಕ್ತಾನುಗ್ರಹಕಾರಕವಾದ ಆ
ಪ್ರಸನ್ನವದನವನ್ನು ನಾನೆಂತು ಮರೆಯಲಿ! ಮರಣಶಯ್ಯೆಯಲ್ಲಿ ದ್ವಭೀಷ್ಮರ
ಉದ್ಗಾರವಿದು. ಮಹಾಭಾರತ ಯುದ್ಧದಲ್ಲಿ ತಾನು ಆಯುಧವನ್ನು
ಧರಿಸುವುದಿಲ್ಲವೆಂದು ಶ್ರೀಕೃಷ್ಣನು ಪ್ರತಿಜ್ಞೆ ಮಾಡಿದ್ದರೂ ಕೃಷ್ಣನು ಆಯುಧವನ್ನು
ಧರಿಸುವಂತೆ ಮಾಡುವೆನೆಂಬ ಭೀಷ್ಮರ ಪ್ರತಿಜ್ಞೆಯನ್ನು ಪರಿಪಾಲಿಸುವುದಕ್ಕಾಗಿ
ಅವರ ಶಸ್ತ್ರಾಸ್ತ್ರಗಳಿಂದ ಪೀಡಿತನಾದಂತೆ ನಟಿಸಿ, ತನ್ನ ಪ್ರತಿಜ್ಞೆಯನ್ನು ಮುರಿದು
ಶಸ್ತ್ರಧಾರಣೆಯನ್ನು ಮಾಡುವನು. ತನ್ನ ಮಾತಿಗಿಂತಲೂ ತನ್ನ ಭಕ್ತರ ಮಾತಿಗೆ
ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿದ ಶ್ರೀಕೃಷ್ಣನು ನಮ್ಮಲ್ಲಿ ವಿಶ್ವಾಸವನ್ನು
ಮೂಡಿಸುವುದಕ್ಕಾಗಿ ತನ್ನ ಪರಮಭಕ್ತ ಅರ್ಜುನನಿಂದಲೇ ""ನ ಮೇ ಭಕ್ತಃ
ಪ್ರಣಶ್ಯತಿ' ಎಂದು ಪ್ರತಿಜ್ಞೆ ಮಾಡಿಸುತ್ತಾನೆಂದು ಈ ಶ್ಲೋಕವನ್ನು ಸ್ವಾರಸ್ಯಕರ
ರೀತಿಯಲ್ಲಿ ಕೆಲವರು ವ್ಯಾಖ್ಯಾನ ಮಾಡಿರುವರು.
ಹರಿಪೂಜೆ ಬಹು ಸುಲಭ
ಹರಿಪೂಜೆ ಬಹು ಸುಲಭ
ಅದರಂತೆ ನಮ್ಮಲ್ಲಿರುವ ಸಾಧನಸಾಮಗ್ರಿಯನ್ನೂ ದೇಹೇಂದ್ರಿಯಗಳನ್ನೂ
ಲೌಕಿಕ ಸಂಪತ್ತನ್ನೂ ಪರಮಾತ್ಮನಿಗೆ ಪ್ರಿಯಕರವಾದ ಕಾರ್ಯಕ್ಕೆ ವಿನಿಯೋಗಿಸಿದರೆ
ಅದೂ ಭಗವತ್ ಸಮರ್ಪಣೆ ಎನಿಸುತ್ತದೆ. ನಮ್ಮಲ್ಲಿರುವ ಸಾಧನಸಾಮಗ್ರಿ
ಅಲ್ಪವೇ ಆಗಿರಬಹುದು. ಆದರೂ ಅದನ್ನು ಸ್ವಾರ್ಥಕ್ಕಾಗಿ ಬಳಸದೆ ಭಗವಂತನ
ಸೇವೆಗಾಗಿ ವಿನಿಯೋಗಿಸಬೇಕು. ಅವನಿಗೆ ಪ್ರಿಯವಾದ ಕಾರ್ಯಗಳಿಗೇ
ಅರ್ಪಿತಗೊಳಿಸಬೇಕು. ವಸ್ತುವಿನ ಪರಿಮಾಣವನ್ನಲ್ಲ, ಅದರ ಹಿಂದಿರುವ
ಭಾವನೆಯ ವಿಸ್ತಾರವನ್ನು ಪರಮಾತ್ಮನು ಗಮನಿಸುತ್ತಾನೆ-
ಪತ್ರಂ ಪುಷ್ಪಂ ಫಲಂತೋಯಂ
ಯೋಮೇ ಭಕ್ತ್ಯಾ ಪ್ರಯಚ್ಛತಿ।
ಎಷ್ಟೇ ಅಲ್ಪವಾದ ವಸ್ತುವಾದರೂ ಭಕ್ತಿಯ ಹಿರಿಮೆಯಿಂದ ಅದು
ದೊಡ್ಡದಾಗುವುದು. ಅಂತೂ ಪರಮಾತ್ಮನು ಭಕ್ತನಿಂದ ತ್ಯಾಗ ಹಾಗೂ
