न च मत्स्थानि भूतानि पश्य मे योगमैश्वरम् ।
भूतभृन्न च भूतस्थो ममात्मा भूतभावनः ॥
na ca matsthāni bhūtāni paśya me yogamaiśvaram |
bhūtabhṛnna ca bhūtastho mamātmā bhūtabhāvanaḥ ||
Sri Madhvacharya (1238–1317)Bhagavad Gita Tatparya Nirnaya
‘विष्णुगान्यप्यतत्स्थानि भूतान्येष ह्यसङ्गतः’ इति च।
ममात्मा - मम देह एव। तदनन्यत्वात्। देहस्याचेतनत्वाशङ्का निवृत्तये ‘ममात्मा’ इत्याह॥05॥
Swami Sivananda (1887–1963)Bhagavad Gita
5. Nor do beings exist in Me (in reality): behold My divine Yoga, supporting all beings, but
not dwelling in them, is My Self, the efficient cause of beings.
Sri Vishwesha Tirtharu (1931–2019)Gitasaroddhara
9.4–9.5 · ಪ್ರಪಂಚ ಪರಮಾತ್ಮರ ಸಂಬಂಧ
ಪ್ರಪಂಚ-ಪರಮಾತ್ಮರ ಸಂಬಂಧ
ಒಂಬತ್ತನೆಯ ಅಧ್ಯಾಯದಲ್ಲಿ ಪುನಃ ಭಗವನ್ಮಹಿಮೆಯ ನಿರೂಪಣೆ ಇದೆ.
ಇದು ಭಕ್ತಿಯ ಪ್ರಚೋದನೆಗೆ ಬಹಳ ಅನುಕೂಲವಾಗುವುದು. ಪರಮಾತ್ಮನ
ಮಹಿಮೆಯನ್ನು ಚಿಂತಿಸಿದಷ್ಟೂ ನಮ್ಮ ಅಂತಃಕರಣವು ಭಕ್ತಿಯಿಂದ ಅವನ
ಪಾದಗಳಲ್ಲಿ ವನಮ್ರವಾಗುವುದು. ಸಕಲಪ್ರಾಣಿಗಳಿಗೂ ಆಶ್ರಯನಾಗಿ ವಿಶ್ವದ
ಎಲ್ಲ ಪ್ರವೃತ್ತಿ, ಸ್ಪಂದಗಳಿಗೂ ಅವಶ್ಯವೆನಿಸಿದ ಶಕ್ತಿ ಸ್ರೋತಸ್ಸಿನ ಸೆಲೆಯಾಗಿರುವ
ಪರಮಾತ್ಮನೇ ಜಗತ್ತಿನ ಅವಲಂಬನವಾಗಿದ್ದಾನೆ. ಅವನದು ಸ್ವತಂತ್ರ
ಸಾರ್ವಭೌಮವ್ಯಕ್ತಿತ್ತ್ವವಾಗದೆ. ಜಗತ್ತಿಗೆ ಅವನು ಆಧಾರನೆನಿಸಿದರೂ ಜಗತ್ತು
ಅವನಿಗೆ ಏನೂ ಅಲ್ಲ ಪ್ರಪಂಚದಿಂದ ಅವನು ಪಡೆಯಬೇಕಾದ ಅಂಶವೇನೂ
ಇಲ್ಲ. ಸ್ವತಂತ್ರವೂ ಪರಿಪೂರ್ಣವೂ ಆದ ಶಾಶ್ವತ ವ್ಯಕ್ತತ್ವವನ್ನು ಹೊಂದಿದ
ಭಗವಂತನಿಗೆ ಜಗತ್ತಿನ ಆಶ್ರಯ, ಅವಲಂಬನವೇಕೆ?
ಮತ್ಸ್ಥಾ ನಿಸರ್ವಭೂತಾನಿ ನಚಾಹಂ ತೇಷ್ಟವಸ್ಥಿ ತಃ।
ಸರ್ವರೂತನ್ನಲ್ಲಿದ್ದಾರೆ. ತಾನು ಮಾತ್ರ ಅವರನ್ನು ಆಶ್ರಯಿಸಿಕೊಂಡಿಲ್ಲ. ಈ
ಶ್ಲೋಕದ ಮುಂದಿನ ಭಾಗದಲ್ಲಿರುವ ವಾಕ್ಯವು ಸ್ವಲ್ಪ ಗೊಂದಲಕ್ಕೆ ಎಡೆ ಕೊಟ್ಟಿದೆ.
