10.41

यद्यद्विभूतिमत्सत्त्वं श्रीमदूर्जितमेव वा ।
तत्तदेवावगच्छ त्वं मम तेजोंऽशसम्भवम् ॥
yadyadvibhūtimatsattvaṃ śrīmadūrjitameva vā |
tattadevāvagaccha tvaṃ mama tejoṃ'śasambhavam ||
Sri Madhvacharya (1238–1317)Bhagavad Gita Tatparya Nirnaya
मम तेजोंऽशेन संयुक्तं भवति॥41॥
Swami Sivananda (1887–1963)Bhagavad Gita
41. Whatever being there is that is glorious, prosperous or powerful, that know thou to be a manifestation of a part of My splendour.
Sri Vishwesha Tirtharu (1931–2019)Gitasaroddhara
ಭಗವಂತನ ವಿಭೂತಿಗಳು
ಭಗವಂತನ ವಿಭೂತಿಗಳು ಹತ್ತನೆಯ ಅಧ್ಯಾಯದಲ್ಲಿ ಭಗವದ್ವಿಭೂತಿಗಳ ವಿಸ್ತಾರವಾದ ವರ್ಣನೆ ಯಿದೆ. ಪರಮಾತ್ಮನು ಜಗತ್ತಿನ ಕಣಕಣಗಳಲ್ಲಿಯೂ ವ್ಯಾಪಿಸಿರುವುದರಿಂದಲೇ ಅವುಗಳಲ್ಲಿ ವಿವಿಧ ಕ್ರಿಯೆ ಪರಿಣಾಮಗಳು ಸಂಭವಿಸುತ್ತವೆ. ಆದುದರಿಂದ ಸರ್ವಪ್ರವರ್ತಕನಾಗಿ ಪರಮಾತ್ಮನು ಎಲ್ಲವಸ್ತುಗಳಲ್ಲಿ ನೆಲೆಸಿದ್ದರೂ ೆಲ ವಿಶಿಷ್ಟ ವಸ್ತುಗಳಲ್ಲಿ ಪರಮಾತ್ಮನ ಸನ್ನಿಧಾನವು ಅತಿಶಯಿತವಾಗಿದೆ. ಹೆಚ್ಚು ಶಕ್ತಿಶಾಲಿಯೂ ಪವಿತ್ರವೂ ಲೋಕೋಪಕಾರಕವೂ ಆದ ಗುಣಶಾಲಿವಸ್ತುಗಳಲ್ಲಿ ಪರಮಾತ್ಮನ ಸನ್ನಿಧಾನವು ಹೆಚ್ಚಿಗಿರುವುದು. ರೇಡಿಯೋ ಯಂತ್ರಗಳ ಶಕ್ತಿ ಯೋಗ್ಯತೆಗಳನ್ನನುಸರಿಸಿ ಅವುಗಳ ಶಬ್ಧಾಭಿ ವ್ಯಕ್ತಿಯ ತಾರತಮ್ಯವಿರುವಂತೆ ವಶಿಷ್ಟ ವಸ್ತುವಿನಲ್ಲಿ ಭಗವಂತನ ಸನ್ನಿಧಾನವು ಅಧಿಕವಾಗಿರುವುದು. ಶ್ರೇಷ್ಠ ವಸ್ತುಗಳಲ್ಲಿರುವ ಭಗವಂತನ ಈ ರೂಪವಿಶೇಷಗಳನ್ನು ಅರಿಯುವುದನ್ನೇ ವಿಭೂತಿದರ್ಶನವೆನ್ನಲಾಗುತ್ತದೆ. ಒಮ್ಮೆ ದೇವತೆಗಳು ಭಗವದುಪಾಸನೆಗಾಗಿ ಉತ್ತಮವಾದ ಪ್ರತಿಮೆಯೊಂದನ್ನು ಹುಡುಕುತ್ತಿದ್ದರು. ಹುಡುಕುತ್ತಿದ್ದುದು ಕಲ್ಲಿನ ಮೂರ್ತಿಯನ್ನಲ್ಲ, ಪರಮಾತ್ಮನಿಗೆ ಅಧೀನವಾಗಿರಬಹುದಾದ, ದೋಷ ವಿಪರ್ಯಾಸಗಳಿಂದ. ದೂರವಾದ ಒಂದು ಮಹಾಚೇತನವನ್ನು ಅವರು ಅರಸುತ್ತಿದ್ದರು. ಸ್ವಚ್ಛವಾದ. ಕನ್ನಡಿಯಲ್ಲಿಯೇ ಮುಖವು ಪ್ರತಿಬಿಂಬಿತವಾಗುವಂತೆ ದೋಷದ ಲವಲೇಶವೂ ಇಲ್ಲದ ನಿರ್ಮಲ ಚೇತನದಲ್ಲಿಯೇ ಪುರುಷೋತ್ತಮನ ಸನ್ನಿಧಾನವಿರುವುದರಿಂದ ಅಂತಹ ಶ್ರೇಷ್ಠಾತ್ಮನೇ ಭಗವದುಪಾಸನೆಗೆ ಅನುಕೂಲವಾದ ಪ್ರತಿಮೆಯೆಂದು ದೇವತೆಗಳ ವಿಚಾರವಾಗಿತ್ತು. ಆದರೆ ಯಾವ ವ್ಯಕ್ತಿಯನ್ನು