ಸಮರ್ಪಣಭಾವವನ್ನು ಬಯಸುತ್ತಾನೆ. ಇದರಿಂದ ಲೋಕದ ಪ್ರಗತಿಯ
ಜೊತೆಗೆ ಭಕ್ತನ ವೈಯಕ್ತಿಕ ವಿಕಾಸವೂ ಸಾಧಿತವಾಗುತ್ತದೆ. ನೂರಾರು
ಸುವರ್ಣಾಭರಣಗಳಿಂದ, ವೈಭವಾಡಂಬರಗಳಿಂದ ಪೂಜಿಸಿದ ಚೋಲರಾಜ
ನಿಂದ ಪಡೆಯಲಾಗದ ಆಧ್ಯಾತ್ಮಿಕ ಸಿದ್ಧಿಯನ್ನು ತುಲಸೀಪತ್ರಗಳಿಂದ
ಪರಮಾತ್ಮನನ್ನು ಅರ್ಚಿಸಿದ ವಿಷ್ಣುದಾಸನು ಹೊಂದಿದನು. ಮೊಸಳೆಯ
ಆಕ್ರಮಣವನ್ನು ಸರ್ವಶಕ್ತಿಯಿಂದ ಎದುರಿಸಿ ತನ್ನ ಪುರುಷಪ್ರ ಯತ್ನವೆಲ್ಲ
ವಿಫಲವಾದಾಗ ಕಮಲಪುಷ್ಟವನ್ನೆತ್ತಿಹಿಡಿದು ಆರ್ತಭಾವದಿಂದ ಮೊರೆಯಿಟ್ಟ
ಗಜರಾಜನನ್ನು ಸಂರಕ್ಷಿಸಲು ಆತುರದಿಂದ ಓಡಿಬಂದಿದ್ದಾನೆ. ನಮ್ಮ
ಭಕ್ತವತ್ಸಲನಾದ ಶ್ರೀಹರಿ. ವರ್ಷವರ್ಷಗಳವರೆಗೆ ಶ್ರೀರಾಮನ ಪ್ರತೀಕ್ಷೆಯಲ್ಲಿ
ಕಾದು ಕುಳಿತ ದಾಸಿ ಶಬರಿಯು ಕಾಡಿನಲ್ಲಿ ಬೆಳೆದ ಫಲಗಳನ್ನು ಅವನಿಗೆ
ಸಮರ್ಪಿಸಿ ಪರಮತ್ರೇಯಸ್ಸನ್ನು ವಡೆದಳು. ಬಹುದಿನಗಳ ಉಪವಾಸದ ನಂತರ
ಅಂದು ತಾನು ಸ್ವೀಕರಸಬೆಚೆಂದಿದ್ದ ಹಿಟ್ಟನ್ನು ಉಪವಾಸದಿಂದ ಬಳಲಿದ
ಬೇಡರಿಗೆ ನೀಡಿ ಉಳಿದಿರುವ ಸ್ವಲ್ಪ ನೀರನ್ನು ರಾಜಾ ರಂತಿದೇವನು
ಕುಡಿಯಬಯಸಿದ. ಆದರೆ ಎದುರಿಗೆ ನೀರಿಗಾಗಿ ಬಾಯಿ ತೆರೆದು ತನ್ನನ್ನೇ
ದೀನದೃಷ್ಟಿಯಿಂದನೋಡುತ್ತಿರುವನಾಯಿಯನ್ನುಕಂಡು ಸರ್ವಾಂತರ್ಯಾಮಿ
ಯಾದ ಶ್ರೀಹರಿಯು ಪ್ರೀತನಾಗಲೆಂದು ಆ ನೀರನ್ನು ನಾಯಿಗೆ ಧಾರೆ
ಎರೆಯುತ್ತಾನೆ. "ಸ್ವಾಮಿ, ಸಮಗ್ರ ಭೂಮಿಯ ಚಕ್ರಾಧಿಪತ್ಯವನ್ನಾಗಲಿ
ಸಕಲಭೋಗವೈಭವವನ್ನಾಗಲಿ ಹೆಚ್ಜೇಕೆ, ಮುಕ್ತಿಯನ್ನೂ ನಾನು ಬಯಸುವು
ದಿಲ್ಲ ಸಕಲ ಜನರ ಒಳಗಿದ್ದು ಅವರೆಲ್ಲರ ದುಃಖವನ್ನೂ ನಾನೇ
ಅನುಭವಿಸುವಂತಾಗಿ ಅವರು ದುಃಖರಹಿತರಾಗುವಂತಿದ್ದರೆ ಅದೇ ನನಗೆ
ಹಿಗ್ಗು!'' ಇದು ತ್ಯಾಗಿ, ತಪಸ್ವಿಯಾದ ರಾಜಾ ರಂತಿದೇವನ ಅಮೃತಮಯ
ಉದ್ಗಾರವಾಗಿದೆ. ಹೀಗೆ ಪತ್ರ ಪುಷ್ಪ ಫಲ ತೋಯಗಳ ಸಮರ್ಪಣೆಗೆ
ವಿಷ್ಣುದಾಸ, ಗಜೇಂದ್ರ, ಶಬರಿ, ರಂತಿದೇವರು ಆದರ್ಶ ಉದಾಹರಣೆಗಳೆನಿಸಿ
ದ್ದಾರೆ.