ಸರ್ವಪ್ರಾಣಿಗಳೂ ಪರಮಾತ್ಮನನ್ನು ಆಶ್ರಯಿಸಿವೆ ಎಂದು ಪೂರ್ವಾರ್ಧದಲ್ಲಿ
ಹೇಳಿ, ಉತ್ತರಾರ್ಧದಲ್ಲಿ ಈ ಯಾವ ಪ್ರಾಣಿಗಳೂ ಪರಮಾತ್ಮನಲ್ಲಿ ಇಲ್ಲವೆನ್ನುವ
ಅರ್ಥಪ್ರತೀತಿಯಾಗುವಂತೆವಾಕ್ಕರಚನೆಯಾಗಿದೆ.
ಮತ್ಸ್ಟಾ ನಿ ಸರ್ವಭೂತಾನಿ... [
ನಚಮತ್ಸ್ಥಾನಿ ಭೂತಾನಿ... |
ಎಂದು ಈಶ್ವರ - ಜಗತ್ ಸಂಬಂಧದ ಬಗ್ಗೆ ಪರಸ್ಪರ ವಿರೋಧಿಗಳಂತೆ
ತೋರುವ ಮಾತುಗಳನ್ನು ಹೇಳಿ,
ಪಶ್ಯ ಮೇ ಯೋಗಮೈಶ್ವರಂ [
""ಸರ್ವ ಪ್ರಾಣಿಗಳು ನನ್ನಲ್ಲಿದ್ದೂ ಇಲ್ಲದಂತಿರುವ ಅದ್ಭುತವಾದ ನನ್ನ
ಈಶ್ವರೀ ಶಕ್ತಿಯನ್ನು ನೋಡು'' ಎಂದು ಪರಮಾತ್ಮನು ಅಪ್ಪಣೆ ಕೊಡಿಸುತ್ತಾನೆ.
ಇದರ ಭಾವಾರ್ಥವನ್ನು ತಿಳಿದುಕೊಳ್ಳುವುದು ಸ್ವಲ್ಪ ಕ್ಲಿಷ್ಟವೆನಿಸಬಹುದು.
ಪ್ರಪಂಚವು ಮಿಥ್ಯೆಯೆಂದು ನಿರೂಪಿಸಲು ಈ ವಾಕ್ಯವು ಹೊರಟಿದೆ ಎಂದು
ಕೆಲವರು ಅರ್ಥ ನಿರೂಪಣೆಯನ್ನು ಮಾಡಿದ್ದಾ ೆ. ಒಂದು ವಸ್ತುವು ಒಂದು
ಕಡೆಯಲ್ಲಿ ಇದೆಯೆಂದೂ ಇಲ್ಲವೆಂದೂ ಹೇಳಿದಲ್ಲಿ ಅದು ಸುಳ್ಳೆಂದೇ
ಅರ್ಥವಾಗುತ್ತದೆ. ಕಲ್ಪಿತವಾದ ವಸ್ತುವು ನಮ್ಮ ಸಾಮಾನ್ಯ ಪ್ರತೀತಿಯ
ದೃಷ್ಟಿಯಿಂದ ಅಲ್ಲಿದ್ದರೂ ವಾಸ್ತವ ದೃಷ್ಟಿಯಿಂದ ಅಲ್ಲಿ ಇರುವುದಿಲ್ಲ. ಹಗ್ಗದಲ್ಲಿ
ಹಾವು ಕಾಣಿಸಬಹುದು. ಆದರೆವಾಸ್ತವವಾಗಿ ಹಾವು ಅಲ್ಲಿರುವುದಿಲ್ಲ. ಅದರಂತೆ
ಎಲ್ಲಕಡೆ ನೆಲೆಸಿರುವ ಬ್ರಹ್ಮವಸ್ತುವಿನಲ್ಲಿ ಜಗತ್ತು ಕಾಣುತ್ತಿದ್ದರೂ ಕಾಲ್ಪನಿಕವಾದ
ಈ ವಿಶ್ವವು ವಾಸ್ತವವಾಗಿ ಅಲ್ಲಿರುವುದಿಲ್ಲವೆಂಬ ವಿಚಾರವನ್ನು ಸಾರಲು ಈ
ಶ್ಲೋಕವು ಪ್ರವೃತ್ತವಾಗಿದೆ ಎಂದು ಕೆಲವರ ಅಭಿಪ್ರಾಯವಾಗಿದೆ.
