यत्करोषि यदश्नासि यज्जुहोषि ददासि यत् ।
यत्तपस्यसि कौन्तेय तत्कुरुष्व मदर्पणम् ॥
yatkaroṣi yadaśnāsi yajjuhoṣi dadāsi yat |
yattapasyasi kaunteya tatkuruṣva madarpaṇam ||
Swami Sivananda (1887–1963)Bhagavad Gita
27. Whatever thou doest, whatever thou eatest, whatever thou offerest in sacrifice, whatever
thou givest, whatever thou practiseth as austerity, O Arjuna, do it as an offering unto Me!
Sri Vishwesha Tirtharu (1931–2019)Gitasaroddhara
9.22–9.31 · ಯೋಗಕ್ಷೇಮಂ ವಹಾಮ್ಯಹಮ್
ಯೋಗಕೇಮಂ ವಹಾಮಹಂ
ವೈ ೧೧2೧25. ಭೆ
ತನ್ನ ಭಕ್ತ ರ ಸಂರಕ್ಷ ಣೆಯ ಪೂರ್ಣ ಭಾರವನ್ನು ಭಗವಂತನು ಹೊತ್ತಿ ರುಷನು,
ತನ್ನನ್ನೇ ತ್ತ ದೃಢನಿಷ್ಠೆಯಿಂದ ಉಪಾಸಿಸುವ ನಿತ್ಯಾಭಿ ಯುಕ್ತರಾದ ಭಕ್ತರ
ಯೋಗಕ್ಷೇಮವನ್ನು ತಾನು ನಿರ್ವಹಿಸುವೆನೆಂದು ಶ್ರೀಕೃಷ್ಣನು ಗೀತೆಯಲ್ಲಿ
ಅಭಿವಚನವನ್ನು ನೀಡಿರುವನು. ನಮ್ಮಲ್ಲಿ ಆತ್ಮವಿಶ್ವಾಸ ಹಾಗೂ ಹೃದಯ
ಬಲವನ್ನು ಕುದುರಿಸುವ ಜಗದೀಶ್ವರನ ಆಶ್ವಾಸನದ ದಿವ್ಯ ಸಂಜೀವಿನಿಯು
ಮ ದ
ದೊರಕಿರುವಾಗ ಜನತೆಯು ಜೀವನದ ಹೋರಾಟದಲ್ಲಿ ಕಂಗೆಡುವುದೇಕೆ?
ಭಗವದ್ಭಕ್ತಿಯ ಭದ್ರವಾದತಳಹದಿಯ ಮೇಲೆ ಜೀವನದ ಉತ್ತು ೦ಗ ಸೌಧದ
ನಿರ್ಮಾಣಕಾರ್ಯದಲ್ಲಿ ನಾವು ದೃಢ ನಿರ್ಧಾರದಿಂದ ತೊಡಗಬಹುದು. ತನ್ನನ್ನು
ಮೊರಹೊಕ್ಕು ವ್ರಾರ್ಥಿಸುತ್ತಿ ರುವ ಭಕ್ತಃ ವರ್ಗವನ್ನು ರಕ್ಷಿಸುವುದು ತನ್ನ ವ್ರತವೆಂದು
ರಾಮಾವತಾರದಲ್ಲಿ ಭಗವಂತನು ಹೇಳಿದ್ದಾನೆ.
ಸಕೃದೇವ ಪ್ರಹನ್ನೋ ಯಃ ತವಾಸ್ಮೀತಿ ಚೆ ಯಾಚತೇ |
ಅಭಯಂ ಸರ್ವಭೂತೇಚ್ಛಃ ದದಾಮ್ಯೇತದ್ ವ್ರತಂ ಮಮ ॥
ಇದು ರಾಮಾವತಾರದಲ್ಲಿ ಶರಣಾಗತ ಭಕ್ತನಿಗೆ ಪರಮಾತ್ಮನೇ ನೀಡಿದ
ಅಭಯವಾಣಿಯಾಗಿದ್ದರೆ,
ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ
ತೇಷಾಂ ನಿತ್ಯಾಭಿಯುಕ್ತಾ ನಾಂ ಯೋಗಕ್ಷ್ನ ಮಂ ವಹಾಮ್ಯಹಂ 1
ಇದು ಕೃಷ್ಣಾ ವತಾರದಲ್ಲಿ ಭಗವಂತನು ನೀಡಿದ ಭರವಸೆಯ ಅಮೃತವಾಣಿ
ಆಗಿದೆ.
