9.34

मन्मना भव मद्भक्तो मद्याजी मां नमस्कुरु ।
मामेवैष्यसि युक्त्वैवमात्मानं मत्परायणः ॥
manmanā bhava madbhakto madyājī māṃ namaskuru |
māmevaiṣyasi yuktvaivamātmānaṃ matparāyaṇaḥ ||
Sri Madhvacharya (1238–1317)Bhagavad Gita Tatparya Nirnaya
9.32–9.34
‘पापादिकारिताश्चैव पुंसां स्वाभाविका अपि। विप्रत्वाद्यास्तत्र पुण्याः स्वाभाव्या एव मुक्तिगाः। यान्ति स्त्रीत्वं पुमांसोऽपि पापतः कामतोऽपि वा। न स्त्रियो यान्ति पुंस्त्वं तु स्वभावादेव याः स्त्रियः। पुंसा सहैव पुन्देहस्थितिः स्याद्वरदानतः। तज्जन्मनि वराः पापजातेभ्यो निजसस्त्रियः। सर्वेषामपि जीवानामन्त्यदेहो यथा निजः। मुक्तौ च निजभावः स्यात् कर्मभोगान्ततोऽपि च’ -इति भविष्यत्पर्ववचनात् पापयोनयः पुण्या इति विशेषणम्॥32-34॥
Swami Sivananda (1887–1963)Bhagavad Gita
34. Fix thy mind on Me; be devoted to Me; sacrifice unto Me; bow down to Me; having thus united thy whole self with Me, taking Me as the Supreme Goal, thou shalt verily come unto Me. COMMENTARY: The whole being of a man should be surrendered to the Lord without reservation. Then there will be a marvellous transformation. He will have the vision of God everywhere. All sorrows and pains will vanish. His mind will be one with Him. He will for ever have his life and being in the Lord alone.
Bannanje Govindacharya (1936–2020)Bhagavad Gita Pravachana
ಮತ್‌ ಮನಾಃ ಭವ ಮತ್‌ ಭಕ್ತಃ ಮತ್‌ ಯಾಜೀ ಮಾಮ್‌ ನಮಸ್ಕುರು | ಮಾಮ್‌ ಏವ ಎಷ್ಯಸಿ ಯುಕ್ತ್ವಾ ಏವಮ್‌ ಆತ್ಮಾನಮ್‌ ಮತ್‌ ಪರಾಯಣಃ -ನನ್ನಲ್ಲೇ ಬಗೆಯಿಡು. ನನ್ನನ್ನು ಅತಿಶಯವಾಗಿ ಪ್ರೀತಿಸು. ನನ್ನನ್ನೇ ಆರಾಧಿಸು.