ಈ ವಾಕ್ಯದ ಪೂರ್ವಾವರಗಳನ್ನು ಪರ್ಯಾರೋಚಿಸಿದರೆ ಈ ಅರ್ಥದ
ಅನೌಚಿತ್ಯವು ನಮಗೆ ಹೊಳೆಯದಿರಲಾರದು. ಜಗತ್ತು ಪರಮಾತ್ಮನಲ್ಲಿ
ಆಶ್ರಯಿಸಿಕೊಂಡಿದ್ದರೂ ಅದು ಪರಮಾತ್ಮನಲ್ಲಿ ಇಲ್ಲವೆನ್ನುವ ವಿರೋಧಾ
ಭಾಸದ ತಾತ್ಪರ್ಯವನ್ನು ವಿವರಿಸಲು ಉದಾಹರಣೆಯನ್ನು ಮುಂದಿನ
ವಾಕ್ಯದಲ್ಲಿ ನೀಡಲಾಗುತ್ತದೆ. ವಾಯು ಅಥವಾ ಆಕಾಶವು ಜಗತ್ತಿನ ನಾನಾ
ಪದಾರ್ಥಗಳನ್ನು ಸ್ಪರ್ಶಿಸಿದರೂ ಅವುಗಳಿಗೆ ಆಪದಾರ್ಥಗಳ ಗುಣಧರ್ಮಗಳ
ಸಂಪರ್ಕವಾಗುವುದಿಲ್ಲ. ವಾಯು ಮತ್ತು ಆಕಾಶಗಳು ನಿರ್ಲಿಪ್ತಗಳೇ
ಆಗಿರುವವು. ಅದರಂತೆ ಸಕಲ ಪ್ರಪಂಚದ ಆಧಾರನಾಗಿ ಎಲ್ಲ ವಸ್ತುಗಳನ್ನು
ವ್ಯಾಪಿಸಿದ್ದರೂ ಈ ಜಡಧರ್ಮಗಳು ಪರಮಾತ್ಮನಿಗೆ ಅಂಟುವುದಿಲ್ಲ. ಅವನು
ಅಸಂಗನಾಗಿರುವನು. ಪರಮಾತ್ಮನು ಪ್ರಪಂಚಕ್ಕೆ ಆಧಾರನಾದರೂ
ನಿರ್ಲಿಪ್ತನಾದುದರಿಂದ ಪ್ರವಂಚವು ಅವನಲ್ಲಿಲ್ಲವೆನ್ನಲಾಗುತ್ತದೆ ಎಂದು ಈ
ವಿರೋಧಾಭಾಸವನ್ನು ಸರಳವಾಗಿ ಪರಿಹರಿಸಲಾಗಿದೆ. ಅದ್ವೈತ ಸಂಪ್ರದಾಯದ
ವ್ಯಾಖ್ಯಾನಕಾರರೂ ಪರಮಾತ್ಮನ ನಿರ್ಲಿಪ್ತತೆಯ ಸಮರ್ಥನೆಗಾಗಿಯೇ ಈ
ಉದಾಹರಣೆಯನ್ನು ನಿರೂಪಿಸಲಾಗಿದೆ ಎನ್ನುವುದನ್ನೊಪ್ಪಿದ್ದಾರೆ. ಜಗತ್ತು
ಬ್ರಹ್ಮನಲ್ಲಿದ್ದರೂ ಅದು ಮಿಥ್ಯೆ ಎನ್ನುವ ಅಭಿಪ್ರಾಯಕ್ಕೆ ಈ ಉದಾಹರಣೆಯು
ವಿಸಂಗತವಾಗುತ್ತದೆ. ಆಕಾಶದಲ್ಲಿ ಚಲಿಸುವ ವಾಯುವು, ಹಗ್ಗದಲ್ಲಿ ಹಾವಿನಂತೆ