ಕೌಂತೇಯ ಪ್ರತಿಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ ।
“ಅರ್ಜುನಃ ನನ್ನ ಭಕ್ತನಿಗೆ ಎಂದೆಂದಿಗೂನಾಶವಿಲ್ಲವೆಂಬುದನ್ನು ದೃಢವಾಗಿ
ತಿಳಿದುಕೋ' ಎಂದು ಭಕ್ತಿಯ ಮಾರ್ಗದಲ್ಲಿ ಮುನ್ನಡೆಯುವವನಿಗೆ ಯಾವ
ಹಾನಿಯೂ ಇಲ್ಲವೆಂದು ಅಭಿನಿವೇಶದಿಂದ ಭಗವಂತನು ಸಾರಿದ್ದಾನೆ. ಇಂತಹ
ಸುಸ್ಪಷ್ಟ ಘೋಷಣೆಗಳಿರುವಾಗ ಜೀವಬ್ರಹ್ಮ್ಮೈಕ್ಯದಂತಹ ಅಪಕ್ವ ಹಾಗೂ
ಅಸಂಬದ್ಧ ವಿಚಾರಗಳನ್ನು ತಲೆಯಲ್ಲಿ ತುಂಬಿಕೊಂಡು ಭಕ್ತಿವಿರೋಧಿ
ಮಾರ್ಗಗಳನ್ನು ಬೋಧಿಸಿ ಜನರ ಮನಸ್ಸಿನಲ್ಲಿ ವೃಥಾ ಗೊಂದಲವೆಬ್ಬಿಸುವುದನ್ನು
ಕಂಡು ನಮ್ಮ ಮನಸ್ಸಿಗೆ ಬಹಳ ಸಂತಾಪವಾಗುತ್ತಿದೆ. ಭಗವಂತನೇ
ಭಕ್ತಿಮಾರ್ಗವನ್ನು ಶ್ರೇಷ್ಠವೂ ಪವಿತ್ರವೂ ಎನಿಸಿದ ನಿರಾತಂಕವಾದ ರಾಜಪಥ
ವೆಂದು ಘೋಷಿಸಿರುವಾಗ ಆ ಮಾರ್ಗದಲ್ಲಿ ನಡೆಯಲು ಸಂಕೋಚ,
ಸಂದೇಹಗಳೇಕೆ? ಇದು ಅಜ್ಞಾನಿಗಳಿಗೆ ಮಾತ್ರ ಮೀಸಲಾದ ದಾರಿಯೆಂದು
ಅದನ್ನು ಏಕೆ ಹೀಗಳೆಯುತ್ತಾರೆಂಬುದೇ ನಮಗೆ ಅರ್ಥವಾಗುತ್ತಿಲ್ಲ. ಜನರು
ಇಂತಹ ಅಸಂಬದ್ಧ ವಿಚಾರ ಗೊಂದಲಗಳಲ್ಲಿ ವೃಥಾ ಕಾಲಹರಣ ಮಾಡದೆ
ನಿಸಂಕೋಚಭಾವದಿಂದ ಭಕ್ತಿಯೋಗವನ್ನಾಶ್ರಯಿಸುವುದೇ ವಿಹಿತವಾಗಿದೆ.