ನನಗೇ ತಲೆಬಾಗು. ಬಗೆಯನ್ನು ಹೀಗೆ ಅಣಿಗೊಳಿಸಿ ನನಗೇ ಮೊರೆ ಹೊಕ್ಕಾಗ ನನ್ನನ್ನೇ ಸೇರುವೆ. ನಾವು ನಮ್ಮ ಜೀವನದಲ್ಲಿ ಸಾಧಿಸಬೇಕಾದ ಒಂದೇ ಒಂದು ಸಂಗತಿ ಎಂದರೆ ಮನಸ್ಸನ್ನು ಭಗವಂತನಲ್ಲಿ ನೆಲೆಗೊಳಿಸುವುದು. ವ್ಯವಹಾರ ಪ್ರಪಂಚದಲ್ಲಿನ ಸಾವಿರಾರು ವಿಚಾರಗಳು ನಮ್ಮನ್ನು ಉದ್ಧಾರ ಮಾಡಲಾರವು. ಅವು ನಮ್ಮನ್ನು ಮರಳಿ ಅಧಃಪಾತಕ್ಕೆ ಕೊಂಡೊಯ್ಯುತ್ತವೆ. ಆದ್ದರಿಂದ ಅವೆಲ್ಲವನ್ನೂ ಬಿಟ್ಟು ಮನಸ್ಸಿನಲ್ಲಿ ಭಗವಂತನನ್ನು ತುಂಬಿಸಬೇಕು. ಭಗವಂತನನ್ನು ನಿರಂತರ ಪ್ರೀತಿಸಬೇಕು. ನೀನು ಎಷ್ಟು ಗಾಢವಾಗಿ ಭಗವಂತನನ್ನು ಪ್ರೀತಿಸುತ್ತೀಯೋ ಅಷ್ಟೇ ಗಾಢವಾಗಿ ಭಗವಂತ ನಿನ್ನನ್ನು ಪ್ರೀತಿಸುತ್ತಾನೆ. ಶ್ರೀ ಸೂಕ್ತದಲ್ಲಿ ಹೇಳುವಂತೆ “ತ್ವನ್ಮಾ ಭಜಸ್ವ ಪದ್ಮಾಕ್ಷಿ, ಯೇನ ಸೌಖ್ಯಂ ಲಭಾಮ್ಯಹಮ್‌”. ನಾನು ನಿನ್ನನ್ನು ಭಜನೆ ಮಾಡುತ್ತೇನೆ, ನೀನು ನನ್ನನ್ನು ಭಜನೆ ಮಾಡು”. ಇಲ್ಲಿ ಭಜನೆ ಎಂದರೆ ಭಕ್ತಿಯಿಂದ ಪ್ರೀತಿಸುವುದು. ನೀನು ಏನು ಪೂಜೆ ಮಾಡುತ್ತೀಯೋ ಅದು ಭಗವಂತನ ಪೂಜೆಯಾಗಿರಲಿ, ನಿನ್ನ ಎಲ್ಲಾ ಪ್ರೀತಿಯಲ್ಲಿ ಭಗವಂತನನ್ನು ಕಾಣು. ನೀನು ಮಾಡುವ ಎಲ್ಲಾ ನಮಸ್ಕಾರ ಭಗವಂತನ ನಮಸ್ಕಾರವಾಗಿರಲಿ. ಹೀಗೆ ಮಾಡಿ ನಿನ್ನ ಮನಸ್ಸನ್ನು ಭಗವಂತನಲ್ಲಿ ನೆಲೆಗೊಳಿಸಿ ಇಡಿಯ ಬದುಕನ್ನು ಭಗವನ್ಮಯ ಮಾಡಿಕೋ- ನಿನಗೆ ಎಲ್ಲಕ್ಕೆಂತ ದೊಡ್ಡ ವಸ್ತು ಭಗವಂತ, ಬದುಕಿನ ಸಾರ ಸರ್ವಸ್ವ ಭಗವಂತ, ನಿರಂತರ ಚಿಂತನೆಯ ವಸ್ತು ಭಗವಂತನಾಗಲಿ. ನಿನ್ನ ಬದುಕಿನ ಒಂದೊಂದು ಕ್ರಿಯೆಯೂ ಭಗವಂತನ ಆರಾಧನೆಯಾಗಲಿ. ಆಗ “ನೀನು ನನ್ನನ್ನು ಸೇರಲೇ ಬೇಕು” ಎನ್ನುತ್ತಾನೆ ಕೃಷ್ಣ. ಹೀಗೆ ಮೋಕ್ಷ ಸಾಧಕವಾದ ಉಪಾಸನೆಯನ್ನು ಕೃಷ್ಣ ವಿವರಿಸಿದ ಅನ್ನುವಲ್ಲಿಗೆ ಒಂಬತ್ತನೆಯ ಅಧ್ಯಾಯ ಮುಕ್ತಾಯವಾಯಿತು. ಇತಿ ನವಮೋ$ಧ್ಯಾಯಃ ಒಂಬತ್ತನೆಯ ಅಧ್ಯಾಯ ಮುಗಿಯಿತು
Bibek Debroy (1955–2024)The Bhagavad Gita
‘There is no need to repeat37 about pure brabmanas and devoted royal sages.38 This earth is temporary and leads to unhappiness. Therefore, having attained,39 worship me.’ (34) ‘With mind immersed in me, become my devotee, my worshipper and one who offers obeisance to me. In this way, with your atman united in me as the refuge, you will attain me alone.’