ಆಕಾಶದಲ್ಲಿ ಕಲ್ಪಿತವೆಂದು ಯಾವ ದಾರ್ಶನಿಕನೂ ಹೇಳಲಾರ. ಅಂತೂ ಆಕಾಶ
ವಾಯುಗಳಂತೆ ಅಥವಾ ವಾಯು ಹಾಗೂ ಇತರ ಪದಾರ್ಥಗಳಂತೆ ಬ್ರಹ್ಮ
ಹಾಗೂ ಜಗತ್ತುಗಳಿಗೆ ಅನ್ಯೋನ ಸಂಬಂಧವಿದ್ದರೂ ಪರಸ್ಪರವಾಗಿ
ಗುಣಧರ್ಮಗಳ ಲೇಪವಿಲ್ಲ: ವೆನ್ನುವುದೇ ಈ ವಿರೋಧಾಭಾಸದ ಭಾವಾರ್ಥ
ವೆನ್ನುವುದು ಈ ಉದಾಹರಣೆಯಿಂದ ಸುಸ್ಪಷ್ಟವಾಗುತ್ತದೆ.
ಪಶ್ಯ ಮೇ ಯೋಗಮೈಶ್ವರಂ ।
ಎಂದು ಜಗತ್ತು ತನ್ನಲ್ಲಿದ್ದರೂ ಇಲ್ಲದಂತಿರುವುದು ತನ್ನ ಈಶ್ವರಶಕ್ತಿಯ
ಪ್ರಭಾವವೆಂದು ಶ್ರೀಕೃಷ್ಣನು ಹೇಳಿದ್ದಾನೆ. ಜಗತ್ತು ಅಸತ್ಯವಾಗಿದ್ದು ಬ್ರಹ್ಮನಲ್ಲಿ
ಕಲ್ಪಿತವಾಗಿದ್ದರೆ, ಅದರ ಅಸ್ತಿತ್ವ ಅಥವಾ ಅಭಾವಗಳಿಗೆ ಈಶ್ವರೀ ಶಕ್ತಿಯ
ಅವಶ್ಯಕತೆ ಏಕೆ? ಕಲ್ಪನೆಯು ಸಹಜವಾಗಿ ಅಜ್ಞಾನಮೊದಲಾದ ದೋಷಗಳಿಂದ
ಉಂಟಾಗುವುದು. ಹಗ್ಗದಲ್ಲಿ ಹಾವಿನ ಕಲ್ಪನೆಯಾಗಲು ಯಾರದಾದರೂ
ಪ್ರಭುಶಕ್ತಿಯ ಅವಶ್ಯಕತೆ ಇದೆಯೆ? ಜಗತ್ತಿನ ಈ ಸ್ಥಿತಿಗೆ ಈಶ್ವರಶಕ್ತಿಯ
ಹಿನ್ನೆಲೆಯನ್ನು ಹೇಳಿರುವುದರಿಂದ ಜಗತ್ತು ಕಲ್ಪಿತವೆನ್ನುವ ಅಭಿಪ್ರಾಯದಿಂದ ಈ
ಶ್ಲೋಕವು ಪ್ರವೃತ್ತವಾಗಿಲ್ಲವೆಂದು ಸ್ಪಷ್ಟವಾಗುತ್ತದೆ. ಜಗತ್ತನ್ನು ವ್ಯಾಪಿಸಿ ಆದರ
ಆಧು ರನೆನಿಸಿದರೂ ಅದರ ಯಾವುದೇ ಸ ಸಪರ್ಕದೋಡವನ್ನು | ತಾನು
ಹೊಂದದಿರಲುತನ್ನ ಶಸ್ವರರ ಕ್ತ ಯೇಕಾರಣನೆಂ ದು ಭಗವಂತನು ಹೇಳಿದ್ದಾನೆ
ಎಂಬುದೇ ಈ ಸಂದರ್ಭಕ್ಕೆ ಉಚಿತವಾದ ಅರ್ಥವಾಗಿದೆ...