ಕೌಂತೇಯ ಪ್ರತಿಜಾನೀಹಿ ನಮೇ ಭಕ್ತಃ ಪ್ರಣಶ್ಯತಿ ।
ಈ ವಾಕ್ಯದಲ್ಲಿ ಶ್ರೀಕೃಷ್ಣನು ತನ್ನ ಭಕ್ತರಿಗೆ ಎಂದಿಗೂ ನಾಶವಿಲ್ಲವೆಂದು
ಅರ್ಜುನನಿಂದ ಪ್ರತಿಜ್ಞೆ ಮಾಡಿಸುತ್ತಾನೆ. ಅದೇಕೆ? ತಾನು ಪ್ರತಿಜ್ಞೆ ಮಾಡದೆ
ಅರ್ಜುನನಿಂದ ಭಗವಂತನು ಏಕೆ ಪ್ರತಿಜ್ಞೆ ಮಾಡಿಸುತ್ತಾನೆ? ತನ್ನ
ಪ್ರತಿಜ್ಞೆಯಾದರೂ ಕೆಲವೊಮ್ಮೆ ಹುಸಿಯಾದೀತು. ತನ್ನ ಭಕ್ತರ ಪ್ರತಿಜ್ಞೆಯು
ಎಂದಿಗೂ ಹುಸಿಯಾಗಲಾರದೆಂದು ಶ್ರೀಕೃಷ್ಣನ ಆಶಯವಾಗಿದೆ.
ಸ್ವನಿಯಮಮಪಹಾಯ ಮತ್ ಪ್ರತಿಜ್ಞಾಂ
ಯತಮಧಿಕರ್ತುಮವಪ್ಪುತೋ ರಥಸ್ಥಃ
ಧೃತರಥಚರಣೋರಭ್ಯಯಾಚ್ಛಲದ್ದು:
ಹರಿರಿವ ಹಂತುಮಿಮಂ ಗತೋತ್ತರೀಯಃ ॥
ಎಂದು ಭಾಗವತದಲ್ಲಿ ಭೀಷ್ಮರು ವರ್ಣಿಸುತ್ತಾರೆ. ""ತನ್ನ ಭಕ್ತರ ಪ್ರತಿಜ್ಞೆಯು
ಹುಸಿಯಾಗಬಾರದೆಂದು ಚಕ್ರವನ್ನು ಧರಿಸಿ ತನ್ನ ಪ್ರತಿಜ್ಞೆಯನ್ನೇ ಭಕ್ತರಿಗಾಗಿ
ಭಂಗಗೊಳಿಸಲು ಅಣಿಯಾದ ಶ್ರೀಕೃಷ್ಣನ ಭಕ್ತಾನುಗ್ರಹಕಾರಕವಾದ ಆ
ಪ್ರಸನ್ನವದನವನ್ನು ನಾನೆಂತು ಮರೆಯಲಿ! ಮರಣಶಯ್ಯೆಯಲ್ಲಿ ದ್ವಭೀಷ್ಮರ
ಉದ್ಗಾರವಿದು. ಮಹಾಭಾರತ ಯುದ್ಧದಲ್ಲಿ ತಾನು ಆಯುಧವನ್ನು
ಧರಿಸುವುದಿಲ್ಲವೆಂದು ಶ್ರೀಕೃಷ್ಣನು ಪ್ರತಿಜ್ಞೆ ಮಾಡಿದ್ದರೂ ಕೃಷ್ಣನು ಆಯುಧವನ್ನು
ಧರಿಸುವಂತೆ ಮಾಡುವೆನೆಂಬ ಭೀಷ್ಮರ ಪ್ರತಿಜ್ಞೆಯನ್ನು ಪರಿಪಾಲಿಸುವುದಕ್ಕಾಗಿ
ಅವರ ಶಸ್ತ್ರಾಸ್ತ್ರಗಳಿಂದ ಪೀಡಿತನಾದಂತೆ ನಟಿಸಿ, ತನ್ನ ಪ್ರತಿಜ್ಞೆಯನ್ನು ಮುರಿದು
ಶಸ್ತ್ರಧಾರಣೆಯನ್ನು ಮಾಡುವನು. ತನ್ನ ಮಾತಿಗಿಂತಲೂ ತನ್ನ ಭಕ್ತರ ಮಾತಿಗೆ
ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿದ ಶ್ರೀಕೃಷ್ಣನು ನಮ್ಮಲ್ಲಿ ವಿಶ್ವಾಸವನ್ನು
ಮೂಡಿಸುವುದಕ್ಕಾಗಿ ತನ್ನ ಪರಮಭಕ್ತ ಅರ್ಜುನನಿಂದಲೇ ""ನ ಮೇ ಭಕ್ತಃ
ಪ್ರಣಶ್ಯತಿ' ಎಂದು ಪ್ರತಿಜ್ಞೆ ಮಾಡಿಸುತ್ತಾನೆಂದು ಈ ಶ್ಲೋಕವನ್ನು ಸ್ವಾರಸ್ಯಕರ
ರೀತಿಯಲ್ಲಿ ಕೆಲವರು ವ್ಯಾಖ್ಯಾನ ಮಾಡಿರುವರು.