ಈ ಶ್ಲೋಕಕ್ಕೆ ಇನ್ನೂ ಒಂದು ಆಧ್ಯಾತ್ಮಿಕ ಅರ್ಥವಿದೆ.
ಛಂದಾಂಸಿ ಯಸ್ಯ ಪರ್ಣಾನಿ।
ಜಗತ್ತೆಂಬ ವಿಶಾಲ ವೃಕ್ಷದ ಪತ್ರಗಳೆಂದು ವೇದವನ್ನು ವರ್ಣಿಸಿದ್ದಾರೆ.
ವೇದಾಧ್ಯಯನಮಾಡಿವೇದಕುಸುವುದ ಜ್ಞಾನಮಧುವನ್ನು ತನ್ನಲ್ಲಿ ಸಂಗ್ರಹಿಸಿ
ಸಜ್ಜನರಲ್ಲಿ ಅದರವಿತರಣಮಾಡುವುದೇ ಪತ್ರ ಸಮರ್ಪಣವೆನಿಸುವುದು.
ಅಹಿಂಸಾ ಪ್ರಥಮಂ ಪುಷ್ಪಂ ಪುಷ್ಪಮಿಂದ್ರಿಯನಿಗ್ರಹಃ ।
ಎಂದು ಮುಂತಾಗಿ ನಿರೂಪಿಸಲಾದ ಅಹಿಂಸಾ, ಇಂದ್ರಿಯನಿಗ್ರಹ,
ಸರ್ವಭೂತದಯ,, ಸತ್ಯ ಜ್ಞಾನ, ತಪಸ್ಸು ಕ್ರಿಯಾ, ಧ್ಯಾನಗಳೆಂಬ ಎಂಟು
ಭಾವಪುಷ್ಟಗಳನ್ನು ಇಲ್ಲಿ ಪುಷ್ಪವೆಂದು ಪರಿಗ್ರಹಿಸಲಾಗಿದೆ. ಇಂತಹ
ಸದ್ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಪುಷ್ಪದ ಅರ್ಪಣೆ
ಯಾಗಿದೆ. ಸತ್ಯರ್ಮವನ್ನಾಚರಿಸಿ ಅದರ ಫಲವನ್ನು ಬಯಸದೆ
ನಿಷ್ಕುಮವೃತ್ತಿಯಿಂದ ಇರುವುದು ಫಲಾರ್ಪಣೆ ಎನಿಸುವುದು. ಪರಮಾತ್ಮನ
ಕಥಾಶ್ರವಣ ಹಾಗೂ ಕೀರ್ತನಕಾಲಗಳಲ್ಲಿ ಭಕ್ತಿಯ ಆವೇಶದಿಂದ ಉಕ್ಕಿ
ಹರಿಯುವ ಆನಂದಬಾಷ್ಟದ ಜಲಧಾರೆಯನ್ನು ಇಲ್ಲಿ ತೋಯವೆಂದು
ಪರಿಗ್ರಹಿಸಬಹುದು. ಭಕ್ತಿರಸಭರಿತವಾದ ಇಂತಹ ಸಂಕೀರ್ತನಯೋಗವೇ
ಶ್ರೀಹರಿಗೆ ಭಕ್ತನು ಮಾಡುವ ತೋಯಾರ್ಪಣೆಯಾಗಿದೆ. ಅಂತೂ ಈ
ಸುಂದರವಾದ ಪದ್ಯವು ಯಾವ ವೈಭವಾಡಂಬರಗಳಿಲ್ಲದಿದ್ದರೂ ತುಂಬಿದ
ಹೃದಯದಿಂದ ಭಗವಂತನನ್ನು ಹೇಗೆ ಒಲಿಸಬಹುದೆಂಬುದನ್ನು ನಮಗೆ
ತೋರಿಸಿಕೊಡುತ್ತ ದೆ
Bannanje Govindacharya (1936–2020)Bhagavad Gita Pravachana
ಪತ್ರಮ್ ಪುಷ್ಪಮ್ ಫಲಮ್ ತೋಯಮ್ ಯಃ ಮೇ ಭಕ್ಕಾ ಪ್ರಯಚ್ಛತಿ |
ತತ್ ಅಹಮ್ ಭಕ್ತಿ ಉಪಹೃತಮ್ ಅಶ್ನಾಮಿ ಪ್ರಯತ ಆತ್ಮನಃ -ಯಾರು ಎಲೆಯನ್ನೋ, ಹೂವನ್ನೋ,
ನೀರನ್ನೋ ಭಕ್ತಿಯಿಂದ ನನಗೆ ನೀಡುತ್ತಾನೋ, ನನ್ನಲ್ಲೇ ಬಗೆಯಿಟ್ಟ ಅವನ ಭಕ್ತಿಯ ಆ ಕೊಡುಗೆಯನ್ನು ನಾನು
ನಲ್ಮೆಯಿಂದ ಕೊಳ್ಳುತ್ತೇನೆ.