ಸ್ನ
Bannanje Govindacharya (1936–2020)Bhagavad Gita Pravachana
ನಚ ಮತ್ ಸ್ಥಾನಿ ಭೂತಾನಿ ಪಶ್ಯ ಮೇ ಯೋಗಮ್ ಐಶ್ವರಮ್
ಭೂತಭೃತ್ ನ ಚ ಭೂತಸ್ಥಃ ಮಮ ಆತ್ಮಾ ಭೂತಭಾವನಃ - ನನ್ನಲ್ಲಿ ಎಲ್ಲಾ ಉಂಟು; ನನಗಿಲ್ಲ ಯಾವುದರ
ಅಂಟು. ನೋಡು-ಮಿಗಿಲಾದ ನನ್ನ ಮಹಿಮೆಯನ್ನು. ನನ್ನ ರೂಪ ಇವುಗಳಿಗೆ ರೂಪು ಕೊಟ್ಟಿದೆ. ಹೊತ್ತು ಸಲಹಿದೆ.
ಆದರೂ ಇವುಗಳಲ್ಲಿಲ್ಲ.
ಹಿಂದಿನ ಮತ್ತು ಈ ಶ್ಲೋಕದಲ್ಲಿ ಕೃಷ್ಣ ಹೇಳುವ ವಿಚಾರವನ್ನು ನಾವು ಗಮನವಿಟ್ಟು ನೋಡಬೇಕು. ಮೇಲ್ನೋಟಕ್ಕೆ
ಇವು ಒಂದೊಕ್ಕೊಂದು ವಿರುದ್ಧವಾಗಿರುವ ಒಗಟಿನ ಹೇಳಿಕೆಯಂತೆ ಕಾಣುತ್ತದೆ. ಕೃಷ್ಣ ಹೇಳುವ ಮಾತು ಹೀಗಿದೆ
ನನ್ನ ಸಾಮರ್ಥ್ಯವನ್ನು ತಿಳಿ, ನಾನು ಎಲ್ಲವುದರಲ್ಲೂ ಇದ್ದೇನೆ-ಆದರೆ ಯಾವುದರಲ್ಲೂ ಇಲ್ಲ. ಎಲ್ಲವೂ ನನ್ನಲ್ಲಿದೆ
ಆದರೆ ಯಾವುದೂ ನನ್ನಲ್ಲಿಲ್ಲ. ಇದು ಭಗವಂತನ ಅಚಿಂತ್ಯ ಶಕ್ತಿಯ ಅನುಸಂಧಾನ. ಭಾಗವತದಲ್ಲಿ
ಹೇಳುವಂತೆ “ನಾವು ಯಾವುದನ್ನು ಪ್ರಪಂಚದಲ್ಲಿ ವಿರೋಧಾತ್ಮಕ(೦೦78610107/) ಎನ್ನುತ್ತೇವೋ ಅವು ಶುಭ
ಧರ್ಮವಾದಲ್ಲಿ ಭಗವಂತನಲ್ಲಿ ಅನ್ವಯವಾಗುತ್ತವೆ'. ಈ ವಿರುದ್ಧವಾದ ಧರ್ಮವನ್ನು ಹೇಳುವುದರ ಮೂಲಕ ಇಲ್ಲಿ
ಭಗವಂತ ಏನನ್ನು ತಿಳಿಸುತ್ತಿದ್ದಾನೆ.. ಎಂದರೆ. * ಎಲ್ಲವೂ ನನ್ನಲ್ಲಿದೆ. ಆದರೆ. ಯಾವ
ಮಮಕಾರವೂ(1॥300/7970 ನನಗಿಲ್ಲ”. ಅಂದರೆ ಇದು ಭಗವಂತನ ನಿರ್ಲಿಪ್ತತೆಯನ್ನು ಸೂಚಿಸುತ್ತದೆ. ಆತ
ಯಾವುದನ್ನೂ ಅಂಟಿಸಿಕೊಳ್ಳುವುದಿಲ್ಲ. ಆತ ಯಾವುದನ್ನೂ ಆಶ್ರಯಿಸಿಕೊಂಡಿಲ್ಲ ಮತ್ತು ಯಾವುದರ ಲೇಪವೂ
ಆತನಿಗಿಲ್ಲ. ಕೃಷ್ಣ ಹೇಳುತ್ತಾನೆ: “ಇದು ನನ್ನ ಈಶ್ವರೀಯ ಶಕ್ತಿ” ಎಂದು. ಇದು ಭಗವಂತನ ಸರ್ವಸಮರ್ಥತೆ.