ಕ್ರಿಯಾ ಸಮರ್ಪಣೆ
ಕ್ರಿಯಾಸಮರ್ಪಣೆ
ಭಕ್ತರ ಯೋಗಕ್ಷೇಮದ ಭಾರವನ್ನು ಹೊತ್ತಿರುವ ಪರಮಾತ್ಮನು ನಮ್ಮಿಂದ
ಹೆಚ್ಚಿನದೇನನ್ನೂ ಅಪೇಕ್ಷಿಸುವುದಿಲ್ಲ. ನಮ್ಮಲ್ಲಿರುವ. ವಸ್ತುವನ್ನು
ಸ್ವಾರ್ಥಕ್ಕಾಗಿಯೇ ಬಳಸದೆ ಅದನ್ನು ಭಗವಂತನಿಗಾಗಿ ಸಮರ್ಪಿಸುವ
ತ್ಯಾಗವೃತ್ತಿಯಿಂದ ಪರಮಾತ್ಮನು ಪ್ರಸನ್ನನಾಗುವನು. ವಸ್ತುವಿನ ಮೇಲೆ ಒಡೆತನದ
ಭಾವನೆಯಾಗಲೀನವ್ಮ ಕ್ರಿಯೆಗಳ ಬಗ್ಗೆ ಕರ್ತೃತ್ವದ ಅಹಂಕಾರವಾಗಲೀನಮ್ಮಲ್ಲಿ
ಇರಬಾರದು. ನಮ್ಮಿಂದ ನಡೆದ ಎಲ್ಲ ಕಾರ್ಯಗಳಿಗೂ ಸ್ವತಂತ್ರನಾದ ಪರಮಾತ್ಮನೇ
ಪ್ರೇರಕನೂ ಕಾರಕನೂ ಆಗಿರುವನೆಂದು ಭಾವಿಸುವುದೇ ಸಕಲ ಕ್ರಿಯೆಗಳ
ಸಮರ್ಪಣವಾಗಿದೆ. ಪರಮಾತ್ಮನಿಗೆ ಪ್ರೀತಿಕರವಾಗುವಂತೆ ನಮ್ಮ ಎಲ್ಲ
ವ್ಯವಹಾರಗಳೂ ನಡೆಯಬೇಕೆಂಬ ಬಲವಾದ ಭಾವನೆಯಿಂದ ಪ್ರವರ್ತಿಸುವುದ
ರಿಂದ ನಮ್ಮ ಎಲ್ಲ ಕ್ರಿಯೆಗಳು ಹರಿಪೂಜೆ ಎನಿಸುವವು. ಲೋಕವ್ಯವಸ್ಥೆಗೆ
ಪೋಷಕವಾದ ಸದ್ವೃತ್ತಿಗಳೇ ಭಗವಂತನಿಗೆ ಪ್ರಿಯವಾಗಿರುವುದರಿಂದ ನಮ್ಮ
ಶಯನಾಸನಾದಿ ವ್ಯವಹಾರಗಳೆಲ್ಲವೂ ವಿಶ್ವಕರ್ತನ ನಿಯಮ ಆದೇಶಗಳಿಗೆ
ಅನುಸಾರವಾಗಿ ಇದ್ದರೆ ಮಾತ್ರ ಅವು ಹರಿಪೂಜೆ ಎನಿಸುತ್ತವೆ. ತನ್ನ ಜೀವನದ
ಎಲ್ಲ ಕೃತಿಗಳನ್ನು ಹೀಗೆ ಭಗವಂತನ ಪೂಜೆಯಾಗಿ ಮಾರ್ಪಡಿಸಿಕೊಂಡು ಎಲ್ಲ
ಕ್ರಿಯೆಗಳ ಬಗ್ಗೆಯೂ ದೇವರಿಗೆ ಇರುವಸ್ವಾತಂತ್ರ್ಯವನ್ನು ಸ್ಥರಿಸಿ ನಡೆಯುವುದೇ
ಸರ್ವಕ್ರಿಯಾಸಮರ್ವಣೆಯಾಗಿದ್ದು ಇದನ್ನೇ-