ಮಹೋನ್ನತನಾದ ಭಗವಂತನ ಪೂಜೆಗೆ ಮೂಲವಾಗಿ ಬೇಕಾಗಿರುವುದು “ತನ್ನನ್ನು ತಾನು ಸಂಪೂರ್ಣ
ತೊಡಗಿಸಿಕೊಳ್ಳುವುದು(17೪01/60160ಲ]', ಮತ್ತು "ಮನಸ್ಸು ತುಂಬಿ ಆರಾಧನೆ' ಮಾಡುವುದು. ಮನಸ್ಸಿನಲ್ಲಿ ಭಕ್ತಿ
ತುಂಬಿ ತುಳಸಿ ಪತ್ರೆಯನ್ನೋ, ಹೂವನ್ನೋ ಅರ್ಪಿಸಿದರೆ ಅದನ್ನು ಭಗವಂತ ಪ್ರೀತಿಯಿಂದ ಸ್ವೀಕರಿಸುತ್ತಾನೆ.
ಇಲ್ಲಿ ಬಂಗಾರದ ಪೀಠವಾಗಲೀ, ಬೆಳ್ಳಿಯ ಹರಿವಾಣವಾಗಲೀ, ಪಂಚಪಾತ್ರೆಯಾಗಲಿ ಏನೂ ಬೇಡ. ಮನೆಯಲ್ಲಿ,
ಮನೆ ತೋಟದಲ್ಲಿ ಏನಿದೆ ಅದನ್ನೇ ಅರ್ಪಿಸು. ಮನೆಯಲ್ಲಿ ಹಾಲಿಲ್ಲದಿದ್ದರೆ ಒಂದು ಲೋಟ ನೀರನ್ನು ಭಕ್ತಿಯಿಂದ
ಅರ್ಪಿಸು. ಆದರೆ ಅದರ ಹಿಂದೆ ಭಾವಶುದ್ಧಿ ಇರಲಿ ಅಷ್ಟೇ. ಕೃಷ್ಣ ಹೇಳುತ್ತಾನೆ “ಯೋ ಮೇ ಭಕ್ತಾ ಪ್ರಯಚ್ಛತಿ”
ಎಂದು. ಭಗವಂತ ಬಯಸುವುದು ನಮ್ಮ ಅಂತರಂಗದ ಪ್ರೀತಿಯನ್ನು ಮತ್ತು ಹೃದಯವಂತಿಕೆಯನ್ನು ಹೊರತು
ಹೊರಗಿನ ವೈಭವವನ್ನಲ್ಲ. “ತದಹಂ ಭಕ್ಕುಪಹೃತಮಶ್ನಾಮಿ ಪ್ರಯತಾತ್ಮನಃ”-“ನೀನು ಮನಸ್ಸನ್ನು ನನ್ನಲ್ಲಿ
ನೆಲೆಗೊಳಿಸಿ, ಭಕ್ತಿಯಿಂದ ಏನು. ಕೊಟ್ಟರೂ ಅದನ್ನು ನಾನು ಸ್ವೀಕರಿಸುತ್ತೇನೆ” ಎನ್ನುತ್ತಾನೆ ಕೃಷ್ಣ.
ರಾಮಾಯಣದಲ್ಲಿ ಬರುವ ಶಬರಿಯ ಕಥೆ ಭಗವಂತನ ಈ ನುಡಿಗೆ ಒಂದು ದೃಷ್ಟಾಂತ.
Bibek Debroy (1955–2024)The Bhagavad Gita
(26)
‘He who faithfully worships me with a leaf, a flower, a fruit or water, from
that pure-hearted person, I gladly accept those faithful offerings.’