ಪರೀಕ್ಷಿಸಿದರೂ ಅದು ದೋಷ ದೌರ್ಬಲ್ಯಗಳ ನೆಲೆಯಾಗಿತ್ತು. ಆಸುರೀ ಶಕ್ತಿಗಳು ಎಲ್ಲರ ಹೃದಯಗಳನ್ನು ಪ್ರವೇಶಿಸಿ ಅವುಗಳನ್ನು ಕಲುಷಿತಗೊಳಿಸುತ್ತಿದ್ದವು. ಈ ದುಃಶಕ್ತಿಗಳ ಪ್ರವೇಶಕ್ಕೆ ಎಡೆಯೇ ಇಲ್ಲದ ಹೃದಯವು ವಾಯುದೇವರದೊಂದೇ ಆಗಿತ್ತು. ವಾಯುದೇವರಮೇಲೆ ಅಭಿಯೋಗಮಾಡಲೆಳಸಿದ ಆಸುರೀ ದುಶಕ್ತಿಗಳೆಲ್ಲ ಕಲ್ಲಿನ ಗೋಡೆಗೆ ಅಪ್ಪಳಿಸಲಾದ ಮಣ್ಣು ಹೆಂಟೆಗಳಂತೆ ಶೀರ್ಣವಿಶೀರ್ಣ ವಾದವು. ಈ ದೈತ್ಯಶಕ್ತಿಯ ಗರ್ವಪರ್ವತಗಳನ್ನು ತನ್ನ ವಜ್ರಸತ್ತ್ವದಿಂದ ಭಿನ್ನವಿಭಿನ್ನಗೊಳಿಸಿ ತನ್ನ ಅಪ್ರತಿಹತ ಸಾತ್ತ್ವಿಕ ತೇಜಸ್ಸಿನಿಂದ ಬೆಳಗಿದ ಶ್ರೀವಾಯುದೇವರಲ್ಲಿ ಪರಮಾತ್ಮನ ಪೂರ್ಣ ಸಾನ್ನಿಧ್ಯವನ್ನು ಗುರುತಿಸಿ ತಮ್ಮ ಉಪಾಸನೆಗೆ ಪ್ರತಿಮೆಯಾಗಿ ವಾಯುದೇವರನ್ನೇ ಆರಿಸಿದರೆಂದು ಉಪನಿಪತ್ತಿ ನಲ್ಲಿ ಕಥೆಯಿದೆ. ಎಲ್ಲಿ ಗುಣಾತಿಶಯವಿದೆಯೋವಎಲ್ಲಿ ಸತ್ತ್ವಸೌಂದರ್ಯಗಳು ಅಧಿಕವಾಗಿವೆ: ಮೋರಿವುಳೆಲ್ಲದೈವೀಶಕ್ತಿಯ ವಿಶೇಷಿದ್ರವೆ ಸತ್ತವೆಂಬ ಪ್ರಮೇಯವೇ ಹತ್ರ ನೇ ಅಧ್ಯಾಯದಲ್ಲಿ ನಿರೂಪಿತವಾಗಿದೆ. ಪ್ರಪಂಚದಲ್ಲಿರುವ ಬೇರೆಬೇರೆ ಗುಂಪಿನ ವಿಶಿಷ್ಟ ವಸ್ತುವನ್ನುಲ್ಲೇಖಿಸಿ ಅಲ್ಲಿ ಪರಮಾತ್ಮನ ವಿಶೇಷ ವಿಭೂತಿ ಇರುವುದನ್ನು ವರ್ಣಿಸಿ, ಯದ್ಯದ್‌ ವಿಭೂತಿಮತ್‌ ಸತ್ತ್ವಂ ಶ್ರೀಮದೂರ್ಜಿತಮೇವವಾ। ತತ್ತದೇವಾವಗಚ್ಛ ತ್ವಂ ಮಮ ತೇಜೋಶಂಶಸಂಭವಮ್‌ ॥ ಎಂದು ಮಥಿತಾರ್ಥವನ್ನು ಕೊನೆಗೆ ಹೇಳಲಾಗಿದೆ.
Bannanje Govindacharya (1936–2020)Bhagavad Gita Pravachana
ಯತ್‌ ಯತ್‌ ವಿಭೂತಿ ಮತ್‌ ಸತ್ತ್ವಮ್‌ ಶ್ರೀಮತ್‌ ಊರ್ಜಿತಮ್‌ ಏವ ವಾ | ತತ್‌ ತತ್‌ ಏವ ಅವಗಚ್ಛ ತ್ವಮ್‌ ಮಮ ತೇಜಃ ಅಂಶ ಸಂಭವಮ್‌-'ುಂಪಿನಲ್ಲಿ ಮಿಗಿಲಾದದ್ದು , ಸಿರಿಯಲ್ಲಿ ಹಿರಿದಾದದ್ದು. ಎತ್ತರದಲ್ಲಿ ಮೆರೆದದ್ದು ಯಾವುದೆಲ್ಲಾ ಇದೆಯೋ ಅದೆಲ್ಲವೂ ನನ್ನ ಹಿರಿಮೆಯ ಬೆಳಕಿನ ಕಿಡಿಯಿಂದ ಮೂಡಿಬಂದದ್ದು ಎಂದು ತಿಳಿ. ಒಟ್ಟಿನಲ್ಲಿ ಒಬ್ಬ ವ್ಯಕ್ತಿಯಲ್ಲಿ, ಒಂದು ವಸ್ತುವಿನಲ್ಲಿ, ಇನ್ನೊಬ್ಬರಲ್ಲಿಲ್ಲದ ಯಾವ ವಿಶಿಷ್ಟ ಗುಣವಿದೆಯೋ ಅದು ಭಗವಂತನ ಹಿರಿಮೆಯ ಒಂದು ಬೆಳಕಿನ ಕಿಡಿ. ಇದು ಭಗವಂತನ ಅನಂತ ತೇಜಸ್ಸಿನ ಒಂದು ತುಣುಕು.
Bibek Debroy (1955–2024)The Bhagavad Gita
(41) ‘Know that whatever object is glorious, prosperous or indeed extremely powerful, that has originated from a part of my energy.’