ಯತ್ ಕರೋಷಿ ಯದನ್ನಾಸಿ
ಯಜ್ಞುಹೋಷಿ ದಾಸಿ ಯತ್ ।
ಯತ್ ತಪಸ್ಯಸಿ ಕೌಂತೇಯ
ತತ್ ಕುರುಷ್ವ ಮದರ್ಪಣಂ ॥
ಎಂದಿದ್ದಾ ರೆ.
Bannanje Govindacharya (1936–2020)Bhagavad Gita Pravachana
ಯತ್ ಕರೋಷಿ ಯತ್ ಅಶ್ನಾಸಿ ಯತ್ ಜುಹೋಷಿ ದದಾಸಿ ಯತ್ |
ಯತ್ ತಪಸ್ಯಸಿ ಕೌಂತೇಯ ತತ್ ಕುರುಷ್ವ ಮತ್ ಅರ್ಪಣಮ್ -- ಕೌಂತೇಯಾ, ಏನು ಮಾಡುವೆ, ಏನು
ತಿನ್ನುವೆ, ಏನು ಹೋಮಿಸುವೆ, ಏನು ನೀಡುವೆ, ಏನು ತಪಗೈವೆ ಅದನ್ನು ನನಗೆ ಒಪ್ಪಿಸು.
ಕೃಷ್ಣ ಹೇಳುತ್ತಾನೆ. “ನನಗಾಗಿ ನೀನು ಏನನ್ನೂ ಮಾಡುವುದು ಬೇಡ ಆದರೆ ನಿನಗೋಸ್ಕರ ಏನು
ಮಾಡುತ್ತೀಯೋ ಅದನ್ನು ನನಗೆ ಅರ್ಪಿಸು” ಎಂದು. ನಮ್ಮ ನಿತ್ಯ ಜೀವನದಲ್ಲಿ ಮಾಡಬೇಕಾದ ಅನೇಕ
ಅನಿವಾರ್ಯ ವೃತ್ತಿ ಕಾರ್ಯಗಳಿರುತ್ತವೆ. ಜೀವನ ನಿರ್ವಹಣೆಯ ಕಾಯಕವಿರುತ್ತದೆ. ನಾವು ಅದನ್ನೇ ಭಗವಂತನ
ಪೂಜೆ ಎಂದು ತಿಳಿದು ಮಾಡಬೇಕು. ಇದಕ್ಕೆ ಉತ್ತಮ ದೃಷ್ಟಾಂತ ಧರ್ಮವ್ಯಾಧನ ಕಥೆ. ಮಾಂಸ ವಿಕ್ರಯ ಮಾಡಿ
ಜೀವನ ಸಾಗಿಸುತ್ತಿದ್ದ ಆತನಲ್ಲಿ ಒಂದು ಸಂಕಲ್ಪ ಇತ್ತು. “ಮಾಂಸ ಮಾರುವುದು ನನಗೆ ಆನುವಂಶೀಯವಾಗಿ
ಬಂದ ಅಭ್ಯಾಸ. ಆದ್ದರಿಂದ ನಾನು ಮಾಂಸ ಮಾರುತ್ತೇನೆ, ನನಗೆ ಬದುಕುವುದಕ್ಕೋಸ್ಕರ ಮತ್ತು ನನ್ನ
ತಂದೆತಾಯಿಯನ್ನು ಸಾಕುವುದಕ್ಕೋಸ್ಕರ ನನ್ನ ಪಾಲಿಗೆ ಬಂದ ಈ ವೃತ್ತಿಯನ್ನು ನಾನು ಮಾಡುತ್ತೇನೆ.