ಈ ವಿಚಾರವನ್ನು ಕೃಷ್ಣ ಇನ್ನೊಮ್ಮೆ ಸಂಕ್ಷೆಪ್ತ(೦ಗ5॥)ವಾಗಿ “ಭೂತಭೃತ್ ನಚ ಭೂತಸ್ಥಃ” ಎಂದು ವಿವರಿಸುತ್ತಾನೆ.
ಇಲ್ಲಿ 'ನಚ' ಎನ್ನುವ ಪದ ಹೊಸ್ತಿಲಲ್ಲಿ ಇಟ್ಟ ದೀಪದಂತೆ ಎರಡು ಪದಗಳ ನಡುವೆ ಬಳಕೆಯಾಗಿದೆ. ಇದರರ್ಥ
ಹೀಗೆ: “ನಾನು ಭೂತಭೃತ್-ಎಲ್ಲಾ ಜೀವಜಾತಗಳನ್ನು ಧರಿಸಿದ್ದೇನೆ ಮತ್ತು ನಚಭೂತಭೃತ್-ಏನನ್ನೂ ಧರಿಸಿಲ್ಲ;
ನಾನು ಭೂತಸ್ಥ-ಎಲ್ಲಾ ಜೀವಜಾತಗಳೂ ನನ್ನಲ್ಲಿವೆ ಮತ್ತು ನಾನು ನಚಭೂತಸ್ಥ-ಯಾವುದರಲ್ಲೂ ನಾನಿಲ್ಲ”.
ಕೃಷ್ಣ ಹೇಳುತ್ತಾನೆ: “ಮಮ ಆತ್ಮಾ ಭೂತಭಾವನಃ” ಎಂದು. ಅಂದರೆ ಈ ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರ-
ನಿಯಮನ-ಜ್ಞಾನ-ಅಜ್ಞಾನ-ಬಂಧ-ಮೋಕ್ಷ ಎಲ್ಲವೂ ಭಗವಂತನಿಂದ. ಆತ ಜ್ಞಾನಾನಂದ ಸ್ವರೂಪ. ಭಗವಂತ
ಬೇರೆ ಆತನ ದೇಹ ಬೇರೆ ಅಲ್ಲ; ಆತನ ಗುಣ ಕ್ರಿಯೆಗಳು ಬೇರೆ ಅಲ್ಲ. ಅವೆಲ್ಲವೂ ಅಖಂಡ. ಇದನ್ನು
ಪಾಂಚಭೌತಿಕ ಮತ್ತು ತ್ರೈಗುಣ್ಯದ ಪರಿದಿಯಲ್ಲಿ ನಾವು ಕಲ್ಪಿಸಲು ಸಾಧ್ಯವಿಲ್ಲ.
ಭಗವಂತ ಹೇಗೆ ಎಲ್ಲಾ ಕಡೆ ತುಂಬಿದ್ದಾನೆ ಎನ್ನುವುದನ್ನು ಕೃಷ್ಣ ಒಂದು ದೃಷ್ಟಾಂತದ ಮೂಲಕ ಮುಂದಿನ
ಶ್ಲೋಕದಲ್ಲಿ ವಿವರಿಸುತ್ತಾನೆ.
Bibek Debroy (1955–2024)The Bhagavad Gita
(5)
‘Witness my divine yoga. Again, the beings are not established in me.6 My
atman holds up the beings and sustains the beings, but I am not established
in the beings.’