ಇದರಿಂದ ನನ್ನ ಬದುಕಿಗೆ ಬೇಕಾದಷ್ಟನ್ನು ಮಾತ್ರ ನಾನು ಗಳಿಸುತ್ತೇನೆ. ಎಂದೂ ವ್ಯವಹಾರದಲ್ಲಿ ಜನರ
ಶೋಷಣೆ ಮಾಡುವುದಿಲ್ಲ” ಎಂದುಕೊಂಡು ಮಾಂಸ ವಿಕ್ರಯ ಮಾಡುತ್ತಿದ್ದ ಆತ. ಇದರಿಂದ ಆತನಿಗೆ ದೊಡ್ಡ
ಜ್ಞಾನಿ ಧರ್ಮವ್ಯಾಧ ಎನ್ನುವ ಹೆಸರು ಬಂತು. ಖುಷಿ ಮುನಿಗಳು ಆತನಿಂದ ಪಾಠ ಕಲಿಯುವ ಪ್ರಸಂಗ ಬಂತು.
ಇದಕ್ಕೆ ಮೂಲ ಕಾರಣ ಆತ ತಾನು ಏನು ಮಾಡುತ್ತಿದ್ದನೋ ಅದನ್ನು ದೇವರ ಪೂಜೆ ಎಂದು ಮಾಡಿದ್ದು ಅಷ್ಟೇ.
ಹೀಗೆ ನಾವು ಮಾಡುವ ವೃತ್ತಿ ಮುಖ್ಯವಾಗುವುದಿಲ್ಲ, ಬದಲಿಗೆ ಅದನ್ನು ಭಗವಂತನ ಪೂಜೆ ಎಂದು ಮಾಡುವ
ಅನುಸಂಧಾನ ಮುಖ್ಯವಾಗುತ್ತದೆ.
ನಿನ್ನ ನಿತ್ಯ ಕರ್ತವ್ಯ ಏನಿದೆ ಅದನ್ನು ಭಗವಂತನಿಗೆ ಅರ್ಪಿಸು. ಅದನ್ನು ಭಗವಂತನ ಪೂಜೆ ಎಂದು ಮಾಡು.
ಭಗವಂತನಿಗಾಗಿ ಭಕ್ಷ್ಯ ಭೋಜ್ಯವನ್ನು ಮಾಡುವ ಅಗತ್ಯವಿಲ್ಲ. ನೀನು ಏನನ್ನು ತಿನ್ನುತ್ತೀಯೋ ಅದನ್ನು
ಭಗವಂತನಿಗೆ ಅರ್ಪಿಸು. ಹೀಗೆ ಮಾಡಿದಾಗ ಭಗವಂತನ ಆರಾಧನೆ ಪ್ರತ್ಯೇಕವಾಗುವುದಿಲ್ಲ ಮತ್ತು
ಕಷ್ಟವಾಗುವುದಿಲ್ಲ. ಭಗವಂತನಿಗಾಗಿ ಯಾವುದೋ ವಿಶೇಷ ಹೋಮ ಹವನ ಮಾಡುವ ಅಗತ್ಯವಿಲ್ಲ. ನೀನು
ಏನು ಹೋಮ ಮಾಡುತ್ತೀಯೋ ಅದನ್ನೇ ‘WN ಅಂತರ್ಗತ ನಾರಾಯಣಾಯ ಇದಮ್ ನ ಮಮಃ' ಎಂದು
ಅರ್ಪಿಸು. ಒಬ್ಬ ಹಸಿದ ವ್ಯಕ್ತಿಯನ್ನು ಕಂಡರೆ ಆತ ತನ್ನ ಹೊಟ್ಟೆಯಲ್ಲಿ ವೈಶ್ವಾನರ ರೂಪಿ ಭಗವಂತನನ್ನು ಹೊತ್ತು
ಬಂದಿದ್ದಾನೆ ಎಂದು ತಿಳಿದು ಆತನೊಳಗಿರುವ ವೈಶ್ವಾನರ ಪ್ರಸನ್ನನಾಗಲಿ ಎಂದು ಆ ವ್ಯಕ್ತಿಯನ್ನು ಸತ್ಕಾರ
ಮಾಡು. ಇದೇ ಭಗವಂತನ ಮಹಾ ಪೂಜೆ ಎನಿಸುತ್ತದೆ.
ಕೃಷ್ಣ ಹೇಳುತ್ತಾನೆ “ಯತ್ತಪಸ್ಯಸಿ ಕೌಂತೇಯ ತತ್ ಕುರುಷ್ಟ ಮದರ್ಪಣಮ್” ಎಂದು. ಇಲ್ಲಿ ತಪಸ್ಸು ಎಂದರೆ
'ಚಿಂತನೆ' ಅಥವಾ ವೃತಾನುಷ್ಟಾನ. ಉದಾಹರಣೆಗೆ “ಸಂಕಷ್ಟಿ'- ಅದನ್ನು ಆಚರಿಸುವಾಗ ಗಣಪತಿ
ಅಂತರ್ಗತನಾದ ಭಗವಂತನಿಗೆ ಅರ್ಪಿತವಾಗಲಿ ಎಂದು ಮಾಡು. ಅಲ್ಲಿ ಯಾವುದೇ ಫಲಾಪೇಕ್ಷೆ ಅಹಂಕಾರ
ಇಟ್ಟುಕೊಳ್ಳಬೇಡ. ಹೀಗೆ ಯಾವ ಆಚರಣೆಯೂ ಕೂಡಾ ಅಂತತಃ ಪರಮ ಪುರುಷನಾದ ಭಗವಂತನಿಗೆ ಅರ್ಪಿತ
ಎಂದು ತಿಳಿದು ಮಾಡಿದಾಗ ಅದು ನಿಜವಾದ ತಪಸ್ಸಾಗುತ್ತದೆ. ಇಲ್ಲಿ ಅರ್ಜುನನಿಗೆ “ನಿನ್ನ ಕರ್ತವ್ಯ ಕರ್ಮವಾಗಿ
ಬಂದಿರುವ ಈ ಯುದ್ಧವನ್ನೂ ಕೂಡಾ ಭಗವಂತನ ಪೂಜೆಯಾಗಿ ಮಾಡು” ಎನ್ನುವ ಸಂದೇಶವನ್ನು ಈ ಶ್ಲೋಕದ
ಮೂಲಕ ಕೃಷ್ಣ ನೀಡಿದ್ದಾನೆ. ಭಾಗವತ ಧರ್ಮ ಅನುಷ್ಠಾನದಿಂದ ಎನು ಫಲ ಎನ್ನುವುದನ್ನು ಕೃಷ್ಣ ಮುಂದಿನ
ಶ್ಲೋಕದಲ್ಲಿ ವಿವರಿಸುತ್ತಾನೆ.
Bibek Debroy (1955–2024)The Bhagavad Gita
(27)
‘O son of Kunti!31 Whatever you do, whatever you partake, whatever you
offer, whatever you donate, whatever you meditate, offer that to me.’